ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ರಾಗಿಗುಡ್ಡ ಗಲಾಟೆ: ಎನ್‍ಐಎ ಯಿಂದ ತನಿಖೆಗೆ ಕೆ.ಎಸ್. ಈಶ್ವರಪ್ಪ ಆಗ್ರಹ.

ಶಿವಮೊಗ್ಗ: ರಾಗಿಗುಡ್ಡ ಗಲಾಟೆಗೆ ಸಂಬಂಧಿಸಿದಂತೆ ಎನ್‍ಐಎ (ರಾಷ್ಟ್ರೀಯ ತನಿಖಾ ದಳ)ಯಿಂದ ತನಿಖೆ ನಡೆಸಬೇಕು ಎಂದು ಮಾಜಿ ಉಪಮಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಗಿಗುಡ್ಡದಲ್ಲಿ ಈದ್‍ಮಿಲಾದ್ ಘಟನೆಗೆ ಸಂಬಂಧಿಸಿದಂತೆ ನಡೆದ ಹಿಂದೂಗಳ ಮೇಲಿನ ಹಲ್ಲೆಯು ಸಂಪೂರ್ಣ ಪೂರ್ವನಿಯೋಜಿತವಾಗಿದೆ. ಈ ಮೆರವಣಿಗೆಯಲ್ಲಿ ಪಿಎಫ್‍ಐನ ಏಳು ಮಂದಿ ಭಾಗವಹಿಸಿದ್ದರು. ಅದರಲ್ಲಿ ಮೂರು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಇನ್ನೂ ನಾಲ್ಕು ಜನರನ್ನು ಬಂಧಿಸಬೇಕಾಗಿದೆ. ಅವರು ತಪ್ಪಿಸಿಕೊಂಡಿದ್ದಾರೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ವರದಿ ನೀಡಿದೆ. ಆದ್ದರಿಂದ ಈ ಘಟನೆಯನ್ನು ಎನ್‍ಐಎಗೆ ನೀಡಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂಗಳ ಮೇಲಿನ ಹಲ್ಲೆಗಳು ಹೆಚ್ಚಾಗಿವೆ. ಮುಸ್ಲಿಂ ಗೂಂಡಾಗಳು ಬಾಲ ಬಿಚ್ಚಿದ್ದಾರೆ. ಶಿವಮೊಗ್ಗದ ಘಟನೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ವಿಷಯಗಳು ಹೊರಬರಬೇಕಾಗಿದೆ. ಜಿಲ್ಲಾ ರಕ್ಷಣಾಧಿಕಾರಿಗಳಿಗೇ ರಕ್ಷಣೆ ಇಲ್ಲವಾಗಿದೆ. ಮೆರವಣಿಗೆಯಲ್ಲಿ ಮಚ್ಚು ಲಾಂಗು ಹಿಡಿದದ್ದು ಸತ್ಯವಾಗಿದೆ. ಈಗಾಗಲೇ 30ಕ್ಕೂ ಹೆಚ್ಚು ಮಚ್ಚುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಪೊಲೀಸರಿಗೂ ಗಾಯಗಳಾಗಿವೆ. ಹೀಗಿದ್ದೂ ಇದೊಂದು ಚಿಕ್ಕ ಘಟನೆ ಎಂದು ಗೃಹ ಮಂತ್ರಿಗಳು ಹೇಳುತ್ತಿದ್ದಾರೆ. ತಕ್ಷಣವೇ ಗೃಹಮಂತ್ರಿ ಪರಮೇಶ್ವರ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಭಯೋತ್ಪಾದಕರ ತಾಣ ಆಗುವುದಕ್ಕೆ ಮುಂಚೆ ಎಚ್ಚೆತ್ತುಕೊಳ್ಳಬೇಕು. ಶಿವಮೊಗ್ಗ ಘಟನೆಗೆ ಸಂಬಂಧಿಸಿದಂತೆ ಅಮಾಯಕ ಹಿಂದೂಗಳ ಮೇಲೆ ಕೇಸ್ ದಾಖಲಿಸಿದ್ದು, ಅದನ್ನು ವಾಪಾಸ್ ತೆಗೆದುಕೊಳ್ಳಬೇಕು ಎಂದರು.
ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಿ.ಕೆ. ಶಿವಕುಮಾರ್ ಮತ್ತು ಅವರ ತಮ್ಮ ಈ ನಾಲ್ವರು ಸೇರಿಕೊಂಡು ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಲಿ. ನಾನು ಅವರಿಗೆ ಸಾಕ್ಷಿ ನೀಡುತ್ತೇನೆ ಎಂದು ಪುನರುಚ್ಚರಿಸಿದ ಅವರು, ಈಗಾಗಲೇ ಕಾಂಗ್ರೆಸ್‍ಗೆ ಕಪ್ಪು ಚುಕ್ಕೆಯಂತೆ ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಹಾಗೂ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯ ಮೇಲೆ ದಾಳಿ ನಡೆದಿದೆ. 40 ಕೋಟಿ ರೂ. ನಗದು ಸಿಕ್ಕಿದೆ. ಈ ಹಣದ ಮೂಲ ಯಾವುದು, ಇದರಲ್ಲಿ ಯಾರ್ಯಾರಿದ್ದಾರೆ ಎಂದು ಸಿಬಿಐ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಹೊರಟ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಸುಮೊಟೊ ಕೇಸ್ ದಾಖಲಿಸಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ. ಮುಸ್ಲಿಂರು ಭೂಪಟವನ್ನೇ ಬದಲಾಯಿಸಿದಾಗ, ಹಸಿರು ಬಣ್ಣ ತುಂಬಿದಾಗ, ಮಚ್ಚು ಹಿಡಿದು ಓಡಾಡಿದಾಗ ಸುಮೊಟೊ ಕೇಸ್ ದಾಖಲಿಸಬೇಕಾಗಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಪ್ರಮುಖರಾದ ಜಗದೀಶ್, ಪ್ರಭಾಕರ್, ವಿನ್ಸೆಂಟ್, ಸತ್ಯನಾರಾಯಣ, ಅಣ್ಣಪ್ಪ ಇದ್ದರು.

Related posts

ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗೆ ಟಿಕೆಟ್ ನೀಡಿದ್ರೆ ಪತ್ರಿಕೆಯ ಮೂಲಕ ಕಾರಣ ನೀಡಬೇಕು- ಕೇಂದ್ರ ಚುನಾವಣಾ ಆಯೋಗ

ಚಂದ್ರಯಾನ-1ರಿಂದ ಚಂದ್ರಯಾನ -3ರವರೆಗೆ ರೋಚಕ ಇತಿಹಾಸ ಹೇಗಿತ್ತು..? ಸ್ವಲ್ಪ ಮೆಲುಕು ಹಾಕೋಣ ಬನ್ನಿ…!

ಹಿಂದೂ ಮಹಾಸಭಾ ಗಣೇಶ ರಾಜಬೀದಿ ಉತ್ಸವ ಶಾಂತಿಯುತವಾಗಿ ನಡೆಯಲು ಎಲ್ಲಾ ರೀತಿಯ ಬಂದೋಬಸ್ತ್- ಎಸ್ಪಿ ಮಿಥುನ್ ಕುಮಾರ್