ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಆಟೋ ನಿಲ್ದಾಣದ ಆಟೋ ಶೆಲ್ಟರ್ ಉದ್ಘಾಟಿಸಿದ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್

ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ನಗರದ ಹೊಸನಗರ ಬಡಾವಣೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ (ಜೈಲು ವೃತ್ತ)ದ ಬಳಿ ಗೆಳೆಯರ ಬಳಗ ಆಟೋ ನಿಲ್ದಾಣಕ್ಕೆ ಪಾಲಿಕೆ ಸದಸ್ಯರ ಅನುದಾನದಲ್ಲಿ ಆಟೋ ಶೆಲ್ಟರ್ ನಿರ್ಮಾಣಗೊಂಡಿದ್ದು ಇಂದು ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಉದ್ಘಾಟನೆ ನೆರವೇರಿಸಿದರು.
ಅಲ್ಲದೆ ಹೊಸಮನೆ 1ನೇ ಮುಖ್ಯ ರಸ್ತೆಯ ಡಾ. ಪುನೀತ್‍ರಾಜ್‍ಕುಮಾರ್ ರಸ್ತೆಯ ಬನಶಂಕರಿ ಆಟೋ ನಿಲ್ದಾಣಕ್ಕೆ ನೂತನ ಆಟೋ ಶೆಲ್ಟರ್ ನಿರ್ಮಿಸಿದ್ದು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಈ ಆಟೋ ನಿಲ್ದಾಣ ಸಂಪೂರ್ಣ ಕನ್ನಡಮಯವಾಗಿದ್ದು, ಸಾಹಿತಿಗಳ, ಚಿತ್ರನಟರ, ಸಾಧಕರ ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ, ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ, ಡಾ. ರಾಜ್‍ಕುಮಾರ್, ಶಂಕರನಾಗ್, ಡಾ. ವಿಷ್ಣುವರ್ಧನ್ ಅಂಬರೀಷ್, ಪುನೀತ್ ರಾಜ್‍ಕುಮಾರ್, ಸಾಲುಮರದ ತಿಮ್ಮಕ್ಕ, ಮಂಜಮ್ಮ ಜೋಗತಿ ಇವರ ಭಾವಚಿತ್ರಗಳನ್ನು ಅನಾವರಣ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್, ಆಟೋ ಚಾಲಕರಿಗೆ ಅನುಕೂಲವಾಗಲಿ ಎಂದು ಈ ನಿಲ್ದಾಣ ಸ್ಥಾಪನೆ ಮಾಡಲಾಗಿದೆ. ಇದರ ಸದುಪಯೋಗ ಅವರು ಮಾಡಿಕೊಳ್ಳಲಿ. ಇಲ್ಲಿಗೆ ಬಂದವರು ಕೂಡ ಸಾಧಕರ ಫೋಟೋಗಳನ್ನು ಗಮನಿಸಲಿ ಎಂಬ ದೃಷ್ಟಿಯಿಂದ ಸುಸಜ್ಜಿತವಾದ ಆಟೋ ನಿಲ್ದಾಣ ನಿರ್ಮಿಸಲಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ರಂಗನಾಥ್, ಆಟೋ ಚಾಲಕರು, ಮಾಲೀಕರು ಉಪಸ್ಥಿತರಿದ್ದರು.

Related posts

ಪದವೀಧರರು-ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿ -ಡಿಸಿ ಡಾ. ಆರ್.ಸೆಲ್ವಮಣಿ

ಮಹಿಳೆಯರಿಗೆ ಶಾಕ್: ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ತಾತ್ಕಾಲಿಕ  ಬ್ರೇಕ್

ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ 94ನೇ ವರ್ಷದ ಶ್ರೀ ವಿನಾಯಕೋತ್ಸವ: 21 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ.