ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಆಕಾಶವಾಣಿಯಲ್ಲಿ ನವದೇವಿ ದರ್ಶನ- ನವರಾತ್ರಿ ವಿಶೇಷ ಕಾರ್ಯಕ್ರಮ ಸರಣಿ

ಶಿವಮೊಗ್ಗ  :  ಅ.15 ರಿಂದ 23 ರವರೆಗೆ ಪ್ರತಿದಿನ ಆಕಾಶವಾಣಿ ಭದ್ರಾವತಿ ಎಫ್‍ಎಂ 103.5 & ಎಂಡಬ್ಲ್ಯು 675 KHz ತರಂಗಾಂತರದಲ್ಲಿ ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆ 9.30 ರಿಂದ 10 ಗಂಟೆವರೆಗೆ ಕರ್ನಾಟದ ಒಂಭತ್ತು ದೇವಿಯರ ಪರಿಚಯ ಆಯಾ ದೇವಾಲಯದ ಇತಿಹಾಸ ಮತ್ತು ಮಹತ್ವ ಕುರಿತು ವಿಶೇಷ ಪರಿಚಯಾತ್ಮಕ ಕಾರ್ಯಕ್ರಮ ಪ್ರಸಾರವಾಗಲಿದೆ.
ಬಾದಾಮಿ ಬನಶಂಕರಿ, ಹೊರನಾಡ ಅನ್ನಪೂರ್ಣೇಶ್ವರಿ, ಹಾಸನದ ಹಾಸನಾಂಬ, ಸಿಗಂದೂರಿನ ಚೌಡೇಶ್ವರಿ, ಕೊಲ್ಲೂರಿನ ಮೂಕಾಂಬಿಕೆ, ಸಿರ್ಸಿಯ ಮಾರಿಕಾಂಬಾ, ಕಟೀಲಿನ ದುರ್ಗಾ ಪರಮೇಶ್ವರಿ, ಶೃಂಗೇರಿಯ ಶಾರದಾಂಬೆ, ಮೈಸೂರಿನ ಚಾಮುಂಡೇಶ್ವರಿ ಕುರಿತ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ.
ವಿಶ್ವದಾದ್ಯಂತ ಪ್ರಸಾರಭಾರತಿ ‘newsonair’  ಆ್ಯಪ್‍ನಲ್ಲಿ ಭದ್ರಾವತಿ ಕೇಂದ್ರ ಮೂಲಕ ಸಹ ಪ್ರಸಾರ ಸಮಯದಲ್ಲಿ ಕೇಳಬಹುದು ಹಾಗೂ ಪ್ರಸಾರ ನಂತರ ಆಕಾಶವಾಣಿ ಭದ್ರಾವತಿ ಯೂಟ್ಯೂಬ್ ಚಾನಲ್‍ನಲ್ಲಿ ಕೇಳಬಹುದು. ಕೇಳುಗರು ಈ ಕುರಿತು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವಾಟ್ಸಾಪ್ ಸಂಖ್ಯೆ: 9481572600 ಮುಖಾಂತರ ಹಂಚಿಕೊಳ್ಳಬಹುದು ಎಂದು ಆಕಾಶವಾಣಿ ಭದ್ರಾವತಿ ಕಾರ್ಯಕ್ರಮ ಮುಖ್ಯಸ್ಥ ಎಸ್ ಆರ್ ಭಟ್ ತಿಳಿಸಿದ್ದಾರೆ.

Related posts

ಅ.18(ನಾಳೆ) ಮಲ್ನಾಡ್ ಶೈರೆ ರೆಸಾರ್ಟ್‍ನ ಉದ್ಘಾಟನಾ ಸಮಾರಂಭ.

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮನೋ ವೈದ್ಯರು ಮತ್ತು ಸಿಬ್ಬಂದಿಗಳ ಪಾತ್ರ ಮಹತ್ತರ-ಡಾ. ಚಂದ್ರಶೇಖರ್

ಡೀಪ್ ಫೇಕ್: ಕೇಂದ್ರದಿಂದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಿಗೆ 7 ದಿನದ ಗಡುವು..