ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರ್ನಾಟಕ ರಾಜ್ಯೋತ್ಸವ: ಶಿಕ್ಷಕರು ಮತ್ತು ಗುರು ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಎಸ್ ಟೀಕ್ಯಾನಾಯ್ಕ ಅವರಿಗೆ ಸನ್ಮಾನ ಸನ್ಮಾನ

ಶಿವಮೊಗ್ಗ:  ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ ಕೋಗಳಿ ತಾಂಡದ ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀರಾಮನಗರ ( ಕೋಗಳಿ ತಾಂಡ)ಕ್ಕೆ ನೂತನವಾಗಿ ಶಿಕ್ಷಕರಾಗಿ ಬಂದಿರುವ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಗುರು ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ, ಎಸ್ ಟೀಕ್ಯಾನಾಯ್ಕ ರವರಿಗೆ ಸನ್ಮಾನ ಮಾಡಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ್ ಆರ್ ಮಾತನಾಡಿ, ನಾವು ಇಂದಿಗೆ 50 ವರ್ಷಗಳ ಸುವರ್ಣ ಮಹೋತ್ಸವವನ್ನು ರಾಜ್ಯದ್ಯಂತ ಆಚರಿಸುತ್ತಿದ್ದೇವೆ, 1956ರಲ್ಲಿ ಕರ್ನಾಟಕ ಏಕೀಕರಣವಾಯಿತು, 1973ರ ಮುಂಚೆ ಮೈಸೂರು ರಾಜ್ಯವೆಂದು ಕರೆಯುತಿದ್ದರು . 1973ರ ನವಂಬರ್ 1ರೆಂದು ದೇವರಾಜ್ ಅರಸು ಅವರು ಕರ್ನಾಟಕವೆಂದು ನಾಮಕರಣ ಮಾಡಿದರು.ಈ ನವೆಂಬರ್ ಗೆ 50 ವರ್ಷಗಳನ್ನ ಉಳಿಸಿದ್ದೇವೆ ಎಂದು ಹೇಳಿದರು, ನಂತರ ಮಾತನಾಡಿದ ಸರ್ಕಾರಿ ಶಾಲೆ ಶಿಕ್ಷಕರಾದ , ದ್ಯಾಮನಗೌಡ ನವರು ಮಾತನಾಡಿ ಈ ಸುಂದರ ದಿನ ಕರ್ನಾಟಕ ಎಂಬ ನಾಮಕರಣಗೊಂಡ ಸುದಿನ ನಿಜವಾಗಿಯೂ ಕೂಡ ಭಾರತಮಾತೆಯ ಪುತ್ರಿ ಎಂದರೆ ಕರ್ನಾಟಕ ಮಾತೆ ಸುಮಾರು ಈ ಭಾಷೆಗೆ 2000 ವರ್ಷಗಳ ಇತಿಹಾಸವಿದೆ ಒಂದು ದ್ರಾವಿಡ ಭಾಷೆ ಇರುವುದರಿಂದ ಕಲಿಯಲು ಮತ್ತು ಕಲಿಸಲು ಸರಳವಾದ ಭಾಷೆಯಾಗಿದೆ ಹಾಗೂ ದೇವರ ಮತ್ತು ನಮ್ಮ ನಡುವಿನ ಸಂಪರ್ಕ ಕಲ್ಪಿಸುವ ಕನ್ನಡವಾಗಿದೆ ಹಾಗೆಯೇ ನಮ್ಮ ಮಾತೃ ತಾಯಿ ನುಡಿ ಕನ್ನಡವೇ ಅದರಿಂದ ಕನ್ನಡ ನಾಡ ನುಡಿಗಾಗಿ ಹಲವಾರು ಕವಿಗಳು ಹಲವಾರು ಹೋರಾಟಗಾರರು ಕನ್ನಡದ ಸಾಹಿತ್ಯವನ್ನು ಬೆಳೆಸಿ ಕನ್ನಡದ ನಾಡನ್ನು ಕಟ್ಟಿ ಸಮೃದ್ಧಿ ಗೊಳಿಸಿ ನಮ್ಮ ಕೈಗಳಿಗೆ ನೀಡಿದ್ದಾರೆ ಆದರೆ ನಾವುಗಳು ಈ ಕನ್ನಡ ನಾಡನ್ನು ಉಳಿಸಬೇಕೆಂದರೆ ಕನ್ನಡ ಭಾಷೆಯನ್ನು ಬಳಸಬೇಕಾಗಿದೆ ಹಾಗೂ ಕನ್ನಡ ಭಾಷೆಯ ಪುಸ್ತಕ ಕನ್ನಡ ಭಾಷೆಯ ಪುಸ್ತಕಗಳನ್ನು ಓದಬೇಕು ನಂತರ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು ಕನ್ನಡ ಭಾಷೆಯ ಪುಸ್ತಕಗಳು ಪ್ರತಿಯೊಬ್ಬ ವ್ಯಕ್ತಿಯಿಂದ ರಚಿತಗೊಳ್ಳಬೇಕು ನಾಡು ನುಡಿ ಬಂದಾಗ ಬದ್ಧರಾಗಿ ನಿಂತು ಕನ್ನಡ ನಾಡಿನ ಕಟ್ಟಬೇಕಾಗಿದೆ.. ಶ್ರೀ ಕುವೆಂಪುರವರು ಹೇಳಿದಂತೆ ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತು ಅಂದರೆ ಭಾರತ ಮಾತೆ ಮಗಳು ಯಾರೆಂದರೆ ಆದ್ದರಿಂದ ಈ ಮಗಳಾದ ಕರ್ನಾಟಕ ಮಾತೆಯ ನಾವುಗಳು ಉಳಿಸಿ ಬೆಳೆಸಬೇಕಾಗಿದೆ
ಜೈ ಹಿಂದ್, ಜೈ ಕರ್ನಾಟಕ ಮಾತೆ ಎಂದು ಹೇಳಿದರು ಈ ಸಂದರ್ಭದಲ್ಲಿ ತಾಲೂಕು ಘಟಕದ ಕಾರ್ಯಧ್ಯಕ್ಷರಾದ ದೇವರ ದೇವರ ಮನಿ ನೀಲಪ್ಪನವರು,ಕ .ಬ ರ ವೇ ರಾಜ್ಯ ಕಾರ್ಯದರ್ಶಿಗಳಾದ ರವಿನಾಯ್ಕ , ಉಪಾಧ್ಯಕ್ಷರಾದ ಆರ್ ರಾಜ ನಾಯ್ಕ್, ಎನ್ ರಾಜ ನಾಯ್ಕ ಸಂಘಟನಾ ಕಾರ್ಯದರ್ಶಿಗಳಾದ , ಅರುಣ್ ಕುಮಾರ್, ರಘುಪತಿ , ಸಂತೋಷ್ ಕುಮಾರ್, ಸಂಚಾಲಕರಾದ ಬಿ ಮಂಜುನಾಥ್, ಸನ್ಮಾನಿತ ಶಿಕ್ಷಕರಾದ, ಎಸ್ ಟೀಕ್ಯಾನಾಯ್ಕ, ದ್ಯಾಮನಗೌಡ, ಜಿಎಂ ಶಿವಪ್ರಕಾಶ್ , ಕೆ ಎಂ ರಾಜು ಇನ್ನು ಇತರರು ಇದ್ದರು.

Related posts

ಅ.1ರಿಂದ ಈ ಸೇವೆಗಳಿಗೆ ಜನನ ಪ್ರಮಾಣ ಪತ್ರ ಕಡ್ಡಾಯ.

ಶ್ರದ್ಧೆ, ನಿಷ್ಠೆ ಜೀವನದಲ್ಲಿ ನೆಮ್ಮದಿ ಪಡೆಯುವ ಸರಳ ಮಂತ್ರಗಳು-ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ

ದೇಶದ ಡಿಜಿಟಲ್ ಭವಿಷ್ಯವನ್ನು ಕರ್ನಾಟಕ ಮುನ್ನಡೆಸಲು ಸಾಧ್ಯ-ಸಿಎಂ ಸಿದ್ದರಾಮಯ್ಯ