ಕನ್ನಡಿಗರ ಪ್ರಜಾನುಡಿ
ಕ್ರೈಮ್ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಬೆಳಿಗ್ಗೆ ಪೊಲಿಸ್ ಡ್ಯೂಟಿ, ರಾತ್ರಿಯಾದ್ರೆ ಕಳ್ಳತನ:  ಹೆಡ್​ ಕಾನ್ಸ್​ ಟೇಬಲ್ ಬಂಧನ.

ಬೆಂಗಳೂರು:  ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಹೆಡ್​ ಕಾನ್ಸ್​ಟೇಬಲ್​ನನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆ ಹೆಡ್​ ಕಾನ್ಸ್​ ಟೇಬಲ್  ಸಿದ್ದರಾಮರೆಡ್ಡಿ  ಬಂಧಿತ ಆರೋಪಿ. ಬೆಳಗ್ಗೆ ಪೊಲೀಸ್ ಡ್ಯೂಟಿ, ರಾತ್ರಿ ಕಳ್ಳತನ ಮಾಡ್ತಿದ್ದ ಸಿದ್ದರಾಮರೆಡ್ಡಿ ಅವರು ಕೇರಳ, ತಮಿಳುನಾಡು ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.

ಸಾಬಣ್ಣ ಎಂಬ ಎಂ.ಓ.ಬಿ. ಅಪರಾಧಿಯೊಬ್ಬನನ್ನು ಸಿದ್ದರಾಮರೆಡ್ಡಿ ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.  ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪ್ರಯಾಣಿಕರೇ ಈತನ ಟಾರ್ಗೆಟ್. ನಗದು ಹಣ ಮತ್ತು ಚಿನ್ನಾಭರಣಗಳನ್ನ ಮಾತ್ರ  ಕಳ್ಳತನ ಮಾಡುತ್ತಿತ್ತು. ಆರೋಪಿ ಸಿದ್ದರಾಮರೆಡ್ಡಿಯನ್ನು ಇಲಾಖೆ ಸೇವೆಯಿಂದ ಅಮಾನತು ಮಾಡಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ವಿನೂತನ ಟೆಕ್ನಾಲಜಿ: ಭಾರದಲ್ಲಿ ವಿಶ್ವದ ಮೊದಲ ‘UPI ATM’

ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಿದ್ದು ಚುನಾವಣೆ ಗಿಮಿಕ್ ಅಲ್ವಾ?: ಕೇಂದ್ರದ ವಿರುದ್ಧ ವ್ಯಂಗ್ಯವಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್.

ಚಾಕುವಿನಿಂದ ಇರಿದು ಅಪ್ರಾಪ್ತೆ ಕಿಡ್ನಾಪ್ : ಸಿನಿಮೀಯ ರೀತಿ ಚೇಸ್ ಮಾಡಿ ಯುವಕನನ್ನ ಹೆಡೆಮುರಿ ಕಟ್ಟಿದ ಪೊಲೀಸರು.