ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

30 ದಿನದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ರೆ ನಿತ್ಯ 5000 ರೂ. ದಂಡ- ಆರ್ ಬಿಐನಿಂದ ಹೊಸ ನಿಯಮ.

ನವದೆಹಲಿ: ಸಾಲ ಪೂರ್ತಿ ಪಾವತಿಸಿದರೂ ಸಹ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಸಂಬಂಧಿಸಿದ ಆಸ್ತಿ ದಾಖಲೆ ಪತ್ರಗಳನ್ನು ಸಕಾಲಕ್ಕೆ ನೀಡದೇ ವಿಳಂಬಿಸುತ್ತಿರುವುದಕ್ಕೆ ಕಡಿವಾಣ ಹಾಕಲು  ಖುದ್ದು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದ್ದು ಇದೀಗ ಹೊಸ ನಿಯಮವನ್ನ ಘೋಷಿಸಿದೆ.

ಈ ಸಂಬಂಧ, ಸಾಲಗಾರರೊಂದಿಗೆ (borrowers) ಹೇಗೆ ವ್ಯವಹರಿಸಬೇಕು ಮತ್ತು ಸಾಲ ಪಾವತಿಯಾದ ಬಳಿಕ ನಂತರ ಯಾವೆಲ್ಲ ಕ್ರಮಗಳನ್ನು ಅನುಸರಿಸುವ ಕುರಿತು ಮಾರ್ಗಸೂಚಿ (guidelines) ಸೂತ್ರಗಳನ್ನು ಬಿಡುಗಡೆ ಮಾಡಿದೆ.

30 ದಿನದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ದರೇ ನಿತ್ಯ 5000 ರೂ. ನೀಡಬೇಕು ಎಂದು ಆರ್ ಬಿಐ ಹೇಳಿದೆ.  ಬ್ಯಾಂಕುಗಳು, ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪನಿಗಳು  ಮತ್ತು ರೆಗ್ಯುಲೆಟೇಡ್ ಎಂಟಿಟೀಸ್ ಅಂದರೆ, ಇತರ ಎಲ್ಲ ಹಣಕಾಸು ಸಂಸ್ಥೆಗಳಿಗೆ ಈ ಮಾರ್ಗಸೂಚಿ ಸೂತ್ರಗಳು ಅನ್ವಯವಾಗಲಿವೆ .

ಪೂರ್ಣ ಪ್ರಮಾಣದಲ್ಲಿ ಸಾಲ ಮರು ಪಾವತಿಸಿದ ಬಳಿಕ ಅಥವಾ ಸಾಲದ ಖಾತೆಯನ್ನು ಮುಚ್ಚಿದ 30 ದಿನಗಳ ಬಳಿಕ ಸಂಬಂಧಿಸಿದ ಹಣಕಾಸು ಸಂಸ್ಥೆಗಳು, ಸಾಲಗಾರರ ಮೂಲ ಚರಾಸ್ತಿ ಅಥವಾ ಸ್ಥಿರಾಸ್ತಿ ದಾಖಲೆ ಪತ್ರಗಳನ್ನು ನೀಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಸಾಲಗಾರರಿಗೆ ತಮ್ಮ ಚರಾಸ್ತಿ ಅಥವಾ ಸ್ಥಿರಾಸ್ತಿಗಳ ಮೂಲ ದಾಖಲೆ ಪತ್ರಗಳನ್ನು ಬ್ಯಾಂಕ್ ಕಚೇರಿಗಳು ಅಥವಾ ಸಾಲದ ಖಾತೆ ಇರುವ ಬ್ಯಾಂಕ್ ಶಾಖೆಯಿಂದಲೇ ಪಡೆದುಕೊಳ್ಳುವ ಆಯ್ಕೆಗಳನ್ನು ಸಾಲಗಾರರಿಗೆ ನೀಡಬೇಕು. ಇದು ಸಾಲಗಾರರ ಆದ್ಯತೆಯ ಅನುಸಾರ ಅವರಿಗೆ ಈ ಅವಕಾಶವನ್ನು ಒದಸಬೇಕು ಎಂದು ಆರ್ಬಿಐ ಹೇಳಿದೆ.

