ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನಾಯಕತ್ವ ಗುಣ-ಸದೃಢ ಸಮಾಜ ನಿರ್ಮಿಸಲು ಯುವ ಸಂಸತ್ ಸಹಕಾರಿ-ಶಿವನಗೌಡ 

ಶಿವಮೊಗ್ಗ : ಮಕ್ಕಳಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ, ನಾಯಕತ್ವ ಗುಣ, ಸಾಮಾಜಿಕ ಸಮಸ್ಯೆಗಳ ಅರಿವು ಮೂಡಿಸಿ, ಸದೃಢ ಸಮಾಜ ನಿರ್ಮಿಸಲು ಸಹಕರಿಸುವ ಉದ್ದೇಶದಿಂದ ಯುವ ಸಂಸತ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಶಿವನಗೌಡ ತಿಳಿಸಿದರು.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಕರ್ನಾಟಕ ಸರ್ಕಾರದ ಸಚಿವಾಲಯ ಬೆಂಗಳೂರು ಹಾಗೂ ಜಿಲ್ಲಾ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಸುಮಾರು ವರ್ಷಗಳಿಂದ ಯುವ ಸಂಸತ್ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ನಮ್ಮ ಆಡಳಿತ ವ್ಯವಸ್ಥೆ ಕುರಿತು ಸಾಕ್ಷರತೆ ಒದಗಿಸುತ್ತಾ ಬಂದಿದೆ ಹಾಗೂ ವಿದ್ಯಾರ್ಥಿಗಳಲ್ಲಿ ವ್ಯವಸ್ಥೆಯನ್ನು ಪ್ರಶ್ನಿಸುವ, ಪರಿಹಾರ ಕಂಡುಕೊಳ್ಳುವ ಗುಣ, ನಾಯಕತ್ವ ಕಲೆಯನ್ನು ಕಲಿಸುತ್ತಿದೆ.
ತಾಲ್ಲೂಕು ಮಟ್ಟದಲ್ಲಿ ಯುವ ಸಂಸತ್ ಸ್ಪರ್ಧೆಗಳು ನಡೆದಿದ್ದು, ಪ್ರತಿ ತಾಲ್ಲೂಕುಗಳಿಂದ 5 ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಇಂದಿನ ಯುವ ಸಂಸತ್ ಸ್ಪರ್ಧೆಯಲ್ಲಿ 35 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಇಲ್ಲಿಂದ 2 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವರು. ಎಲ್ಲ ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ರಾಜಕೀಯ ಪ್ರಜ್ಞೆಯನ್ನು ಹೊಂದಬೇಕೆಂದು ಆಶಿಸಿದರು.
ತಾಲ್ಲೂಕು ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್ ಮಾತನಾಡಿ, ಯುವ ಸಂಸತ್ ಗ್ರಾಮ ಸಭೆಯ ಮುಂದುವರೆದ ಭಾಗವಾಗಿದೆ. ಮಕ್ಕಳು ಸಮರ್ಥವಾಗಿ ರಾಜಕೀಯದಲ್ಲಿ ಭಾಗವಹಿಸಲು, ತಮ್ಮ ಪ್ರತಿಭೆಯನ್ನು ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆ.ಯಾಗಿದೆ ಎಂರರು.
ಉಪನ್ಯಾಸಕರಾದ ಘನಶ್ಯಾಮ ಮಾತನಾಡಿ, ವಿಶ್ವದ ಅತ್ಯಂತ ದೊಡ್ಡ ಸಂವಿಧಾನ ನಮ್ಮದು. ಇಲ್ಲಿ ಪ್ರಜೆಗಳ ಪಾತ್ರವೇ ಮುಖ್ಯವಾಗಿದ್ದು ಸರ್ಕಾರ ರಚನೆ, ಟೀಕಿಸುವುದು ಮತ್ತು ತೆಗೆದುಹಾಕುವ ಅವಕಾಶವನ್ನು ಹೊಂದಿದ್ದೇವೆ. ಇಲ್ಲಿ ನಡೆಯುವ ಅಣಕು/ಯುವ ಸಂಸತ್ತು ನಮ್ಮ ಸಂಸತ್ತಿಗೆ ಮಾದರಿಯಾಗಿರಬೇಕು. ಉತ್ತಮ ಯುವ ಸಂಸದೀಯ ಪಟುಗಳಿಗೆ ಲೋಕಸಭೆಯಲ್ಲಿ ನಿರರ್ಗಳವಾಗಿ ವಿಷಯ ಮಂಡನೆಗೆ ಅವಕಾಶ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗಂಗಾನಾಯ್ಕ, ಸತೀಶ್‍ದತ್ತ ಭಂಡಾರಿ, ಶಿವಲಿಂಗಪ್ರಸಾದ್ ಇತರರು ಹಾಜರಿದ್ದರು.

Related posts

ರಾಜ್ಯವನ್ನು ಸಂಪೂರ್ಣ ಬರಗಾಲವೆಂದು ಘೋಷಿಸಿ: ರೈತ ಮುಖಂಡರಿಂದ ಧರಣಿ.

ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ: ಭವಿಷ್ಯ ನುಡಿದ ಜೈನಮುನಿ

ಬೈಕ್ ಹಾಗೂ‌ ಆಟೋ ನಡುವೆ ಅಪಘಾತ:  ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್