ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ದ್ವಿತೀಯ ಪಿಯು ಪರೀಕ್ಷೆ ಪ್ರಶ್ನೆ ಪತ್ರಿಕೆ ಸರಳಗೊಳಿಸಿದ ಶಿಕ್ಷಣ ಇಲಾಖೆ.

ಬೆಂಗಳೂರು: ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಪ್ರಶ್ನೆ ಪತ್ರಿಕೆಯನ್ನ ಶಿಕ್ಷಣ ಇಲಾಖೆ ಸರಳಗೊಳಿಸಿದೆ.

ದ್ವಿತೀಯ ಪಿಯು ಕಲಾ ಮತ್ತು ವಾಣಿಜ್ಯ ವಿಭಾಗದ ಪರೀಕ್ಷೆಗಳಿಗೆ 20 ಆಂತರಿಕ ಅಂಕಗಳನ್ನು ನಿಗದಿ ಮಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸುಲಭಗೊಳಿಸಲಾಗಿತ್ತು. ಇದೀಗ ಶಾಲಾ ಶಿಕ್ಷಣ ಇಲಾಖೆ ಪ್ರಶ್ನೆಪತ್ರಿಕೆಯನ್ನು ಕೂಡ ಸುಲಭಗೊಳಿಸಿದೆ. ಪರೀಕ್ಷೆಯಲ್ಲಿ ವಾಕ್ಯದ ಆಧಾರದಲ್ಲಿ ಬರೆದು ಉತ್ತರಿಸುವುದಕ್ಕಿಂತ ಒಂದು ಪದದ ಉತ್ತರ, ಬಹು ಆಯ್ಕೆ ಪ್ರಶ್ನೆಗಳು (ಎಂಸಿಕ್ಯು), ಹೊಂದಿಸಿ ಬರೆಯಿರಿ, ಬಿಟ್ಟ ಸ್ಥಳ ತುಂಬುವಂತಹ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟು 100 ಅಂಕಗಳಲ್ಲಿ 20 ಆಂತರಿಕ, 20 ಒಂದಂಕ, 24 ಎರಡು ಅಂಕದ ಪ್ರಶ್ನೆಗಳಿದ್ದು, 36 ಅಂಕಗಳಿಗಷ್ಟೇ ವಿವರಣಾತ್ಮಕ ಉತ್ತರಗಳನ್ನು ಬರೆಯಬೇಕಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (ಕೆಎಸ್ಇಎಬಿ) ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ, ಕನ್ನಡ ಪರೀಕ್ಷೆಯಲ್ಲಿ 10 ಅಂಕಗಳಿಗೆ ಒಂದು ವಾಕ್ಯದ 10 ಪ್ರಶ್ನೆಗಳು, 5 ಅಂಕಗಳಿಗೆ ಹೊಂದಿಸಿ ಬರೆಯಿರಿ, 5 ಅಂಕಗಳಿಗೆ ಬಿಟ್ಟ ಸ್ಥಳ ತುಂಬುವುದು ಸೇರಿ 20 ಅಂಕಗಳಿಗೆ ಒಂದು ಅಂಕದ ಪ್ರಶ್ನೆಗಳಿವೆ. 2 ಅಂಕದ 12 ಪ್ರಶ್ನೆಗಳಿವೆ. 3 ಅಂಕಗಳ 4 ಪ್ರಶ್ನೆಗಳು ಮತ್ತು 4 ಅಂಕಗಳ 6 ಪ್ರಶ್ನೆಗಳಿದ್ದು, 36 ಪ್ರಶ್ನೆಗಳಿಗೆ ಉತರಿಸಬೇಕಾಗುತ್ತದೆ. ಇದೇ ರೀತಿ ವಿವಿಧ ವಿಷಯಗಳಲ್ಲಿಯೂ ಕನಿಷ್ಠ 20 ಅಂಕಗಳು ಒಂದು ಅಂಕದ ಪ್ರಶ್ನೆಗಳಾಗಿವೆ.

ಇದರ ಜತೆಗೆ 20 ಅಂಕಗಳಿಗೆ ಆಂತರಿಕ ಅಂಕ ನಿಗದಿ ಮಾಡಿದೆ. ಕಿರು ಪರೀಕ್ಷೆ ಮತ್ತು ಮಧ್ಯ ವಾರ್ಷಿಕ ಪರೀಕ್ಷೆ ಸೇರಿ 10 ಅಂಕ, ಉಳಿದ 10 ಅಂಕಗಳಿಗೆ ಕಾಲೇಜು ಹಂತದಲ್ಲಿ ಪ್ರಾಜೆಕ್ಟ್ ಹಾಗೂ ಅಸೈನ್ವೆುಂಟ್ಗಳಲ್ಲಿನ ಬರವಣಿಗೆ ವಿಭಾಗಕ್ಕೆ 5 ಅಂಕ, ಪ್ರಸ್ತುತಪಡಿಸುವಿಕೆಗೆ 3 ಅಂಕ ಮತ್ತು ಸಂದರ್ಶನಕ್ಕೆ 2 ಅಂಕಗಳನ್ನು ನಿಗದಿ ಮಾಡಿದೆ.

ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡು ಫಲಿತಾಂಶ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಕರೊನಾ ಬಳಿಕ ಶಾಲಾ ಶಿಕ್ಷಣ ಇಲಾಖೆಯೇ ನಡೆಸಿರುವ ಸಮೀಕ್ಷೆಯಲ್ಲಿ ‘ವಾಕ್ಯ ರಚನೆ’ಯಲ್ಲಿ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ. ಪದ ಬಳಕೆ, ವಾಕ್ಯ ರಚನೆ, ವ್ಯಾಕರಣ ಮತ್ತು ಗಣಿತದಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ತೀರಾ ಕಳಪೆಯಾಗಿದೆ ಎಂಬುದು ಈಗ ಕಾಡುತ್ತಿರುವ ಆತಂಕವಾಗಿದೆ.

 

Related posts

ಅಪರೇಷನ್ ಕಮಲಕ್ಕೆ ಎಲ್ಲಿಂದ ಹಣ ಬರುತ್ತೆ ಉತ್ತರಿಸಲಿ – ಬಿಎಲ್ ಸಂತೋಷ್ ಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು.

ಕಾಂಗ್ರೆಸ್ ಶಾಸಕರ ನಿವಾಸದ ಆವರಣದಲ್ಲಿ ವ್ಯಕ್ತಿ ನೇಣಿಗೆ ಶರಣು..

ಒಂದು ದೇಶ ಒಂದು ಚುನಾವಣೆ: ಖರ್ಚು ಎಷ್ಟಾಗುತ್ತೆ..? ಸಾಧಕ ಬಾಧಕಗಳೇನು..?