ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸಾಹಿತ್ಯದ ಓದು ಬರಹ ಆತ್ಮಸ್ಥೈರ್ಯ ತುಂಬಲಿದೆ-ಡಿ.ಮಂಜುನಾಥ

ಶಿವಮೊಗ್ಗ : ಸಾಹಿತ್ಯದ ಓದು ಬರಹದಿಂದ ಬದುಕಿನಲ್ಲಿ ಎದುರಾಗುವ ಅನೇಕ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ತುಂಬಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗಾಗಿ ಶಾಲಾ ಕಾಲೇಜು ಅಂಗಳದಲ್ಲಿ ಕನ್ನಡ ಪಠ್ಯ ಆಧರಿಸಿ ಕಥೆ ಕವನ ಪ್ರಬಂಧ ರಚನಾ ಕಮ್ಮಟವನ್ನು  ಗಿಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಕನ್ನಡ ಪಾಠವನ್ನು ಪರೀಕ್ಷೆಗಾಗಿ ಮಾತ್ರ ಸೀಮಿತಗೊಳಿಸಿ ಕೊಂಡರೆ ಭವಿಷ್ಯದಲ್ಲಿ ನಿಮ್ಮೊಳಗೆ ಸೃಜನಾತ್ಮಕ ಚಿಂತನೆಗಳು ಮೂಡಲು ಸಾಧ್ಯವಿಲ್ಲ. ಪಾಠದಲ್ಲಿರುವ ಕಥೆ, ಕವನ, ಪ್ರಬಂಧಗಳನ್ನು ಓದುವ, ಆಲೋಚನೆ ಮಾಡುವ, ಬರೆಯುವ ವಿಚಾರವಾಗಿ ಚಿಂತನೆ ಮಡಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಕೆ.ಎಂ. ಮೋಹನ್ ಮಾತನಾಡಿ,  ಈ ರೀತಿಯ ಕಮ್ಮಟ ಎಲ್ಲಾ ವಿದ್ಯಾರ್ಥಿಗಳಿಗೂ ಅಗತ್ಯವಿದೆ. ಹತ್ತನೆಯ ತರಗತಿ ಮಕ್ಕಳಿಗೆ ಪರೀಕ್ಷೆ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದರು.
ಕಥಾ ಪ್ರಕಾರ ಕುರಿತು ಸಾಹಿತಿಗಳಾದ ಡಾ.ಎಚ್.ಟಿ. ಕೃಷ್ಣಮೂರ್ತಿ ಅವರು ಬದುಕಿನ ಬಗ್ಗೆ ಕಾಳಜಿ ವಹಿಸಬೇಕು. ತಮ್ಮ ಭಾವನೆಗಳನ್ನು ಬೇರೆಯವರೊಂದಿಗೆ ಹೇಳಿಕೊಳ್ಳಬೇಕು. ನಮ್ಮ ನಡುವೆ ಗೋಡೆ ಕಟ್ಟಿಕೊಂಡು ಮನದಲ್ಲಿರುವ ಕಥೆ ಹೇಳದಿದ್ದರೆ ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಗಳು ಬಂದುಬಿಡುತ್ತದೆ. ಎರಡು ಪಾತ್ರಗಳನ್ನು ಸೃಷ್ಟಿ ಮಾಡಿ ಪರಸ್ಪರ ಮಾತನಾಡುತ್ತಲೆ ಒಳಗಿನ ಭಾವನೆ ಹಂಚಿಕೊಳ್ಳುವುದೇ ಕಥೆ ಎಂದು ಮಾಹಿತಿ ನೀಡಿದರು.
ಸಾಹಿತ್ಯದಲ್ಲಿನ ಕಾವ್ಯದ ಮಹತ್ವ, ಓದುವ, ಬರೆಯುವ ಅರ್ಥೈಸುವ ವಿಧಾನವನ್ನು ವಿಶ್ರಾಂತ ಉಪನ್ಯಾಸಕರಾದ ಮಂಜುಳಾ ರಾಜು ವಿವರಿಸಿದರು. ಪ್ರಬಂಧ ಕುರಿತು ಹೇಗೆ ಬರೆಯಬಹುದು. ವಿಷಯ, ಆಲೋಚನೆ, ಅಭಿವ್ಯಕ್ತಿ ಕ್ರಮವನ್ನು ಸಾಹಿತಿಗಳು, ಉಪನ್ಯಾಸಕರು ಆಗಿರುವ ಡಾ. ಕಲೀಮ್ ಉಲ್ಲಾ ಅವರು ಮಾಹಿತಿ ನೀಡಿದರು.
ದುರ್ಗಿಗುಡಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ರಾಘವೇಂದ್ರ, ಸದಸ್ಯರಾದ ಮಂಜುನಾಥ, ಶೇಷಮ್ಮ, ಅಜುಂಬಾನು, ಕಸಾಪ ಪಧಾದಿಕಾರಿಗಳಾದ ಎಂ.ನವೀನ್ ಕುಮಾರ, ಎಂ.ಎಂ. ಸ್ವಾಮಿ, ಅನುರಾಧಾ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ಸುಶೀಲಾ ಷಣ್ಮಗಂ, ಡಿ. ಗಣೇಶ್, ನಳಿನಾಕ್ಷಿ, ಕುಬೇರಪ್ಪ, ಸೋಮಿನಕಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು. ವಿದ್ಯಾರ್ಥಿನಿ ಐಶ್ವರ್ಯ ಸ್ವಾಗತಿಸಿ, ಗ್ಲೋರಿಯಾ ನಿರೂಪಿಸಿದರು.

Related posts

2.50 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ: ನವೆಂಬರ್ ನಲ್ಲಿ 7ನೇ ವೇತನ ಆಯೋಗ ಜಾರಿಗೆ ಸರ್ಕಾರ ಸಿದ್ಧತೆ.

ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಧಿಕೃತ ಮುದ್ರೆ..

ಶಾಲೆಗಳಲ್ಲಿ ಶಿಕ್ಷಕರೂ ಸಹ ಮೊಬೈಲ್ ಫೋನ್ ಬಳಸುವಂತಿಲ್ಲ.