ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ರಾಷ್ಟ್ರೀಯ ಹೆದ್ದಾರಿಯನ್ನು ನಗರದ ನವುಲೆ ಬಳಿ ವಿಸ್ತರಿಸಬೇಕು-ಸಚಿವ ಮಧುಬಂಗಾರಪ್ಪಗೆ ಮನವಿ

ಶಿವಮೊಗ್ಗ: ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರ ಅವೈಜ್ಞಾನಿಕ ಕಾಮಗಾರಿ ಬಿಟ್ಟು ಹೊರ ವರ್ತುಲ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ನಗರದ ನವುಲೆ ಬಳಿ ವಿಸ್ತರಿಸಬೇಕು ಎಂದು ಸ್ಥಳೀಯ ನಾಗರಿಕರು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಹೆದ್ದಾರಿಯ 210ರಿಂದ 215.36ವರೆಗಿನ 5.36 ಕಿಮೀ, ಉದ್ದದ ರಸ್ತೆಯನ್ನು ಮಹಾನಗರ ಪಾಲಿಕೆಯ ಜನನಿಬಿಡ ಪ್ರದೇಶವಾದ ಹರಿಗೆ ಮತ್ತು ಎಂಆರ್‍ಎಸ್‍ಗಳ ಮೂಲಕ ಹಾದುಹೋಗುವಂತೆ ಅವೈಜ್ಞಾನಿಕವಾಗಿ ತೀರ್ಮಾನ ಮಾಡಿರುವುದು ಸರಿಯಲ್ಲ. ಯಾವ ರಾಷ್ಟ್ರೀಯ ಹೆದ್ದಾರಿಗಳೂ ಊರಿನ ಹೊರಗೆ ನಿರ್ಮಾಣವಾಗಬೇಕೇ ಹೊರತು ಊರ ಒಳಗೆ ನಿರ್ಮಾಣ ವಾಗಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೆದ್ದಾರಿ ಅಗಲೀಕರಣವು ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಭಾಗದ ಜನನಿಬಿಡ ಪ್ರದೇಶಗಳಾದ ಹರಿಗೆ, ತೊಪ್ಪಿನಘಟ್ಟ, ಇಸ್ಲಾಪುರ ಮತ್ತು ಊರುಗಡೂರುಗಳಲ್ಲಿ ಹಾದು ಹೋಗುವುದರಿಂದ ದುಷ್ಪರಿಣಾಮಗಳು ಉಂಟಾಗುತ್ತವೆ. ನಗರದ ಒಳಗಡೆಯೇ ಹೆದ್ದಾರಿ ನಿರ್ಮಿಸಲು ಹೊರಟಿರುವುದು ಸರಿಯಲ್ಲ ಎಂದು ಮನವಿದಾರರು ತಿಳಿಸಿದ್ದಾರೆ.
ನಗರದ ಒಳಗಡೆ ಹೆದ್ದಾರಿ ಹಾದು ಹೋದರೆ ಹಿಂದುಳಿದ ವರ್ಗಗಳ ವಸತಿಗೃಹಗಳಿವೆ. ಶಿಕ್ಷಣ ಸಂಸ್ಥೆಗಳಿವೆ. ಕುವೆಂಪು ವಿವಿ ಆಡಳಿತ ಕಟ್ಟಡವಿದೆ. ದೇವರಾಜ್ ಅರಸ್ ಕಟ್ಟಡವಿದೆ. ವಸತಿ, ಅಂಗಡಿ ಕಟ್ಟಡಗಳಿವೆ. ಮುಖ್ಯವಾಗಿ ಕೆಪಿಟಿಸಿಎಲ್‍ನ ಮೈನ್ ರಿಸಿವಿಂಗ್ ಸ್ಟೇಷನ್ ಬೃಹತ್ ನೀರಿನ ಟ್ಯಾಂಕುಗಳಿವೆ. ಇವೆಲ್ಲವನ್ನೂ ನಾಶಪಡಿಸುವುದು ಕಷ್ಟವಾಗುತ್ತದೆ. ಮತ್ತು ಖರ್ಚು ಕೂಡ ಹೆಚ್ಚಾಗುತ್ತದೆ. ಸುಮಾರು 200 ಕೋಟಿ ನಷ್ಟವಾಗುತ್ತದೆ. ಆದ್ದರಿಂದ ಈ ಅವೈಜ್ಞಾನಿಕ ಯೋಜನೆಯನ್ನು ಕೈಬಿಟ್ಟು ಸಿಡಿಪಿ ಮಾಸ್ಟರ್ ಪ್ಲ್ಯಾನ್‍ನಲ್ಲಿರುವ ಹೊರವರ್ತುಲ ರಸ್ತೆ ಬಳಸಿಕೊಂಡು ಕಾಮಗಾರಿಯನ್ನು ಮುಂದುವರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂತೆಕಡೂರು ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಇದ್ದರು.

 

Related posts

ನಿಯಮ ಪಾಲಿಸದ, ವೈದ್ಯಕೀಯ ಅನುಮತಿ ಪಡೆಯದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ -ಮೈಸೂರು ಡಿಹೆಚ್​ಓ

TOD News

ಮೈಸೂರು ಕಾಗದ ಕಾರ್ಖಾನೆ ಪುನಾರಂಭಕ್ಕೆ ಸಚಿವ ಎಂ ಬಿ ಪಾಟೀಲ್ ಹೆಜ್ಜೆ: ಸಭೆ ನಡೆಸಿ ಚರ್ಚೆ…

ಅಪೌಷ್ಠಿಕತೆ: ಭಾರತ, ಗುಜರಾತ್ ಸೂಚ್ಯಂಕ ಏರಿಕೆ: ಏಕೆ ಹೀಗಾಯ್ತು ವಿಶ್ವಗುರು ಉತ್ತರಿಸಬೇಕು-ಕುಟುಕಿದ ಸಿಎಂ ಸಿದ್ದರಾಮಯ್ಯ