ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಸಾರ್ವಜನಿಕರೇ ಹುಷಾರ್! ಈ ‘ವನ್ಯಜೀವಿ ವಸ್ತು’ಗಳನ್ನು ಬಳಸಿದ್ರೆ ‘ಜೈಲು ಶಿಕ್ಷೆ’ ಫಿಕ್ಸ್.!

ಬೆಂಗಳೂರು: ಇತ್ತೀಚೆ ಹುಲಿ ಉಗುರು ಪ್ರಕರಣ ಭಾರಿ ಸುದ್ದಿಯಾಗಿ ಹಲವು ಕಲಾವಿದರು, ರಾಜಕಾರಣಿಗಳ ಮನೆಯನ್ನ ಶೋಧಿಸಲಾಗಿತ್ತು. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬಳಿಕ  ಸಂಸದ ನಟ ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಸೇರಿ  ಹಲವರ ಮನೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.  ಈ ನಡುವೆ ಇದೀಗ ‘ವನ್ಯಜೀವಿ ವಸ್ತು’ಗಳನ್ನು ಬಳಸಿದ್ರೆ ‘ಜೈಲು ಶಿಕ್ಷೆಅನುಭವಿಸಬೇಕಾಗುತ್ತದೆ

ವನ್ಯಜೀವಿ ವಸ್ತುಗಳನ್ನು ಇಟ್ಟಿಕೊಳ್ಳೋದು, ಬಳಕೆ ಮಾಡೋದು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನುಸಾರ ಅಪರಾಧವಾಗಿದೆ. ಒಂದು ವೇಳೆ ಇಟ್ಟುಕೊಂಡು ಸಿಕ್ಕಿಬಿದ್ದರೇ  ಜೈಲಿ ಶಿಕ್ಷೆ ಫಿಕ್ಸ್ ಆಗಲಿದೆ.

ಹೌದು ಈ ಕುರಿತು  ರಾಜ್ಯ ಸರ್ಕಾರದಿಂದ ಎಲ್ಲಾ ಪತ್ರಿಕೆಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದೆ.  ಈ ಕಾಯ್ದೆಯಂತೆ ವನ್ಯಜೀವಿಗಳನ್ನು ಬೇಟೆ ಆಡೋದು, ಸ್ವಾಧೀನ ಪಡಿಸಿಕೊಳ್ಳೋದು, ಇಟ್ಟುಕೊಳ್ಳೋದು ಸೇರಿದಂತೆ ಖರೀದಿಸಿಸೋದು, ಸಾಗಾಣೆ ಮಾಡೋದು ಅಲ್ಲದೇ ಮಾಂಸ ಮಾರಾಟ, ಭಕ್ಷಣೆ ಕೂಡ ಅಪರಾಧವೆಂದು ತಿಳಿಸಿದೆ.

ಇದಷ್ಟೇ ಅಲ್ಲದೇ ವನ್ಯಜೀವಿಗಳ ವಸ್ತುಗಳಾದಂತ ಕೊಂಬು, ಚರ್ಮ, ಟ್ರೋಫಿಗಳು, ಹಲ್ಲು, ಗೊರಸು ಅಥವಾ ಇವುಗಳಿಂದ ತಯಾರಾದಂತ ಆಲಂಕಾರಿಕ ವಸ್ತುಗಳ ವ್ಯಾಪಾರ, ಉಡುಗೋರೆ ನೀಡೋದು, ಪಡೆಯೋದು, ಖರೀದಿಸೋದು, ಸಾಗಾಟ ಮಾಡೋದು, ಇನ್ನೊಬ್ಬರಿಗೆ ವರ್ಗಾಯಿಸೋದು ಕೂಡ ಅಪರಾಧ. ಹೀಗೆ ಮಾಡದಂತೆ ಎಚ್ಚರಿಕೆಯನ್ನು ರಾಜ್ಯ ಅರಣ್ಯ ಇಲಾಖೆ ನೀಡಿದೆ.

ನೀವು ಒಂದು ವೇಳೆ ಈ ಎಲ್ಲಾ ವನ್ಯಜೀವಿ ವಸ್ತುಗಳನ್ನು ಇಟ್ಟುಕೊಂಡಿದ್ದರೂ, ಮುಂದಿನ ಸಚಿವ ಸಂಪುಟ ಸಭೆಯ ವೇಳೆಯಲ್ಲಿ 2-3 ತಿಂಗಳ ಒಳಗಾಗಿ ಸರ್ಕಾರಕ್ಕೆ ಹಿಂದಿರುಗಿಸೋದಕ್ಕೆ ಅವಕಾಶವನ್ನು ನೀಡೋ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಅಂತ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಕೆಲ ದಿನಗಳ ಹಿಂದೆ ತಿಳಿಸಿದ್ದರು. ಆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಕರಡು ಮಂಡಿಸಿ, ಅನುಮೋದನೆ ಪಡೆದು ಆದೇಶ ಕೂಡ ಮಾಡಲಾಗುತ್ತದೆ ಅಂತ ಹೇಳಿದ್ದಾರೆ.

ಆದ್ರೇ ರಾಜ್ಯದ ಅನೇಕ ಜನರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನ್ವಯ ವನ್ಯಜೀವಿ ವಸ್ತುಗಳನ್ನು ಇಟ್ಟುಕೊಂಡ್ರೇ ಅಂತವರಿಗೆ ಸುಮಾರು 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿ ಎಂದು ಕೂಡ ಅರಣ್ಯ ಇಲಾಖೆ ತಿಳಿಸಿದೆ. ಇದಷ್ಟೇ ಅಲ್ಲದೇ ಶಿಕ್ಷೆಯ ಜೊತೆಗೆ 1 ಲಕ್ಷದವರೆಗೂ ದಂಡವನ್ನು ಕೂಡ ವಿಧಿಸಬಹುದಾಗಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.

 

Related posts

KSRTC ನೌಕರರಿಗೆ ಗುಡ್ ನ್ಯೂಸ್ : ‘ತುಟ್ಟಿಭತ್ಯೆ’ ಹೆಚ್ಚಳ.

ಮೂತ್ರ ಸೋರುತ್ತಿದ್ದ ಮಹಿಳೆಗೆ ರೋಬೋಟಿಕ್ ಶಸ್ತ್ರಚಿಕಿತ್ಸೆ ಮೂಲಕ ಎನ್‍ಯು ಆಸ್ಪತ್ರೆಯ ವೈದ್ಯರ ಚಿಕಿತ್ಸೆ

ನಾಯಕತ್ವ ಗುಣ-ಸದೃಢ ಸಮಾಜ ನಿರ್ಮಿಸಲು ಯುವ ಸಂಸತ್ ಸಹಕಾರಿ-ಶಿವನಗೌಡ