ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನ.7ರಂದು ಪೋದಾರ್ ಇಂಟರ್‍ನ್ಯಾಷನಲ್ ಶಾಲೆಗೆ ಪ್ರತಿಭಾವಂತ ಫುಟ್ಬಾಲ್ ತಾರೆ ಜೇಮೀನೈಟ್

ಶಿವಮೊಗ್ಗ: ಜಗತ್ತಿನ ಪ್ರತಿಭಾವಂತ ಫುಟ್ಬಾಲ್ ತಾರೆ ಜೇಮೀನೈಟ್ ಅವರು ನ.7ರಂದು ವಡ್ಡಿನಕೊಪ್ಪದಲ್ಲಿರುವ ಪೋದಾರ್ ಇಂಟರ್‍ನ್ಯಾಷನಲ್ ಶಾಲೆಗೆ ಭೇಟಿ ನೀಡಿ, ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರಾದ ಸುಕೇಶ ಸೇರಿಗಾರ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಥಮ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಜೇಮೀನೈಟ್ ಫುಟ್ಬಾಲ್ ಕ್ರೀಡಾಲೋಕದಲ್ಲಿ ಅತ್ಯಂತ ಅನುಭವೀ ಹಾಗೂ ಬೇಡಿಕೆಯಲ್ಲಿರುವ ಕ್ರೀಡಾಪಟು. ಜಗತ್ತಿನ ಮೊದಲ 10 ಸ್ಥಾನದಲ್ಲಿ ಒಬ್ಬರಾಗಿರುವ ಜೇಮಿನೈಟ್, ಪೋದಾರ್ ಸಂಸ್ಥೆಯು ಕ್ರೀಡೆಗೆ ನೀಡುತ್ತಿರುವ ಆದ್ಯತೆಯ ಭಾಗವಾಗಿ ಹಮ್ಮಿಕೊಂಡಿರುವ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಫುಟ್‍ಬಾಲ್ ತರಬೇತಿ ನೀಡಲಿದ್ದಾರೆ ಎಂದರು.
ಜೇಮೀನೈಟ್ ಅವರು ತಮ್ಮ ಕಾಲ್ಚಳಕ ಮತ್ತು ಚೆಂಡಿನ ನಿಯಂತ್ರಣದ ತಂತ್ರಗಾರಿಕೆಯಲ್ಲಿ ಪರಿಣತರಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಜಗತ್ತಿನಾದ್ಯಂತ ಅವರು ಸಂಚರಿಸುತ್ತಾ, ಫುಟ್ಬಾಲ್ ಕ್ರೀಡೆಯ ಜನಪ್ರಿಯತೆ ಹೆಚ್ಚಿಸುತ್ತಿರುವುದಲ್ಲದೆ ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ ಎಂದ ಅವರು, ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದು, ನಂತರ ನಗರದ ಫುಟ್ಬಾಲ್ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಪ್ರಾಂಶುಪಾಲೆ ಹೆಚ್. ನೇತ್ರಾ, ಕಾರ್ಯಕ್ರಮ ಸಂಯೋಜಕಿ ಜಿ.ಕೆ. ಸಾವಿತ್ರಮ್ಮ, ಶಿಕ್ಷಕಿ ದೀಪಾ, ಆಡಳಿತಾಧಿಕಾರಿ ಶಿವಕುಮಾರ್ ಉಪಸ್ಥಿತರಿದ್ದರು.

Related posts

ಪರಿಷತ್ ಗೆ ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ನಾಲ್ವರು ಸಚಿವರಿಂದ ವಿರೋಧ: ಹೈಕಮಾಂಡ್ ಗೆ ಪತ್ರ

ಕರಕುಚ್ಚಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಉತ್ತಮ ಶಾಲೆ ಪ್ರಶಸ್ತಿ.

ರಾಜ್ಯದಲ್ಲಿ ಬರಗಾಲ: ಕೇಂದ್ರ ಸರ್ಕಾರ ನೆರವಿಗೆ ಬರುವಂತೆ ಆಗ್ರಹ.