ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸೆ.12: ಸಾಹಿತ್ಯ ಗ್ರಾಮದಲ್ಲಿ ಶ್ರಾವಣ ಕಥಾ ಸಂಜೆ

ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸೆ.12 ರ ಮಂಗಳವಾರ ಸಂಜೆ 06:00 ಕ್ಕೆ ನಗರದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಕಥೆ ಹೇಳುವ ಕಥಾ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹಿರಿಯ ಸಾಹಿತಿಗಳಾದ ಕಟ್ಟೆಪುರಾಣ ಖ್ಯಾತಿ ಬಿ‌.ಚಂದ್ರೇಗೌಡ ಉದ್ಘಾಟಿಸಲಿದ್ದಾರೆ. ಕಥೆಗಾರರಾದ ಡಾ. ಕಲೀಮ್ ಉಲ್ಲಾ, ತುರುವನೂರು ಮಲ್ಲಿಕಾರ್ಜುನ, ಡಾ.ಕೆ. ಎಸ್.ಗಂಗಾಧರ, ಡಾ.ಅಣ್ಣಪ್ಪ ಮಳೀಮಠ, ಶ್ರೀನಿವಾಸ ನಗಲಾಪುರ, ಕೆ.ವಿನಯ್, ಮಂಜುಳಾ ರಾಜು ಡಿ.ಎಚ್. ಸೂರ್ಯಪ್ರಕಾಶ್, ಡಿ. ಮಂಜುನಾಥ ಕಥೆ ಹೇಳುತ್ತಾರೆ.
ಕಥೆ ಕುರಿತು ತಮ್ಮ ಅಭಿಪ್ರಾಯ ತಿಳಿಸಲು ಆರ್.ಎಸ್. ಹಾಲಸ್ವಾಮಿ, ಡಾ. ಕೆ. ಜಿ. ವೆಂಕಟೇಶ, ಮಹಾದೇವಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಸಂಚಾಲಕರಾಗಿ ಡಿ. ಎಚ್. ಸೂರ್ಯಪ್ರಕಾಶ್, ಎಂ. ಎಂ. ಸ್ವಾಮಿ, ಎಸ್. ನಾರಾಯಣ ಗೋಪಿಶೆಟ್ಟಿಕೊಪ್ಪ ಅವರು ಜವಾಬ್ದಾರಿ ನಿರ್ವಹಣೆ ಮಾಡಲಿದ್ದಾರೆ. ನಿವೃತ್ತ ಎಎಸ್ಐ ಆರ್.ರವಿ  ಜನಪದ ಗೀತೆ ಹಾಡಲಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಡಿ. ಮಂಜುನಾಥ ಮನವಿ ಮಾಡಿದ್ದಾರೆ.

Related posts

ರುದ್ರರೂಪಿಣಿ ಸ್ನೇಹಸಂಘದ ಸಮುದಾಯ ಭವನ ಕಾಮಗಾರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಚಾಲನೆ

ಸನಾತನ ಶ್ರೇಷ್ಟ ಧರ್ಮ: ಶ್ರೀ ಪ್ರಸನ್ನನಾಥಸ್ವಾಮೀಜಿ.

ಎಲ್ಲ ಸದಸ್ಯರ ಸಹಕಾರಿಂದ ಸಂಘಟನೆ ಸದೃಢ-ಎನ್.ಗೋಪಿನಾಥ್