ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರಾಗಿಗುಡ್ಡ ಗಲಾಟೆ ಪ್ರಕರಣ: 24 ಜನರ ವಿರುದ್ದ ಎಫ್ ಐಆರ್: ವಿಡಿಯೋ, ಫೋಟೋ ಆಧರಿಸಿ ಆರೋಪಿಗಳ ಬಂಧನ.

ಶಿವಮೊಗ್ಗ:  ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂ ಮನೆಗಳನ್ನ ಗುರಿಯಾಗಿಸಿಕೊಂಡು ನಡೆದ ಕಲ್ಲು ತೂರಾಟ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ  24 ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ವಿಡಿಯೋ, ಫೋಟೋ ಆಧರಿಸಿ ಆರೋಪಿಗಳನ್ನ ಬಂಧಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಪ್ರಕರಣ ಕುರಿತು ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, ಪ್ರಕರಣ ಸಂಬಂಧ ಎಂಟು ಜನರು ತಲೆಮರೆಸಿಕೊಂಡಿದ್ದಾರೆ. 60 ಮಂದಿಯನ್ನು ವಿಚಾರಣೆ ಮಾಡಲಾಗಿದೆ . ವಿಡಿಯೋ, ಫೋಟೋ ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಕಲ್ಲು ತೂರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರಾಗಿಗುಡ್ಡದಲ್ಲಿ 144 ಸೆಕ್ಷನ್​ ಮುಂದುವರಿಯಲಿದೆ. ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಇದ್ದರೂ ವ್ಯಾಪಾರ ವಹಿವಾಟಿಗೆ ಸಮಸ್ಯೆ ಇಲ್ಲ. ಶಿವಮೊಗ್ಗ ನಗರದಲ್ಲಿ ಎಲ್ಲೂ ಕೂಡ ಅಂಗಡಿ ಬಂದ್ ಮಾಡಿಸಿಲ್ಲ. ಯಾರೂ ಭಯಪಡುವ ಅವಶ್ಯಕತೆ ಇಲ್ಲ, ಪೊಲೀಸರ ನಿಯೋಜಿಸಿದ್ದೇವೆ. ರಾಗಿಗುಡ್ಡ ಹೊರತುಪಡಿಸಿ ಶಿವಮೊಗ್ಗ ನಗರದಾದ್ಯಂತ ಸಹಜ ಸ್ಥಿತಿ ಇದೆ ಎಂದು ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದಾರೆ.

Related posts

ವಲಯ ಮಟ್ಟದ ಅಥ್ಲೆಟಿಕ್ಸ್  ಕ್ರೀಡಾಕೂಟಕ್ಕೆ ಚಾಲನೆ.

ಮೈತ್ರಿಗೆ ವಿರೋಧಿಸಿದ ಶಾಸಕ ಎಸ್.ಟಿ ಸೋಮಶೇಖರ್ ವಿರುದ್ಧ ಅಸಮಾಧಾನ ಹೊರ ಹಾಕಿದ ಸಿ.ಟಿ ರವಿ 

ದೇಶ ಸ್ವಾತಂತ್ರ್ಯ ಗಳಿಸಲು ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಬಲಿದಾನ ಎಂದೆಂದೂ ಅವೀಸ್ಮರಣೀಯ-ಜ್ಯೋತಿಪ್ರಕಾಶ್