ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯಶಿವಮೊಗ್ಗ

ಐಸಿಎಸ್‌ಇ : ರಾಷ್ಟ್ರೀಯ ವಾಲೀಬಾಲ್ ತಂಡಕ್ಕೆ ನಿಯಾತಿ ಆಯ್ಕೆ

ಇದೇ ಅಕ್ಟೋಬರ್ 4 ಮತ್ತು 5 ರಂದು ತಮಿಳುನಾಡು ರಾಜ್ಯದ ಊಟಿಯಲ್ಲಿ ನೆರವೇರಿದ ಐಸಿಎಸ್‌ಇ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ತಂಡವನ್ನು ರೋಚಕ ಹಣಾಹಣಿಯಲ್ಲಿ ಮಣಿಸಿ ಚಾಂಪಿಯನ್ ಪಟ್ಟ ಗಳಿಸಿಕೊಂಡಿದೆ.

ಕರ್ನಾಟಕ ತಂಡದ ನಾಯಕಿಯಾಗಿ ಮುನ್ನಡೆಸಿದ ಜಿ.ಕೆ. ನಿಯಾತಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಿಯಾತಿ ಯವರ ಆಟವನ್ನು ಗುರುತಿಸಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆಮಾಡಲಾಗಿದೆ.

ನಿಯಾತಿ ಯವರ ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿ ಅವರೇಕಾಡು ಗ್ರಾಮದ ದಿವಂಗತ ಗಿಡ್ಡೇಗೌಡ ಶ್ರೀಮತಿ ಸುಂದರಮ್ಮ ಅವರ ಮೊಮ್ಮಗಳು.
ಕುಮಾರಿ ನಿಯಾತಿ ಅವರ ತಂದೆ ಜೆ.ಡಿ.ಕುಮಾರಸ್ವಾಮಿ ಮೂಲತಃ ತೀರ್ಥಹಳ್ಳಿ ತಾಲ್ಲೂಕಿನ ಜಾವಗಲ್ ಗ್ರಾಮದವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಸಹ ಉತ್ತಮ ವಾಲಿಬಾಲ್ ಪಟುವಾಗಿದ್ದು ಬೆಂಗಳೂರು ಅರ್ಬನ್ ಡಿಷ್ಟ್ರಿಕ್ಟ್ ವಾಲಿಬಾಲ್ ಅಸೋಷಿಯೇಷನ್ ಉಪಾಧ್ಯಕ್ಷರಾಗಿದ್ದಾರೆ.

ನಿಯಾತಿ ಯವರ ತಾಯಿ ಶ್ರೀಮತಿ ಅನಿತಾ ಅವರು ಥ್ರೋಬಾಲ್ ಕ್ರೀಡಾಪಟುವಾಗಿದ್ದು, ಈ ಹಿಂದೆ ಅವರೇಕಾಡು ತಂಡದ ಮೂಲಕ ಜಿಲ್ಲಾಮಟ್ಟ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಇವರ ಸಹೋದರಿಯರು ಸಹ ಥ್ರೋಬಾಲ್ ಕ್ರೀಡೆಯಲ್ಲಿ ಹೆಸರು ಮಾಡಿದ್ದರು.

ಹೀಗೆ ಕ್ರೀಡಾಕುಟುಂಬದ ಹಿನ್ನಲೆಯ ಜಿ.ಕೆ. ನಿಯಾತಿ ಇಂದು ರಾಷ್ಟ್ರಮಟ್ಟದಲ್ಲಿ ವಾಲಿಬಾಲ್ ಕ್ರೀಡೆಯಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾರೆ.

ಕುಮಾರಿ ನಿಯಾತಿ ಬೆಂಗಳೂರು ಜಯನಗರದ ಶ್ರೀರಾಮ ವಿದ್ಯಾಲಯದಲ್ಲಿ ಹತ್ತನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಾರೆ. ನಿಯಾತಿ ವಾಲಿಬಾಲ್ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಶಾಲಾ ಹಂತ, ಜಿಲ್ಲಾ ಮಟ್ಟ, ರಾಜ್ಯಮಟ್ಟದಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ ರಾಜ್ಯತಂಡದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಇವರ ನಾಯಕತ್ವದಲ್ಲಿ ಕರ್ನಾಟಕ ತಂಡ ರಾಷ್ಟ್ರಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ನಿಯಾತಿ ಆಟವನ್ನು ಗುರುತಿಸಿ ರಾಷ್ಟ್ರೀಯ ತಂಡಕ್ಕೆ ಅಯ್ಕೆಮಾಡಲಾಗಿದೆ.

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿರುವ ನಿಯಾತಿ ಸಾಧನೆಗೆ ಬೆಂಗಳೂರು ಶ್ರೀರಾಮ ವಿದ್ಯಾಲಯ ಆಡಳಿತ ಮಂಡಳಿ, ಶಿಕ್ಷಕರು, ನಿಯಾತಿ ಪೋಷಕರು ಮತ್ತು ಕುಟುಂಬದವರು ಶುಭಾಶಯ ಕೋರಿದ್ದಾರೆ.

Related posts

ರಾಗಿಗುಡ್ಡದಲ್ಲಿ ಹಿಂದೂಗಳ ಮನೆಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ದುಷ್ಕರ್ಮಿಗಳ ಬಂಧಿಸುವಂತೆ ಆಗ್ರಹ,ಪ್ರತಿಭಟನೆ.

ಅಪ್ಪು ಪುಣ್ಯಸ್ಮರಣೆ: ತಮ್ಮನನ್ನು ನೆನದು ಭಾವುಕರಾದ ನಟ ಶಿವಣ್ಣ…

ಮುಂದೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ: ಮಲ್ಲಿಕಾರ್ಜುನ ಖರ್ಗೆ ಭವಿಷ್ಯ..