ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ಭಾರತವಿಲ್ಲದೆ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ : ಹಾಡಿ ಹೊಗಳಿದ ನಾರ್ವೆ ಸಚಿವ

ನವದೆಹಲಿ : ಭಾರತವಿಲ್ಲದೆ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ  ಎಂದು ನಾರ್ವೆ ದೇಶದ ಸಚಿವರೊಬ್ಬರು ಭಾರತವನ್ನ ಹಾಡಿ ಹೊಗಳಿದ್ದಾರೆ.

ನಾರ್ವೆ ದೇಶ ಡೆಪ್ಯುಟಿ ವಿದೇಶಾಂಗ ಸಚಿವ ಆಂಡ್ರಿಯಾಸ್ ಮೋಟ್ಜ್ಫೆಲ್ಡ್ ಕ್ರಾವಿಕ್, ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಹಾಡಿ ಹೊಗಳಿದ್ದು, ಪ್ರಮುಖ ವಿಚಾರ ಅಥವಾ ಯಾವುದೇ ಸಮಸ್ಯೆಗಳು ಅಂತಾ ಬಂದಾಗ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವನ್ನು ಪ್ರಗತಿಗೆ ‘ಮೂಲಭೂತ’ವಾಗಿ ನೋಡುತ್ತೇವೆ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ  ಮಾತನಾಡಿದ ಕ್ರಾವಿಕ್, ಭಾರತವು ಪರಿಹಾರದ ಭಾಗವಾದೇ ಯಾವುದೇ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಜಾಗತಿಕ ಪರಿಹಾರ ಹುಡುಕುವುದು ಅಸಾಧ್ಯ ಹವಾಮಾನ ಬದಲಾವಣೆಯನ್ನು ಎದುರಿಸುವುದು, ಬಹುಪಕ್ಷೀಯತೆಯನ್ನು ವಿಸ್ತರಿಸುವುದು, ಅಂರಾರಾಷ್ಟ್ರೀಯ ಕಾನೂನಿನಲ್ಲಿ ಆಧಾರವಾಗಿರುವ ಪರಿಹಾರಗಳನ್ನು ಕಂಡುಹಿಡಿಯುವುದು ಸೇರಿದಂತೆ ನಮ್ಮ ಕಾಲಘಟ್ಟದ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಪ್ರಗತಿಗಾಗಿ ನಾವು ಭಾರತವನ್ನು ಮೂಲಭೂತವಾಗಿ ನೋಡುತ್ತೇವೆ ಮತ್ತು ಭಾರತವಿಲ್ಲದೆ ಯಾವುದೇ ಜಾಗತಿಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಅನೇಕ ಸಂದರ್ಭಗಳಲ್ಲಿ ವಿವಿಧ ಸಚಿವಾಲಯಗಳ ಬಳಿ ಹೇಳಿದ್ದೇನೆ ಎಂದರು.

ಭಾರತ-ನಾರ್ಡಿಕ್ ಶೃಂಗಸಭೆಯ ಕುರಿತು ಮಾತನಾಡಿದ ಕ್ರಾವಿಕ್, ನಮ್ಮ ಪಾಲುದಾರಿಕೆಯು ಮುಂದುವರಿಯುವುದನ್ನು ನಾವು ನೋಡುತ್ತಿರುವ ಸಂದರ್ಭದಲ್ಲಿ ಈ ಶೃಂಗಸಭೆಯು ನಮ್ಮ ಎರಡೂ ಸರ್ಕಾರಗಳಿಗೆ ನಂಬಿಕೆಯ ಒಪ್ಪಂದವಾಗಿದೆ ಎಂದು ಹೇಳಿದರು. ಉನ್ನತ ಮಟ್ಟದ ಭೇಟಿಗಳ ನಡುವೆ ಕ್ರಾವಿಕ್ ಅವರು ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಓಸ್ಲೋಗೆ ಭೇಟಿ ನೀಡುವಂತೆ ಆಹ್ವಾನಿಸಿರುವುದಾಗಿ ಬಹಿರಂಗಪಡಿಸಿದರು. ಮುಂದಿನ ವರ್ಷ ನಡೆಯಲಿರುವ ನಾರ್ಡಿಕ್-ಇಂಡಿಯಾ ಶೃಂಗಸಭೆಯಲ್ಲಿ ಭಾರತದ ಪ್ರಧಾನ ಮಂತ್ರಿಯನ್ನು ನೋಡಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.

ಭಾರತವನ್ನು ಮಾರುಕಟ್ಟೆಯಾಗಿ ಹೇಗೆ ನೋಡುತ್ತಾರೆ ಎಂಬುದರ ಕುರಿತು ಮಾತನಾಡಿದ ಕ್ರಾವಿಕ್, ಭಾರತೀಯ ಮಾರುಕಟ್ಟೆಯೊಂದಿಗೆ ತೊಡಗಿಸಿಕೊಳ್ಳುವುದು ಆರ್ಥಿಕ ಕಾರಣಗಳಿಗಾಗಿ ಮಾತ್ರವಲ್ಲದೆ ರಾಜಕೀಯ ಕಾರಣಗಳಿಗಾಗಿಯೂ ತುಂಬಾ ಮುಖ್ಯವಾಗಿದೆ ಮತ್ತು ನಾರ್ವೆ, ಭಾರತವನ್ನು ‘ಸೇತುವೆ ನಿರ್ಮಾಣಕಾರ’ ಎಂದು ನೋಡುತ್ತದೆ ಗುಣಗಾನ ಮಾಡಿದರು.

 

Related posts

ಟ್ಯಾಂಕರ್ ಗೆ ಮದುವೆ ಮುಗಿಸಿ ಬರುತ್ತಿದ್ದ ಕಾರು ಡಿಕ್ಕಿ: ಐವರು ಸಾವು .

ಹಳೆಯ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಲು ಅನುಮತಿ ನೀಡಿ ಆದೇಶ

ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಕೇಸರಿ ಧ್ವಜ, ಬಂಟಿಂಗ್ಸ್ ಹಾಕಲು ನಿರ್ಬಂಧ ವಿಧಿಸಿಲ್ಲ- ಎಸ್ಪಿ ಮಿಥುನ್‍ ಕುಮಾರ್ ಸ್ಪಷ್ಟನೆ