ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಬೆಂಗಳೂರು ಬಂದ್ ವಾಪಸ್ ಪಡೆದ ಖಾಸಗಿ ಸಾರಿಗೆ ಒಕ್ಕೂಟಗಳು.

ಬೆಂಗಳೂರು:  ಶಕ್ತಿಯೋಜನೆಯಿಂದಾಗುವ ನಷ್ಟ ಪರಿಹಾರ ಸೇರಿ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟಗಳು ಕರೆ ನೀಡಿದ್ದ ಬಂದ್ ಅನ್ನು ವಾಪಸ್ ಪಡೆದಿವೆ.

ಖಾಸಗಿ ಸಾರಿಗೆ ಒಕ್ಕೂಟಗಳು ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದು, ಕೆಲ ಬೇಡಿಕೆ ಈಡೇರಿಕೆಗೆ ಭರವಸೆ ಹಿನ್ನೆಲೆ ಇದೀಗ ಒಟ್ಟಕೂಟಗಳು ಬಂದ್​ ಕರೆ ಹಿಂಪಡೆದಿವೆ. ನಗರದ ಫ್ರೀಡಂಪಾರ್ಕ್​ ನಲ್ಲಿ ಖಾಸಗಿ ವಾಹನ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ  ಸ್ಥಳಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ​ ಭೇಟಿ  ಮನವಿ ಆಲಿಸಿದರು.

ಬಂದ್​​ ಹಿಂಪಡೆದು ಬಳಿಕ ಮಾತನಾಡಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, 32ರಲ್ಲಿ 27 ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಹಾಗಾಗಿ ಬಂದ್​ ಹಿಂಪಡೆಯುತ್ತಿದ್ದೇವೆ. ಟ್ಯಾಕ್ಸ್​ ಕಡಿಮೆ ಬಗ್ಗೆಯೂ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ನಾಡಿದ್ದು ಮತ್ತೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Related posts

ಅಂತೂ ಮದ್ಯಪ್ರಿಯರಿಗೊಂದು ಗುಡ್ ನ್ಯೂಸ್: ಏನು ಗೊತ್ತೆ..?

ಸರ್ ಎಂ.ವಿ ಆದರ್ಶ ಸರ್ವಕಾಲಕ್ಕೂ ಅನುಕರಣೀಯ-ಡಾ. ಎಚ್.ಎಸ್.ನಾಗಭೂಷಣ್

ಮೈತ್ರಿಗೆ ವಿರೋಧಿಸಿದ ಶಾಸಕ ಎಸ್.ಟಿ ಸೋಮಶೇಖರ್ ವಿರುದ್ಧ ಅಸಮಾಧಾನ ಹೊರ ಹಾಕಿದ ಸಿ.ಟಿ ರವಿ