ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ನ್ಯೂ ಮಂಡ್ಲಿ ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣ ಇನ್ನೆರಡು ತಿಂಗಳಿನಲ್ಲಿ ಪೂರ್ಣ- ಶಾಸಕ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ,ಡಿ.02: ನ್ಯೂ ಮಂಡ್ಲಿಯಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಇನ್ನೆರಡು ತಿಂಗಳಿನಲ್ಲಿ ಪೂರ್ಣಗೊಳಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಮಂಡ್ಲಿಯಲ್ಲಿರುವ ಶಾಲಾ ಕಟ್ಟಡ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ದೂರುಗಳು ಬಂದಿದ್ದು ಅದರ ಪರಿಶೀಲನೆಗಾಗಿ ಆಗಮಿಸಿ ಸಂಬಂಧ ಪಟ್ಟ ಅಧಿಕಾರಿಗಳೊಡನೆ ಚರ್ಚಿಸಿ ನಂತರ ಮಾತನಾಡಿದರು.
ಮಂಡ್ಲಿ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಹಿಂದಿನ ಶಾಸಕ ಕೆ.ಎಸ್. ಈಶ್ವರಪ್ಪನವರು 1 ಕೋಟಿ ರೂ.ನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಕೆಲಸ ತುಂಬ ವಿಳಂಬವಾಗುತ್ತಿತ್ತು ಅಲ್ಲಿ ಕನ್ನಡ ಮತ್ತು ಉರ್ದುಶಾಲೆಗಳಿವೆ. ಹಳೆಯ ಉರ್ದು ಶಾಲೆಯ ಕಟ್ಟಡದ ಜಾಗಕ್ಕೆ ಸಂಬಂಧಿಸಿದಂತೆ ವಿವಾದವಿತ್ತು. ಅದು ಸಮಾಧಿಯ ಜಾಗ ಎಂದು ಹೇಳಲಾಗುತ್ತಿತ್ತು. ಇದರಿಂದ ಕಮಿಟಿಯವರ ತೀರ್ಮಾನದಂತೆ ಶಾಲೆಯನ್ನೇ ಬೇರೆ ಕಡೆ ವರ್ಗಾಯಿಸಲಾಗಿದೆ ಎಂದರು.
ಸರ್ವೆ ನಂ. 138ರಲ್ಲಿ 1.2 ಎಕರೆ ಜಾಗವನ್ನು ಶಾಲೆಗೆ ಮತ್ತು ನೀರಿನ ಟ್ಯಾಂಕಿಗೆ ನೀಡಲಾಗಿದೆ ಈ ಬಗ್ಗೆ ಕಂದಾಯ ಸಚಿವರ ಜೊತೆ ಈ ಬಗ್ಗೆ ಮಾತನಾಡುತ್ತೇನೆ. ಅಲ್ಲಿರುವ ತೊಂದರೆಗಳನ್ನು ನಿವಾರಿಸಿ ಶೀಘ್ರದಲ್ಲೇ ಶಾಲಾ ಕೊಠಡಿಗಳನ್ನು ನಿರ್ಮಿಸುವಂತೆ ಗುತ್ತಿಗೆದಾರನಿಗೆ ಮತ್ತು ಅಧಿಕಾರಿಗೆ ಹೇಳಲಾಗಿದೆ. ಶಾಲೆ ಕಟ್ಟಲು ಯಾವ ಅಭ್ಯಂತರವು ಇಲ್ಲ ಇನ್ನೆರಡು ತಿಂಗಳಲ್ಲಿ ಕೆಳಾತಂಸ್ತಿನ 4 ರೂಮ್‍ಗಳನ್ನು ನಿರ್ಮಿಸಲು ತಿಳಿಸಿದ್ದೇವೆ. ಇನ್ನುಳಿದಂತೆ ಮೂರು ತಿಂಗಳಿನಲ್ಲಿ ಶಾಲಾ ಕೊಠಡಿಗಳು ನಿರ್ಮಾಣವಾಗುತ್ತವೆ. ಯಾವ ಗೊಂದಲವೂ ಇಲ್ಲ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗರಾಜ್, ಬಿ.ಓ. ನಾಗರಾಜ್, ಮುಸ್ಲಿಂ ಸಮುದಾಯದ ಕಮಿಟಿ ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು.
ಬಾಕ್ಸ್ : ಬೆಂಗಳೂರಿನ ಶಾಲೆಗಳ ಆವರಣಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಸುದ್ಧಿ ಹಬ್ಬಿದೆ. ಇಂತಹ ಸುದ್ದಿಗಳೆಲ್ಲ ಹಬ್ಬಲು ಮತ್ತು ನಡೆಯಲು ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ. ಈ ಸರ್ಕಾರ ಭಯೋತ್ಪಾದಕರಿಗೆ ರಕ್ಷಣೆ ಕೊಡುತ್ತಿದೆ ಈ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಲಾಗುವುದು ಎಂದು ಎಸ್.ಎನ್. ಚೆನ್ನಬಸಪ್ಪ ಎಂದರು.
ವಿಧಾನಸಭಾ ಅಧಿವೇಶನ ಸೋಮವಾದಿಂದ ಆರಂಭವಾಗಲಿದೆ ಮುಖ್ಯವಾಗಿ ಬರ ಕುರಿತಂತೆ ಚರ್ಚೆ ನಡೆಯಲಿದೆ ಎಂದರು.

Related posts

ವಿಶ್ವದ ಟಾಪ್ 10 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಗೆ 7 ನೇ ಸ್ಥಾನ

TOD News

ತುಂಗಾ ಉಳಿಸಿ ಜಾಗೃತಿ : ಛಾಯಾಚಿತ್ರ ಪ್ರದರ್ಶನ ಮತ್ತು ನದಿ ಉಳಿಸೋಣ ಕಾರ್ಯಕ್ರಮ.

ಶಾಲೆಗಳಲ್ಲಿ ಮೊಟ್ಟೆ, ಬಾಳೇಹಣ್ಣು ವಿತರಣೆ ಯೋಜನೆಗೆ ಚಾಲನೆ: ಮಕ್ಕಳ ಜೊತೆಯೇ ಕುಳಿತು ಊಟ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ.