ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನಾಡಹಬ್ಬ ದಸರಾ: ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವಕಾಶ ಸದುಪಯೋಗಪಡಿಸಿಕೊಳ್ಳಿ-ಮೇಯರ್ ಶಿವಕುಮಾರ್

ಶಿವಮೊಗ್ಗ: ನಾಡಹಬ್ಬ ದಸರಾ ಅಂಗವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಅತ್ಯಂತ ವಿಜೃಂಭಣೆಯಿಂದ ಸಾಂಸ್ಕøತಿಕ ಮತ್ತು ಕ್ರೀಡಾಕೂಟಗಳನ್ನು ಹಮ್ಮಿಕೊಂಡಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಮೇಯರ್ ಶಿವಕುಮಾರ್ ಹೇಳಿದ್ದಾರೆ.
ಅವರು ಇಂದು ನಗರದ ಎಸ್. ನಿಜಲಿಂಗಪ್ಪ ಸಭಾಂಗಣದಲ್ಲಿ ಮಹಿಳಾ ದಸರಾ 2023 ಇದರ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಮಹಾನಗರ ಪಾಲಿಕೆ ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ನೀಡುತ್ತಾ ಬಂದಿದೆ. ಈ ಬಾರಿಯೂ ಕೂಡ ಹಲವಾರು ಸ್ಪರ್ಧೆ ಏರ್ಪಡಿಸಿದ್ದೇವೆ. ರಂಗೋಲಿ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಮಹಿಳಾ ದಸರಾ ಅಧ್ಯಕ್ಷರಾದ ಸಂಗೀತಾ ನಾಗರಾಜ್, ವಿರೋಧ ಪಕ್ಷದ ನಾಯಕಿ ಮೇಹಕ್ ಷರೀಫ್, ಪಾಲಿಕೆ ಸದಸ್ಯರಾದ ಸುವರ್ಣಾಶಂಕರ್, ಸುನೀತಾ ಅಣ್ಣಪ್ಪ, ಆರತಿ ಆ.ಮ. ಪ್ರಕಾಶ್, ರಾಜು, ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್, ಇ. ವಿಶ್ವಾಸ್, ಮಂಜುಳಾ ಶಿವಣ್ಣ, ಕಲ್ಪನಾ ರಮೇಶ್, ಮಂಜುನಾಥ್, ವಿಶ್ವನಾಥ್, ಭಾನುಮತಿ ವಿನೋದ್ ಶೇಟ್, ಅನುಪಮಾ ಮತ್ತಿತರರಿದ್ದರು.

Related posts

ಮೂರು ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ

ರಾಜೀ ಸಂಧಾನ ಮೂಲಕ ವ್ಯಾಜ್ಯಗಳ ಪರಿಹಾರ ಕಂಡುಕೊಳ್ಳಬೇಕು : ನ್ಯಾ.ಆರ್.ದೇವದಾಸ್

ಪಟಾಕಿ ಮಾರಾಟಗಾರರ ಪರವಾನಿಗೆ, ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ-ಶಶಿಕುಮಾರ್ ಎಸ್.ಗೌಡ ನೇತೃತ್ವದಲ್ಲಿ ಪ್ರತಿಭಟನೆ.