ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಭಾರತೀಯ ವಿದ್ಯಾ ಭವನದಲ್ಲಿ ‘ಗೊಂಬೆ ಹಬ್ಬ’

ಬೆಂಗಳೂರು: ಭಾರತೀಯ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ನಿರಂತರವಾಗಿ ಮಾಡಿ ಕೊಂಡು ಬರುತ್ತಿರುವ ಭಾರತೀಯ ವಿದ್ಯಾ ಭವನದ ಬೆಂಗಳೂರು ಕೇಂದ್ರವು  ಅಕ್ಟೋಬರ್ 15ರಿಂದ 24ರವರೆಗೆ ‘ಶ್ರೀರಾಮ ಕಥಾ ಸುಧಾ’ ಎಂಬ ಗೊಂಬೆ ಹಬ್ಬವನ್ನು ಏರ್ಪಡಿಸಿದೆ.

ಕುಶಲಕರ್ಮಿಗಳ ಕುಟುಂಬದಿಂದ ಬಂದ  ಅಪರ್ಣ ಮತ್ತು ಶ್ರೀಕಾಂತ  ಆಚಾರ್ಯ ಅವರು ಈ ಪ್ರದರ್ಶನವನ್ನು ರೂಪಿಸಿದ್ದಾರೆ. ಕೈಯಿಂದಲೇ ರೂಪಿತವಾದ ಸಾಂಪ್ರದಾಯಿಕ ಶೈಲಿಯ ಗೊಂಬೆಗಳ ಮೂಲಕ ರಾಮಾಯಣ, ಮಹಾಭಾರತ, ಶ್ರೀಮದ್ಭಾಗವತ ಮೊದಲಾದ ಪುರಾಣ ಕತೆಗಳನ್ನು ಬಿಂಬಿಸುವ ಮಹತ್ವದ ಕಾರ್ಯವನ್ನು ಈ ದಂಪತಿ ಹಲವು ವರ್ಷಗಳಿಂದ ಮಾಡುತ್ತಿದ್ದಾರೆ. ಈ ವರ್ಷದ ನವರಾತ್ರಿ ಸಂದರ್ಭದಲ್ಲಿ ರಾಮಾಯಣದ ಕಥೆಯ ಸಾರವನ್ನು ಬಿಂಬಿಸುವ ‘ಗೊಂಬೆ ಹಬ್ಬ’ವನ್ನು ಅಪರ್ಣ ಮತ್ತು ಶ್ರೀಕಾಂತ್ ಅವರು ರೂಪಿಸಿದ್ದು ಭಾರತೀಯ ವಿದ್ಯಾ ಭವನದ ಕೆ.ಆರ್.ಜೆ ಹಾಲ್‍ನಲ್ಲಿ ಈ ಗೊಂಬೆಗಳ ಪ್ರದರ್ಶನವು ಅಕ್ಟೋಬರ್ 15ರಿಂದ  24ರವರೆಗೆ ನಿರಂತರವಾಗಿ ನಡೆಯಲಿದೆ ಎಂದು ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎಚ್.ಎನ್.ಸುರೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಗೊಂಬೆ ಹಬ್ಬವನ್ನು ಅಕ್ಟೋಬರ್ 15ರ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಿತೀಶ್ ಕುಮಾರ್ ಸಿಂಗ್ ಅವರು ಉದ್ಘಾಟಿಸಲಿದ್ದು ಭಾರತೀಯ ವಿದ್ಯಾ ಭವನದ ಅಧ್ಯಕ್ಷರಾದ ಶ್ರೀ ಕೆ.ಜಿ.ರಾಘವನ್ ಅವರು ‘ರಾಮಾಯಣದಲ್ಲಿ ಋಷಿಗಳು’ ಎನ್ನುವ ವಿಷಯದಲ್ಲಿ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಸಾಂಸ್ಕೃತಿಕ ಮಹತ್ವದ  ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವವನ್ನು ನೀಡ ಬೇಕೆಂದು ಎಚ್.ಎನ್.ಸುರೇಶ್ ಅವರು ವಿನಂತಿಸಿ ಕೊಂಡಿದ್ದಾರೆ.

Related posts

ರಾಗಿಗುಡ್ಡ ಘಟನೆ ಕುರಿತು ಬಿಜೆಪಿ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ-ಹೆಚ್.ಎಸ್. ಸುಂದರೇಶ್ ಕಿಡಿ.

ಯೋಗಕೇಂದ್ರದಿಂದ ನಂಜುಂಡಶೆಟ್ಟಿ ಅವರಿಗೆ ಸನ್ಮಾನ

ನಾಳೆಯಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ.