ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಉತ್ತಮ ಬದುಕಿಗೆ ಸ್ವಂತ ದುಡಿಮೆ ಸೃಷ್ಠಿ ಅಗತ್ಯ- ಅಶ್ವಿನಿ ಎಸ್.ಎಂ

ಶಿವಮೊಗ್ಗ,: ಸ್ವ ಉದ್ಯೋಗ, ಸ್ವಂತ ದುಡಿಮೆಯನ್ನ ಸೃಷ್ಠಿಸಿಕೊಳ್ಳುವ ಜೊತೆಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅಶ್ವಿನೀಸ್ ಮೇಕೋವರ್ ಸಂಸ್ಥೆಯ ಮುಖ್ಯಸ್ಥೆ ಅಶ್ವಿನಿ ಎಸ್. ಎಂ ಅವರು ಹೇಳಿದರು.
ನಗರದಲ್ಲಿ ನಡೆದ ಫೋರ್ಟ್ ಫೋಲಿಯೋ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಥೆಯ ಅಶ್ವಿನೀಸ್ ಮೇಕೋವರ್ ಸಂಸ್ಥೆಯ ವತಿಯಿಂದ ಉದ್ಯೋಗದಲ್ಲಿರುವ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತಿದಿನ ಬೆಳಗ್ಗೆ ೧೦ ರಿಂದ ಮದ್ಯಾಹ್ನ ೩ರವರೆಗೆ ತರಗತಿ ಯಶಸ್ವಿಯಾಗಿ ನಡೆಯುತ್ತಿತ್ತು , ಹಾಗೇ ಅತೀ ಹೆಚ್ಚಿನ ಜನರ ಬೇಡಿಕೆಯಂತೆ ಇದೀಗ ಪ್ರತಿದಿನ ಸಂಜೆ ಬ್ಯಾಚುಗಳು ಮತ್ತು ೨ದಿನಗಳ ವಿಶೇಷ ವಿಕೆಂಡ್ ಬ್ಯಾಚುಗಳ ಮೇಕಪ್ ತರಬೇತಿ ಹೊಸದಾಗಿ ಪ್ರಾರಂಭವಾಗುತ್ತಿದೆ ಇದರಿಂದ ನಿಮ್ಮ ಬಿಡುವಿನ ಸಮಯದಲ್ಲಿ ಸ್ವಂತ ಬದುಕು, ಸ್ವ ದುಡಿಮೆಯ ಕನಸನ್ನ ನನಸಾಗಿಸಿಕೊಳ್ಳಲು ಸಾಧ್ಯ ಎಂದರು.
ಈ ಬಾರಿಯ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಸಂಭ್ರಮಾಚರಣೆಯ ವಿಶೇಷಕ್ಕಾಗಿ ಮಹಿಳೆಯರು, ಯುವತಿಯರು ನವೆಂಬರ್ ೫, ಭಾನುವಾರದ ಒಳಗೆ ನೊಂದಣಿಯಾದರೆ ೬೦% ರಿಯಾಯಿತಿ ದರದಲ್ಲಿ ಮೇಕಪ್ ತರಬೇತಿ ನೀಡಲು ಸಂಸ್ಥೆ ನಿರ್ಧರಿಸಿದೆ. ಸೀಟುಗಳು ಸೀಮಿತವಿರುವುದರಿಂದ ಮೊದಲು ನೊಂದಣಿಯಾದ ೧೦ ಜನರಿಗೆ ಮಾತ್ರ ಈ ರಿಯಾಯಿತಿ  ಅವಕಾಶ ಮತ್ತು ಮೊದಲ ಆದ್ಯತೆ ನೀಡಲಾಗಿದ್ದು ಇಲ್ಲಿ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಹಾಗೇ ಈ ಬ್ಯಾಚ್ ಸೋಮವಾರದಿಂದ ಶುಕ್ರವಾರ ಸಂಜೆ ೫ ರಿಂದ ೮ರ ವರೆಗೆ ನಡೆಯಲಿದೆ ಹಾಗೇ ವಿಕೇಂಡ್ ತರಗತಿ ಬೇಕಾದಲ್ಲಿ ವಾರದಲ್ಲಿ ೨ದಿನ ವಿಶೇಷ ತರಗತಿ ಸಹ ನಮ್ಮಲ್ಲಿ ಲಭ್ಯ ಶನಿವಾರ ಸಂಜೆ ೩ರಿಂದ ೭ರವರೆಗೆ ಮತ್ತು ಭಾನುವಾರ ಬೆಳಿಗ್ಗೆ ೧೧ರಿಂದ ಮದ್ಯಾಹ್ನ ೨ರವರೆಗೆ ಜರುಗಲಿದೆ. ಈ ಎಲ್ಲ ಅನುಕೂಲಕರ ಸಮಯ, ಅವಕಾಶ ನಿಮಗಾಗಿ ಕಾದಿದೆ ಇದನ್ನ ಸದುಪಯೋಗಪಡಿಸಿಕೊಳ್ಳಿ ಹಾಗೇ ಈ ಕೂಡಲೇ ಕರೆ ಮಾಡಿ ನಿಮ್ಮ ಹೆಸರನ್ನ ನೊಂದಾಯಿಸಿಕೊಳ್ಳಿ ಎಂದು ಕರೆ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ೯೯೦೧೨೧೬೦೯೩ಗೆ ಸಂಪರ್ಕಿಸಿ ಹಾಗೂ ತರಬೇತಿ ಸ್ಥಳ : ಅಶ್ವಿನಿ ಮೇಕೋವರ್ ಸ್ಟುಡಿಯೋ, ಲಕ್ಮೀ  ಆರ್ಕೇಡ್ ಬಿಲ್ಡಿಂಗ್, ೨ನೇ ಮಹಡಿ, ಲಕ್ಮೀ ಟಾಕೀಸ್ ಸರ್ಕಲ್‌ಗೆ ಭೇಟಿ ನೀಡಬಹುದು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅವಿನಾಶ್, ಸಂಸ್ಥೆಯ ಅಧ್ಯಕ್ಷರಾದ ಶಿವಲೀಲಾ ಮಾತನಾಡಿದರು.

Related posts

ಕಾಂಗ್ರೆಸ್ ಸೇರ್ಪಡೆಗೆ ಮುಖಂಡರ ಒಲವು:  ಆಪರೇಷನ್ ಹಸ್ತ ಅವಶ್ಯಕತೆ ಇಲ್ಲ-ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್

ಮಹಿಳಾ ಉದ್ಯಮಿಗಳಿಗೆ ಸೂಕ್ತ ಪ್ರೋತ್ಸಾಹ ಅಗತ್ಯ- ಮೇಯರ್ ಎಸ್.ಶಿವಕುಮಾರ್

ಶಾಲೆಯ ಬಹುಗ್ರಾಮ ಕುಡಿಯುವ ನೀರಿಗಾಗಿ ಸಂಗ್ರಹಿಸಿಟ್ಟಿದ್ದ ಪೈಪ್‍ ಕಳ್ಳತನ: ಆರೋಪಿ ಬಂಧನ.