ಮೂಲ ಆಸ್ತಿ ದಾಖಲೆಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬವಾದರೆ ಅಥವಾ ಸಾಲದ ಇತ್ಯರ್ಥದ ನಂತರ 30 ದಿನಗಳ ನಂತರ ಸಂಬಂಧಿತ ನೋಂದಾವಣೆಯೊಂದಿಗೆ ನಮೂನೆಯನ್ನು ಸಲ್ಲಿಸಲು ವಿಫಲವಾದಲ್ಲಿ, ಅಂತಹ ವಿಳಂಬಕ್ಕಾಗಿ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ಯಾಕೆ ವಿಳಂಬವಾಗಿದೆ ಎಂಬ ಕುರಿತು ಮಾಹಿತಿಯನ್ನು ಸಾಲಗಾರರಿಗೆ ನೀಡಬೇಕಾಗುತ್ತದೆ. ಹೀಗಿದ್ದೂ, ಒಂದು ವೇಳೆ ವಿಳಂಬ ಮುಂದುವರಿದರೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಮೂಲ ದಾಖಲೆಗಳನ್ನು ಒದಗಿಸುವ ದಿನದವರೆಗೆ ಪರಿಹಾರವಾಗಿ ನಿತ್ಯ 5000 ರೂ. ನೀಡಬೇಕು ಎಂದು ಆರ್ಬಿಐ ಹೇಳಿದೆ.

ಒಂದು ವೇಳೆ, ಸಾಲಗಾರರ ಚರಾಸ್ಥಿ ಮತ್ತು ಸ್ಥಿರಾಸ್ತಿಗಳ ಮೂಲ ದಾಖಲೆಗಳು ನಾಶವಾದರೆ, ಆ ದಾಖಲೆಗಳನ್ನು ನಕಲಿ ಪ್ರತಿಗಳು ಅಥವಾ ದೃಢೀಕೃತ ಆಸ್ತಿ ದಾಖಲೆ ಪತ್ರಗಳನ್ನು ಪಡೆಯುವುದಕ್ಕೆ ನೆರವು ಒದಗಿಸಬೇಕು. ಅದಕ್ಕೆ ತಗಲುವ ವೆಚ್ಚವನ್ನು ಹೆಚ್ಚುವರಿಯಾಗಿ ಹಣಕಾಸಂಸ್ಥೆಗಳು, ಬ್ಯಾಂಕುಗಳು ನೀಡಬೇಕಾಗುತ್ತದೆ ಎಂದು ಆರ್ಬಿಐ ಹೇಳಿದೆ. ಆರ್ಬಿಐ ಹೊರಡಿಸಿರುವ ಈ ಎಲ್ಲ ಮಾರ್ಗದರ್ಶಿ ಸೂತ್ರಗಳು 2023 ಡಿಸೆಂಬರ್ 1ರಿಂದ ಅನ್ವಯವಾಗಲಿವೆ.

ಸಾಲಗಾರರು ನಿಧನರಾದರೆ ಏನು ಮಾಡಬೇಕು

ಒಬ್ಬನೇ ಸಾಲಗಾರ ಅಥವಾ ಜಂಟಿ ಸಾಲಗಾರರ ಸಾವಿನ ಬಳಿಕ ಉಂಟಾಗುವ ಸಮಸ್ಯೆಯನ್ನು ಪರಿಹರಿಸುವ ಸಂಬಂಧ ಎಲ್ಲ ಹಣಕಾಸು ಸಂಸ್ಥೆಗಳು ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಮೂಲ ಚರ / ಸ್ಥಿರ ಆಸ್ತಿ ದಾಖಲೆಗಳನ್ನು ಹಿಂದಿರುಗಿಸಲು ಉತ್ತಮವಾದ ಕಾರ್ಯವಿಧಾನವನ್ನು ಹೊಂದಿರಬೇಕು. ಅಂತಹ ಕಾರ್ಯವಿಧಾನಗಳನ್ನು ಹಣಕಾಸು ಸಂಸ್ಥೆ, ಬ್ಯಾಂಕುಗಳ ವೆಬ್ಸೈಟ್ನಲ್ಲಿ ಇತರ ರೀತಿಯ ನೀತಿಗಳು ಮತ್ತು ಗ್ರಾಹಕರ ಮಾಹಿತಿಗಾಗಿ ಕಾರ್ಯವಿಧಾನಗಳೊಂದಿಗೆ ಪ್ರದರ್ಶಿಸಬೇಕು ಎಂದು ಆರ್ಬಿಐ ಅಧಿಸೂಚನೆ ತಿಳಿಸಿದೆ.

 

Related posts

ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಧಿಕೃತ ಮುದ್ರೆ..

ಪರಿಸರವನ್ನು ಸರ್ವನಾಶ ಮಾಡುತ್ತಿರುವ ಆರೋಪ: ಶಾಹಿ ಗಾರ್ಮೆಂಟ್ಸ್ ವಿರುದ್ಧ ಪ್ರತಿಭಟನೆ.

ಚಂದ್ರಯಾನ-3 ಯಶಸ್ವಿ: ಆ.26ಕ್ಕೆ ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ.