ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸೆ. 09: ಶಾಲಾ ಅಂಗಳದಲ್ಲಿ ಸಾಹಿತ್ಯ ಕಮ್ಮಟ

ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ, ತಾಲ್ಲೂಕು ಸಮಿತಿ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಪ್ರತಿ ಪ್ರೌಢಶಾಲಾ ಅಂಗಳದಲ್ಲಿ ಕನ್ನಡ ಪಠ್ಯ ಆಧರಿಸಿ ಒಂದು ದಿನದ ಕಮ್ಮಟ ನಡೆಸಲು ಯೋಜಿಸಿದ್ದೇವೆ. ಮಕ್ಕಳಿಗೆ ಪಠ್ಯ ಪುಸ್ತಕದಲ್ಲಿನ ಸಾಹಿತ್ಯ, ಓದು, ಅರಿವು, ರಸಸ್ವಾದ ಸೇರಿದಂತೆ ವಿದ್ಯಾರ್ಥಿಗಳೇ ಬರೆಯುವಂತೆ ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಶೈಕ್ಷಣಿಕ ವರ್ಷದಲ್ಲಿ ಪ್ರತಿ ಬಾರಿ ನಡೆಸುವಂತೆ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ನಡೆಯುವ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಆಯ್ಕೆ ಈ ಕಮ್ಮಟದಲ್ಲಿ ನಡೆಯಲಿದೆ.
ಸೆಪ್ಟೆಂಬರ್ 09 ರಂದು ಶನಿವಾರ ಬೆಳಿಗ್ಗೆ 10:30 ಕ್ಕೆ ದುರ್ಗಿಗುಡಿಯಲ್ಲಿರುವ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಮೊದಲ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸೆ. 13 ರಂದು ಗಾಜನೂರಿನ ಜವಾಹರಲಾಲ್ ನೆಹರೂ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಮ್ಮಟ ನಡೆಸಲಾಗುವುದು. ಕಥೆ, ಕವನ, ಪ್ರಬಂಧ ಗಳನ್ನು ಓದುವ, ಬರೆಯುವ ರಸಗ್ರಹಣದ ಕ್ರಮಗಳನ್ನು  ಕಮ್ಮಟ ದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಡಿ. ಮಂಜುನಾಥ ವಿವರಿಸಿದ್ದಾರೆ.

Related posts

ನಿಗಮ ಮಂಡಳಿಗೆ ಶಾಸಕರುಗಳ ಹೆಸರು ಫೈನಲ್: 3 ಕ್ಕಿಂತ ಹೆಚ್ಚು ಭಾರಿ ಗೆದ್ದವರಿಗೆ ಮಣೆ..?

ಶಿರಾಳಕೊಪ್ಪದ ಮದ್ಯವ್ಯರ್ಜನ ಶಿಬಿರಕ್ಕೆ ಮುಂದಾದ‌ ಲಯನ್ಸ್, ಒಂದೊಳ್ಳೆ ಕಾರ್ಯಕ್ರಮ

ನಾಲ್ಕು ತಲೆಮಾರಿನಿಂದಲೂ ಗಣೇಶ ಮೂರ್ತಿ ತಯಾರಿ: ವಿದೇಶಕ್ಕೂ ತಲುಪಿದ ಗಣಪನ ಮೂರ್ತಿ: ಈ ಅಪರೂಪ ಕುಟುಂಬದ ಶ್ರದ್ಧೆ ಮತ್ತು ಭಕ್ತಿಗೆ ಒಂದು ನಮನ.