ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಆಮ್ ಆದ್ಮಿ ಪಕ್ಷದ ಹೆಸರು ದುರುಪಯೋಗಪಡಿಸಿ ಪಕ್ಷ ಒಡೆಯುತ್ತಿದ್ದಾರೆ- ಶಶಿಕುಮಾರ್ ಗೌಡ ಆರೋಪ

ಶಿವಮೊಗ್ಗ: ಆಮ್ ಆದ್ಮಿ ಪಕ್ಷದ ಹೆಸರನ್ನು ಕೆಲವರು ದುರುಪಯೋಗಪಡಿಸಿಕೊಂಡು ಪಕ್ಷವನ್ನು ಒಡೆಯುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಿಯೋಜಿತ ಜಿಲ್ಲಾಧ್ಯಕ್ಷ ಶಶಿಕುಮಾರ್ ಗೌಡ ಆರೋಪಿಸಿದರು.
ಅವರುಇಂದು ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಚೆಗೆ ಆಮ್ ಆದ್ಮಿಪಕ್ಷದವರೆಂದು ಹೇಳಿಕೊಂಡ ಕೆಲವರು ಪತ್ರಿಕಾ ಗೋಷ್ಠಿ ನಡೆಸಿ ನಾವು ಆಮ್ ಆದ್ಮಿ ಬಿಡುತ್ತಿದ್ದೇವೆ. ಬೇರೆ ಪಕ್ಷ ಸೇರುತ್ತೇವೆ. ಈಗ ತಟಸ್ಥವಾಗಿದ್ದೇವೆ. ಈ ಪಕ್ಷದಲ್ಲಿ ಇರುವುದು ಬೇಡ ಎಂದೆಲ್ಲಾ ಹೇಳಿಕೊಂಡು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಪಕ್ಷಕ್ಕೆ ಸೇರಿಕೊಂಡ ಇವರು ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಈ ಕೂಡಲೇ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದನ್ನು ಬಿಡಬೇಕು ಎಂದು ಪಕ್ಷ ತೊರೆದವರಿಗೆ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಚಂದ್ರು ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕವಾದ ಮೇಲೆ ಜಿಲ್ಲಾ ಮಟ್ಟದಲ್ಲಿ ಹೊಸ ಪದಾಧಿಕಾರಿಗಳ ನೇಮಕ ಮಾಡಿದ್ದಾರೆ. ಹೊಸ ಪದಾಧಿಕಾರಿಗಳು ಇನ್ನಷ್ಟೇ ಅಧಿಕಾರ ಸ್ವೀಕರಿಸಬೇಕಾಗಿದೆ. ಆದರೆ ಈ ನೇಮಕಾತಿ ವಿಷಯ ತಿಳಿಯುತ್ತಿದ್ದಂತೆ ಕೆಲವರು ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ಪಕ್ಷ ಬಿಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಇಲ್ಲಸಲ್ಲದ ವಿಷಯಗಳನ್ನು ಹೇಳಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದರು.
ಮಾಜಿ ಜಿಲ್ಲಾಧ್ಯಕ್ಷ ಕಿರಣ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ದೆಹಲಿ ಮತ್ತು ಪಂಜಾಬ್‍ನಲ್ಲಿ ಎಲ್ಲಾ ಬಡವರಿಗೆ ಉಚಿತ ಶಿಕ್ಷಣ, ಉಚಿರ ಆರೋಗ್ಯ ನೀಡುವುದಾದರೆ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಇದು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದರು.
ಜಿಲ್ಲೆಯಲ್ಲಿ ಪಕ್ಷಕ್ಕೆ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಈ ವಿಷಯವನ್ನು ರಾಜ್ಯ ನಾಯಕರಿಗೆ ತಿಳಿಸಲಾಗಿದೆ. ಶಿಸ್ತು ಕ್ರಮ ಅನಿವಾರ್ಯ ಎಂದ ಅವರು, ಪಕ್ಷದ ಯಾವುದೇ ಕಾರ್ಯಕರ್ತರು ಪಕ್ಷದ ಶಿಸ್ತು ಮತ್ತು ನಿಯಮಗಳನ್ನು ಪಾಲಿಸಬೇಕು. ಯಾರೂ ಪಕ್ಷ ಬಿಟ್ಟು ಹೋಗಬಾರದು. ಕೆಲವರು ಪಕ್ಷ ಬಿಟ್ಟಿದ್ದರಿಂದ ಪಕ್ಷಕ್ಕೆ ಅಭದ್ರತೆ ಏನೂ ಉಂಟಾಗಿಲ್ಲ. ಮತ್ತಷ್ಟು ಭದ್ರವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುರೇಶ್ ಕೋಟೇಕಾರ್, ನಿಂಬೆಹಣ್ಣು ನಿಂಗರಾಜ್, ನಜೀರ್, ಶೋಭಾ, ಮಂಜುಳಾ, ಅಲ್ಬರ್ಟ್‍ವಿಜಯ್, ಅಪರ್ಣಾ, ಲಕ್ಷೀಶ್ ಮುಂತಾದವರಿದ್ದರು.

Related posts

ಲೋಕಸಭಾ ಚುನಾವಣೆ: ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆಗೆ ನಾನು ಪ್ರಬಲ ಆಕಾಂಕ್ಷಿ-ಹೆಚ್.ಎಸ್. ಸುಂದರೇಶ್

ಕರ್ನಾಟಕ ಎನ್ನುವ ಹೆಸರು ಬರುವಲ್ಲಿ ನಾಡೋಜ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಪಾತ್ರ ಪ್ರಮುಖವಾದದ್ದು-ನಾಡೋಜ ಡಾ ಮಹೇಶ ಜೋಶಿ

ಇನ್ಮುಂದೆ 2 ಸಾವಿರ ರೂ. ಮುಖಬೆಲೆಯ ನೋಟು ಸ್ವೀಕರಿಸಲ್ಲ: ಅಮೆಜಾನ್ ಘೋಷಣೆ