ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ವಿಲೀನಗೊಳಿಸಲು ಸಂಸದರಿಗೆ ಮನವಿ.

ಶಿವಮೊಗ್ಗ: ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು 6ರಿಂದ 8ಕ್ಕೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಸೇವಾ ಜ್ಯೇಷ್ಠತೆಯೊಂದಿಗೆ ವಿಲೀನಗೊಳಿಸಲು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಘಟಕ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮನವಿ ಮಾಡಿದೆ.
ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 1.88 ಲಕ್ಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ. 1ರಿಂದ 7 ಮತ್ತು 1ರಿಂದ 8ನೆ ತರಗತಿಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಎನ್‍ಸಿಟಿಇ ಶಿಕ್ಷಣ ನೀತಿಯ ಶಿಫಾರಸಿಗೆ ಅನುಕೂಲವಾಗುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮವನ್ನು ಬದಲಾಯಿಸಲಾಗಿದೆ. ಈಗ 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮದ ಅನ್ವಯ 1ರಿಂದ 5ನೇ ಪ್ರಾಥಮಿಕ ಶಾಲೆ ಸಹ ಶಿಕ್ಷಕರೆಂದು ಪರಿಗಣಿತವಾಗಿರುವವರಿಗೆ ಹಿಂಭಡ್ತಿಗೆ ಆದೇಶಿಸಲಾಗಿದೆ. ಇದು ಶಿಕ್ಷಕ ವೃಂದಕ್ಕೆ ಆಘಾತವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಿದ್ದುಪಡಿಗೆ ಒಳಪಡುತ್ತಿರುವ 2017ರ ಪ್ರಾಥಮಿಕ ಶಾಲಾ ಸಹಶಿಕ್ಷಕ ವೃಂದದ ಸಿ ಮತ್ತು ಆರ್ ನಲ್ಲಿ 2016ಕ್ಕಿಂತ ಮೊದಲು ನೇಮಕಾತಿಯಾದ 1ರಿಂದ 7 ಮತ್ತು 1ರಿಂದ 8ಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು, 6ರಿಂದ 8ಕ್ಕೆ ಪದನಾಮೀಕರಿಸಿ ಸೇವಾಜ್ಯೇಷ್ಠತೆಯೊಂದಿಗೆ ವಿಲೀನ ಮಾಡಿ ಸೌಲಭ್ಯ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಿನೇಶ್ ಜಿ.ಎಂ., ಪ್ರಧಾನ ಕಾರ್ಯದರ್ಶಿ ಜಯಾ ಎಂ. ಸೇರಿದಂತೆ ಹಲವರಿದ್ದರು.

Related posts

ನಾಳೆ ಕರ್ನಾಟಕ ಬಂದ್ ಗೆ ಸ್ಯಾಂಡಲ್ ವುಡ್  ಬೆಂಬಲ: ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ.

ಸೈಕಲ್ ನಲ್ಲಿ 5 ಸಾವಿರ ಕಿ.ಮೀ ಸಂಚಾರ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ 60 ವರ್ಷದ ವ್ಯಕ್ತಿ.

ವಾರಕ್ಕೆ 70 ಗಂಟೆಗೂ ಹೆಚ್ಚು ದುಡಿಯುತ್ತಿದ್ದಾರೆ ಭಾರತದ ಮಹಿಳೆಯರು.