ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ವರ್ಷವೂ `ಉಚಿತ ಸೈಕಲ್’ ವಿತರಣೆ ಇಲ್ಲ!

ಬೆಂಗಳೂರು : ಪ್ರತಿವರ್ಷ 8ನೇ ತರಗತಿಗೆ ಉಚಿತ ಸೈಕಲ್ ವಿತರಣೆ ಮಾಡಲಾಗುತ್ತಿದ್ದು ಕಳೆದ ಕೆಲ ವರ್ಷಗಳಿಂದ ಇದಕ್ಕೆ ಬ್ರೇಕ್ ಬಿದ್ದಿದೆ. ಅಂತೆಯೇ ಈ ವರ್ಷವೂ ಸಹ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ವರ್ಷವೂ `ಉಚಿತ ಸೈಕಲ್’ ವಿತರಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ

ಈ ಕುರಿತು ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ,  ಸರ್ಕಾರಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿಗಳಿಗೆ ಈ ಬಾರಿಯೂ ಸೈಕಲ್ ವಿತರಣೆ ಇಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಾರಿಯೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಸಾಧ್ಯವಿಲ್ಲ. ಎಸ್.ಸಿ. ಎಸ್ ಟಿ ಮಕ್ಕಳಿಗೆ ಮಾತ್ರ ಲ್ಯಾಪ್ ಟಾಪ್ ವಿತರಣೆಯಾಗಲಿದೆ. ಪ್ರತಿ ಮನೆಗೆ 2 ಸಾವಿರ ರೂ. ನೀಡುತ್ತಿರುವುದರಲ್ಲಿ ಉಳಿತಾಯ ಮಾಡಿ ಪೋಷಕರೆ ಸೈಕಲ್ ಹಾಗೂ ಲ್ಯಾಪ್ ಟ್ಯಾಪ್ ಕೊಡಿಸಬಹುದು ಎಂದರು.

ಶೀಘ್ರವೇ ನ್ಯಾಯಲಯದ ತೀರ್ಪು ಹೊರಬೀಳಲಿದ್ದು, 13,500 ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆ ನೀಗಿಸಲಾಗುವುದು. ರಾಜ್ಯಾದ್ಯಂತ 2 ಸಾವಿರ ಕೆಪಿಎಸ್ ಶಾಲೆ ಆರಂಭಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ 600 ಶಾಲೆ ತೆರೆಯಲಾಗುವುದು ಎಂದು ಹೇಳಿದ್ದಾರೆ.

 

Related posts

ಹಬ್ಬದ ರೀತಿಯಲ್ಲಿ ಪೌರ ಕಾರ್ಮಿಕರ ಕ್ರೀಡಾಕೂಟ-ಪಾಲಿಕೆ ಮೇಯರ್ ಶಿವಕುಮಾರ್

ಪತ್ರಿಕಾ ವಿತರಕರ ದಿನಾಚರಣೆ: ಪತ್ರಿಕಾ ವಿತರಕರಿಗೆ ಸನ್ಮಾನ.

ಮನೋವಿಕಾಸಕ್ಕೆ ಗೆಲ್ಲಬೇಕು ಮನೋವಿಕಾರ: ಪಂಡಿತಾರಾಧ್ಯ ಶ್ರೀ