ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕಾವ್ಯ ಕೇಡು ಸೇಡುಗಳಿಂದ ಮುಕ್ತವಾದುದು-ಕವಯಿತ್ರಿ ಸವಿತಾ ನಾಗಭೂಷಣ

ಶಿವಮೊಗ್ಗ: ಕಾವ್ಯ ಕೇಡು ಸೇಡುಗಳಿಂದ ಮುಕ್ತವಾದುದು ಎಂದು ಕವಯಿತ್ರಿ ಸವಿತಾ ನಾಗಭೂಷಣ ಹೇಳಿದರು.
ಅವರು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ನುಡಿಮಂಟಪ ವೇದಿಕೆಯ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಹಾಗೂ ಅಂತರ ಕಾಲೇಜು ಕವಿ ಗೋಷ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ನಾವು ರಚಿಸುವ ಕಾವ್ಯ ಕೇವಲ ರಚನೆ ಮಾತ್ರ. ಆ ರಚನಾ ಕೌಶಲಗಳು ಪ್ರತಿಯೊಬ್ಬರಿಗೂ ಭಿನ್ನಭಿನ್ನವಾಗಿರುತ್ತದೆ. ಅಭಿವ್ಯಕ್ತಿಗೆ ಸ್ವಂತಿಕೆಯ ತಾಜಾತನವನ್ನು ಸೇರಿಸುವುದೇ ಕವಿತೆಯ ನಿಜವಾದ ಯಶಸ್ಸು. ಕನ್ನಡ ಕಾವ್ಯ ಪ್ರಪಂಚ ವಿಸ್ತಾರವಾದದು ಎಂದರು.
ಯಾವ ಕವಿಯಾಗಲಿ ಕಾವ್ಯವಾಗಲಿ ಹಿಂಸೆ, ಕೊಲೆಗಳಿಗೆ ಪ್ರೇರಣೆಯನ್ನು ನೀಡಲು ಸಾಧ್ಯವಿಲ್ಲ. ಯುದ್ಧ ರಕ್ತಪಾತಗಳಿಲ್ಲದೆ ಸಮಾಜವನ್ನು ಸಮಾನತೆಯ ಕಡೆಗೆ ಕೊಂಡೊಯ್ಯಲು ಕವಿತೆ ಬಯಸುತ್ತದೆ. ಹಾಗಾಗಿ ಕೇಡು ಸೇಡುಗಳಿಂದ ಮುಕ್ತವಾಗಿರುವುದೇ ಕಾವ್ಯ ಎಂದರು.
ಪ್ರಾಚಾರ್ಯರಾದ ಡಾ ಎಂ ಕೆ ವೀಣಾ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಕಾವ್ಯ ಎನ್ನುವುದು ಭಾವ ಮತ್ತು ಭಾಷೆಗಳ ಒಂದು ಸುಂದರ ಅಭಿವ್ಯಕ್ತಿ. ಸತ್ವಪೂರ್ಣ ಮನಸ್ಸುಗಳಿಂದ ಮಾತ್ರ ತಮ್ಮ ಕಾವ್ಯ ಹುಟ್ಟಲು ಸಾಧ್ಯ. ಕನ್ನಡದ ಕಾವ್ಯ ಪರಂಪರೆಯ ಹಿರಿಯರನ್ನು ಅವರ ಸಾಧನೆಯ ಮೂಲಕ ಪರಿಚಯಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಾಲೇಜುಗಳಿಂದ ಬಂದ ಸುಮಾರು 25 ಕವಿಗಳು ಕಾವ್ಯವಾಚನ ಮಾಡಿದರು.ಪದ್ಮಾಕ್ಷಿ ಹಾಗೂ ಮಮತಾ ನವೀನ್ ತೀರ್ಪುಗಾರರಾಗಿ ಆಗಮಿಸಿದ್ದರು. ಉಪನ್ಯಾಸಕರಾದ ಡಾ ದೊಡ್ಡ ನಾಯಕ್, ಡಾ.ರಾಜೀವ ನಾಯಕ್, ಸಂಶೋಧನಾ ವಿದ್ಯಾರ್ಥಿ ಗಿರೀಶ್ ನಾಯಕ್ ಕ್ರಮದಲ್ಲಿ ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥರಾದ ಡಾ.ಶುಭಾ ಮರವಂತೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು, ಮನೋಜ್ ವಂದಿಸಿದರು.

Related posts

ಬೇರೆ ಭಾಷೆ ಕಲಿಯಬೇಡಿ ಎನ್ನಲ್ಲ, ಕನ್ನಡದಲ್ಲಿ ಮಾತನಾಡಿ : ತಾಯಿನಾಡಿನ ಋಣ ತೀರಸಿ- ಸಿಎಂ ಸಿದ್ಧರಾಮಯ್ಯ.

ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ

ವಿವಿಧ ಪಂದ್ಯಾವಳಿಗಳಲ್ಲಿ ನಿದಿಗೆ-ಬಿ.ಬೀರನಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಂದ ಅತ್ಯುತ್ತಮ ಪ್ರದರ್ಶನ: ಅಭಿನಂದನೆ.