ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅ.7ರಂದು ಗಾನಸಂಜೆ `ಕಾವ್ಯ ಸಲ್ಲಾಪ’ ಕಾರ್ಯಕ್ರಮ

ಶಿವಮೊಗ್ಗ: ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಅ.7ರಂದು ಸಂಜೆ ಗಂಟೆಗೆ ಕುವೆಂಪು ರಂಗಮAದಿರದಲ್ಲಿ ಕನ್ನಡ ಕವಿಗಳ ಕಾವ್ಯಾಧಾರಿತ ಚಲನಚಿತ್ರಗೀತೆಗಳ ಗಾನಸಂಜೆ `ಕಾವ್ಯ ಸಲ್ಲಾಪ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಜೋಯಿಸ್ ರಾಮಾಚಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ. ಹಳೆಯ ಹಾಡುಗಳು ಎಲ್ಲರಿಗೂ ಪ್ರಿಯವಾಗುತ್ತವೆ. ಅದರಲ್ಲೂ ಕನ್ನಡ ಕವಿಗಳ ಸಾಹಿತ್ಯ ಬಳಸಿಕೊಂಡು ಚಲನಚಿತ್ರದಲ್ಲಿ ಅಳವಡಿಸಿಕೊಂಡಿರುವುದು ವಿಶೇಷವಾಗಿದೆ. ಇಂತಹ ಕನ್ನಡದ ಖ್ಯಾತ ಕವಿಗಳ ರಚನೆಗಳ ಚಲನಚಿತ್ರಗೀತೆಗಳನ್ನು ಕವಿಗಳ ಪರಿಚಯದೊಂದಿಗೆ ಪ್ರಸ್ತುತಪಡಿಸಲಾಗುವುದು ಎಂದರು.
ಈ ಗಾಯನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಗಾಯಕರಾದ ಮಂಗಳಾ ರವಿ, ಶ್ರೀರವಿ, ಶಿವಮೊಗ್ಗದ ಹಾಡುಗಾರರಾದ ಪೃಥ್ವಿ ಗೌಡ, ಪಾರ್ಥಚಿರಂತನ್ ಭಾಗವಹಿಸುತ್ತಾರೆ. ಈ ಕಾರ್ಯಕ್ರಮವು ಕೇಳುಗರಿಗೆ ನೋಡುಗರಿಗೆ ಅಪರೂಪದ ಅನುಭವ ಕೊಡುತ್ತದೆ ನಮ್ಮ ನಂಬಿಕೆ. ಆಸಕ್ತರು ತಪ್ಪದೆ ಈ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡಿನ ಲೋಕದಲ್ಲಿ ವಿಹರಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಸಂಜೆ 7-30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಕೈಗಾರಿಕೋದ್ಯಮಿ ಕರ್ನಾಟಕ ಸಾಧಕ ಪ್ರಶಸ್ತಿ ಪುರಸ್ಕೃತ ಬಿ.ಸಿ. ನಂಜುAಡಶೆಟ್ಟರಿಗೆ ಅಭಿನಂದಿಸಲಾಗುವುದು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿ, ಉದ್ಯಮಿ ಹೆಚ್.ಎಸ್. ಶಿವಶಂಕರ್ ಉಪಸ್ಥಿತರಿರುವರು ಎಂದರು.
ಅಜೇಯ ಸಂಸ್ಕೃತಿ ಬಳಗವು ಈಗಾಗಲೇ ಹಲವು ಕಾರ್ಯಕ್ರಮ ನೀಡುವ ಮೂಲಕ ಗಮನಸೆಳೆದಿದೆ. ಖ್ಯಾತ ಕಾದಂಬರಿಕಾರರ, ವಾಗ್ಮಿಗಳ ಉಪನ್ಯಾಸಗಳನ್ನು ಏರ್ಪಡಿಸಿದೆ. ಮಕ್ಕಳಿಗಾಗಿ ಪದಬಂಧ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಿದೆ. ಇದೀಗ ಸಂಗೀತ ಕಾರ್ಯಕ್ರಮದ ಮೂಲಕ ಮತ್ತಷ್ಟು ಜನರ ತಲುಪಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಸೊಗಸು ಸವಿಯಬೇಕು ಎಂದು ಕಾರ್ಯದರ್ಶಿ ಆರ್. ಅಚ್ಯುತರಾವ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಜೇಯ ಸಂಸ್ಕೃತಿ ಬಳಗದ ವಿನಯ್ ಶಿವಮೊಗ್ಗ, ನಾಗೇಶ್, ಕುಮಾರ ಶಾಸ್ತಿç, ಚೇತನ್, ಹರೀಶ್ ಮುಂತಾದವರಿದ್ದರು.

Related posts

ಆಕಾಶವಾಣಿಯಲ್ಲಿ ನವದೇವಿ ದರ್ಶನ- ನವರಾತ್ರಿ ವಿಶೇಷ ಕಾರ್ಯಕ್ರಮ ಸರಣಿ

ರೋಟರಿ ಮಲೆನಾಡು ಸಂಸ್ಥೆಯಿಂದ ಶಿಕ್ಷಕರಿಗೆ ಸನ್ಮಾನ

44 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಎಲ್ಲೆಡೆ  ಭದ್ರತೆ ಒದಗಿಸಲು ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ.