ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕಂದಾಯ ಭೂಮಿಯಲ್ಲಿ ವಾಸಿಸುತ್ತಿರುವ ಮನೆಗಳಿಗೆ ಖಾತೆ ನೀಡಲು ಸಚಿವ ಕೃಷ್ಣಭೈರೇಗೌಡರಿಗೆ ರೇಖಾ ರಂಗನಾಥ್ ಮನವಿ

ಶಿವಮೊಗ್ಗ: ಕಂದಾಯ ಭೂಮಿಯಲ್ಲಿ ವಾಸಿಸುತ್ತಿರುವ ಮನೆಗಳಿಗೆ ಅಕ್ರಮ – ಸಕ್ರಮ ದಡಿಯಲ್ಲಿ ಖಾತೆ ನೀಡಲು ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ 13 ಸಾವಿರಕ್ಕೂ ಹೆಚ್ಚು ಮನೆ ಕಟ್ಟಿಕೊಂಡವರಿಗೆ ಅಕ್ರಮ-ಸಕ್ರಮದಡಿ ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದು ಸದರಿ ಮನೆಗಳಿಗೆ ಪಾಲಿಕೆ ವತಿಯಿಂದ ಎಲ್ಲಾ ಮೂಲ ಸೌಕರ್ಯಗಳನ್ನು ನೀಡುತ್ತಿದ್ದು, ಆದರೆ ಹಲವು ವರ್ಷಗಳು ಕಳೆದರೂ ಸದರಿ ಮನೆಗಳಿಗೆ ಖಾತೆ ಇಲ್ಲದೆ ಬಡವರು ಮಧ್ಯಮ ವರ್ಗದ ಜನ ಸರ್ಕಾರದ ಕೆಲವು ನಿಯಮಾವಳಿಗಳಿಂದ ಆತಂಕದಲ್ಲಿ ವಾಸಿಸುತ್ತಿದ್ದಾರೆ.
ಆದ್ದರಿಂದ ಸರ್ಕಾರದಿಂದ ಅಕ್ರಮ ಸಕ್ರಮದಡಿಯಲ್ಲಿ ಸದರಿ ಕಂದಾಯ ಭೂಮಿಯಲ್ಲಿ ವಾಸಿಸುತ್ತಿರುವ ಮನೆಗಳಿಗೆ ಖಾತೆ ಮಾಡಲು ಆದೇಶ ಮಾಡುವುದರಿಂದ ಪಾಲಿಕೆಗೆ ಆದಾಯ ತೆರಿಗೆ ಸಂದಾಯವಾಗುವುದರ ಜೊತೆಗೆ ಸದರಿ ನಿವಾಸಿಗಳಿಗೆ ಯಾವುದೇ ಆತಂಕ ಇಲ್ಲದೆ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

Related posts

ಮಿರಾಕಲ್ ಸಂಭವಿಸುತ್ತವೆ, ನಾನು ಲೆಜೆಂಡ್ ಆಗುವುದಕ್ಕೆ ಅದೇ ಕಾರಣ ಎಂದ್ರು ನಟ ರಜನಿಕಾಂತ್

ಜಿಕಾ ವೈರಸ್ ಬಗ್ಗೆ ಭಯ ಬೇಡ: ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: KAT ಮೊರೆ ಹೋದ ಶಿಕ್ಷಕ ಅಭ್ಯರ್ಥಿಗಳು