ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಯೋಗ-ಚೆಸ್‌ನಿಂದ ಆರೋಗ್ಯ-ಏಕಾಗ್ರತೆ ವೃದ್ಧಿ- ರಾ. ಹ. ತಿಮ್ಮೇನಹಳ್ಳಿ ಅಭಿಪ್ರಾಯ

ಶಿವಮೊಗ್ಗ: ಯೋಗ ಮತ್ತು ಚೆಸ್ ಒಂದೇ ದಿನದ ಎರಡು ಮುಖಗಳಿದ್ದಂತೆ, ಯೋಗದಿಂದ ಆರೋಗ್ಯ ವೃದ್ಧಿ ಆದರೆ, ಬದುರಂಗದಿಂದ ಬುದ್ಧಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ ಎಂದು ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ರಾ. ಹ. ತಿಮ್ಮೇನಹಳ್ಳಿ ಅಭಿಪ್ರಾಯಪಟ್ಟರು.
ಅವರು ಶಾಲಾ ಶಿಕ್ಷಣ, ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಚೇರಿ ಶಿವಮೊಗ್ಗ ಹಾಗೂ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ  ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಗಾಡಿ ಕೊಪ್ಪದ ಸಾನ್ ತೋಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಅನುದಾನ ರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಎ, ಬಿ ಮತ್ತು ಸಿ ವಲಯಗಳ ವಲಯ ಮಟ್ಟದ ಯೋಗ ಮತ್ತು ಚೆಸ್ ಪಂದಾವಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಕ್ರೀಡೆಯಿಂದ ಶಿಸ್ತು ಸಂಯಮ ಬೆಳೆಯುವುದು, ಸೋಲು ಗೆಲುವು ಮುಖ್ಯವಲ್ಲ ಕ್ರೀಡಾ ಮನೋಭಾವದಿಂದ ಭಾಗವಹಿಸುವುದು ಮುಖ್ಯ. ಇಲ್ಲಿ ಭಾಗವಹಿಸಿದ ಮಕ್ಕಳು ಜಿಲ್ಲೆ, ರಾಜ್ಯ,ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತರಲೆಂದು  ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಚೆಸ್  ತೀರ್ಪುಗಾರರಾಗಿ ಆಗಮಿಸಿದ್ದ ,ರಾಷ್ಟ್ರೀಯ ತಿರುಪುಗಾರರಾದ  ವಿಲ್ಸನ್ ಮಾತನಾಡುತ್ತಾ  ಚದುರಂಗದಲ್ಲಿ ಶಿವಮೊಗ್ಗ ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದಲ್ಲಿ ಅನೇಕ ಕ್ರೀಡಾಪಟುಗಳನ್ನು ಕ್ಷೇತ್ರಕ್ಕೆ ನೀಡಿದೆ ಎಂದು ಸ್ಮರಿಸಿಕೊಂಡರು. ಯೋಗಾಸನ ತೀರ್ಪುಗಾರರಾದ ಶ್ರೀಮತಿ ಸುನಿತಾ ಯೋಗಾಸನದ ನಿಯಮಗಳು ಮತ್ತು ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡಿದರು.

Related posts

2024 ರಲ್ಲಿ ಮತ್ತೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ…

ಬಿವೈ ವಿಜಯೇಂದ್ರರನ್ನ ಅಳೆದು ತೂಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಲ್ಲ- ಅರವಿಂದ ಲಿಂಬಾವಳಿ.

ಹೆಚ್. ಕಾಂತರಾಜ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ.