ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಯಾವುದೇ ಕಾಲೇಜಿನ ಕ್ರಿಯಾಶೀಲತೆಯ ಸಂಕೇತ ಅಲ್ಲಿರುವ ಎನ್. ಎನ್. ಎಸ್. : ಡಾ. ಅರುಣ್ ಹೊಸಕೊಪ್ಪ

 

ಶಿವಮೊಗ್ಗ:  ಎನ್. ಎಸ್. ಎಸ್.ಬದುಕುವುದನ್ನು ಕಲಿಸುವ ವೇದಿಕೆ. ಶಿಸ್ತು, ಸರಳತೆ, ಸಮಯಪಾಲನೆ, ಕ್ರಿಯಾಶೀಲತೆ ಇವೆಲ್ಲವೂ ನಮ್ಮ ಬದುಕಿಗೆ ಹೇಳಿಕೊಡುವ ರಾಷ್ಟ್ರೀಯ ಸೇವಾ ಯೋಜನೆ ನಿಜಕ್ಕೂ ದೇಶದಕ್ಕೆ ಸಂಪನ್ಮೂಲವಿದ್ದಂತೆ. ಈ ದೇಶದ ಸತ್ ಪ್ರಜೆಗಳನ್ನು ನಿರ್ಮಾಣ ಮಾಡುವ ಬಹುದೊಡ್ಡ ಹೊಣೆಗಾ ರಿಕೆಯನ್ನು ಅದು ನಿರ್ವಹಿಸುತ್ತಿದೆ. ಸಾಂಸ್ಕøತಿಕವಾಗಿಯೂ ನಮ್ಮನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಎನ್. ಎಸ್. ಎಸ್. ಮುಖ್ಯ ಕಾರಣ. ಅದು ಯಾವುದೇ ಕಾಲೇಜಿನ ಕ್ರಿಯಾಶೀಲತೆಯ ಸಂಕೇತ ” ಎಂದು ಬೆಂಗಳೂರಿನ ನೈಋತ್ಯ ಪತ್ರಿಕೆಯ ಸಂಪಾದಕರೂ , ಹಿರಿಯ ಎನ್ ಎಸ್. ಎಸ್. ಸ್ವಯಂ ಸೇವಕರೂ ಅದ ಡಾ. ಅರುಣ್ ಹೊಸಕೊಪ್ಪ ಅವರು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆಜಾದಿ ಕ ಅಮೃತ್ ಮಹೋತ್ಸವ, ಕನ್ನಡ ನುಡಿ ಮಂಟಪ ಹಾಗೂ 2022-23 ನೆ ಸಾಲಿನ ಎನ್. ಎಸ್ ಎಸ್. ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎನ್ ಎಸ್ ಎಸ್ ಸಂಯೋಜನಾಧಿಕಾರಿಗಳಾದ ಡಾ. ಪರಿಸರ ನಾಗರಾಜ್ ಅವರು ” ಪರಿಸರ ಉಳಿಸುವ ಆಂದೋಲನ ನಮ್ಮ ಆದ್ಯತೆಯಾಗಬೇಕು. ಪ್ಲಾಸ್ಟಿಕ್ ವಿರೋಧಿ ಧೋರಣೆ ಇಲ್ಲಿಂದಲೇ ಆರಂಭವಾಗಬೇಕು.” ಎಂದರು. ಪ್ರಾಧ್ಯಾಪಕರಾದ ಡಾ. ಕುಂದನ್ ಬಸವರಾಜ, ಡಾ. ಗಿರಿಧರ್ ಕೆ. ವಿ, ಡಾ. ಶಿವಮೂರ್ತಿ ಎ. ಶ್ರೀ ಪರಶುರಾಮ ಎಂ.ಕಾರ್ಯಕ್ರಮದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿರುವ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ. ಕೆ. ವೀಣಾ ಅವರು ಮಾತನಾಡಿ, ದ್ವೇಷ ಅಸೂಯೆಗಳಿಲ್ಲದ ಸ್ನೇಹ ಪೂರ್ಣ, ಸೃಜಶೀಲ ವ್ಯಕ್ತಿತ್ವ ವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳ ಬೇಕು. ಕಾಲೇಜು ಅಂದರೆ ಬರಿ ಕಟ್ಟಡ ಮಾತ್ರ ಅಲ್ಲ. ಅಲ್ಲಿನ ಚೇತನಗಳೆಂದರೆ ವಿದ್ಯಾರ್ಥಿಗಳು. ಪ್ರತಿಭಾವಂತ ಯುವ ಸಮೂಹದಿಂದ ಯಾವುದೇ ಕಾಲೇಜು ಶೋಭಿಸುತ್ತದೆ.” ಎಂದರು.
ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳು ಜಾನಪದ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಎನ್.ಎಸ್.ಎಸ್. ಸಾಧಕರಾದ ಶ್ರೀ ಮಾಲತೇಶ್ ಎಚ್., ಶ್ರೀ ಕೌಶಿಕ್ ಇವರನ್ನು ಸನ್ಮಾನಿಸಲಾಯಿತು. ಶ್ರೀ ಸ್ವರೂಪ್ ಶ್ರೀ ಸಿದ್ಧಾರೂಢ ಕು. ನಿರೀಕ್ಷಾ ಕು. ಇಳಾ ಉಪಸ್ಥಿತರಿದ್ದರು.
ಡಾ. ಶುಭಾ ಮರವಂತೆಯವರು ಪ್ರಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಅರ್ಪಿತ ಹಾಗೂ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

Related posts

ಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪ: ಬಿಎಸ್ ವೈ ವಿರುದ್ಧ ವೈ.ಬಿ. ಚಂದ್ರಕಾಂತ್ ಕಿಡಿ

ಸರ್ಕಾರಕ್ಕೆ ಒಳ್ಳೆ ಹೆಸರು ತನ್ನಿ,‌ ಕೆಲಸ ಮಾಡೋ ಆಸಕ್ತಿ ಇಲ್ಲ ಅಂದ್ರೆ ಜಾಗ ಖಾಲಿ- ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್  ವಾರ್ನಿಂಗ್.

ನಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲ್ಲ- ಶಾಸಕ ಎಸ್.ಟಿ ಸೋಮಶೇಖರ್.