ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಎಲ್ಲ ಸದಸ್ಯರ ಸಹಕಾರಿಂದ ಸಂಘಟನೆ ಸದೃಢ-ಎನ್.ಗೋಪಿನಾಥ್

ಶಿವಮೊಗ್ಗ: ಸಂಸ್ಥಾಪಕರು ದೂರದೃಷ್ಠಿಯಿಂದ ಸಂಘಟನೆ ಪ್ರಾರಂಭಿಸಿರುತ್ತಾರೆ. ಎಲ್ಲ ಸದಸ್ಯರ ಸಹಕಾರದಿಂದ ಸಂಘಟನೆ ಸದೃಢ ಆಗಿಸುವ ಜತೆಯಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕು ಎಂದು ಯೂತ್ ಹಾಸ್ಟೆಲ್ ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು.

ರಾಷ್ಟ್ರ ಮಟ್ಟದಲ್ಲಿ ಘಟಕ ಹೆಸರು ಮಾಡಲು ಮೂಲ ಕಾರಣ ವಿಜಯೇಂದ್ರರಾವ್. ಇವರು ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಯೋಜಿಸಿ ಅನೇಕರನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಾರೆ. ಮುವತ್ತಮೂರು ವರ್ಷದಿಂದ ಘಟಕದ ಬೆನ್ನೆಲುಬಾಗಿ ನಿಂತ್ತಿದ್ದಾರೆ ಎಂದು ತಿಳಿಸಿದರು.

ಶಿವಮೊಗ್ಗ ತರುಣೋದಯ ಘಟಕದ ಸಾವಿರಾರು ಸದಸ್ಯರು ಹಿಮಾಲಯ ಚಾರಣ ಮಾಡಲು ಅವಕಾಶ ದೊರಕಿದೆ. ಪ್ರತಿ ಸದಸ್ಯರು ತಮ್ಮ ಪರಿಚಯದವರನ್ನು ಸೇರಿಸಿ ಅವರು ಚಾರಣದಲ್ಲಿ ಉತ್ಸಹದಿಂದ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.

ಸನ್ಮಾನಿತರ ಪರವಾಗಿ ವೇಣುಗೋಪಾಲ್, ಎಸ್.ವಿ.ರಂಗಣ್ಣ ಮಾತನಾಡಿ, ಉತ್ತರ ಭಾರತದ ಚಾರಣಕ್ಕೆ ಹೋಗಬೇಕಾದಾಗ ಬೆಂಗಳೂರಿಗೆ ಹೋಗಿ ರೈಲ್ವೆ ಟಿಕೇಟ್ ಬುಕ್ ಮಾಡಬೇಕಿತ್ತು. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಘಟಕದ ಬಹಳಷ್ಟು ಸದಸ್ಯರು ಚಾರಣ ಮಾಡಿದ್ದೆವು. ಇಂದಿಗೂ ಅದು ಮುಂದುವರಿದು ದೇಶದಲ್ಲಿಯೇ ಉತ್ತಮ ಹೆಸರು ಗಳಿಸಲು ಇಂದಿನ ಆಡಳಿತ ಮಂಡಳಿ ಸದಸ್ಯರು ಕಾರಣ ಎಂದರು.

ಚೇರ್ಮನ್ ವಾಗೇಶ್ ಮಾತನಾಡಿ, ಹಿರಿಯರ ಆಶಯದಂತೆ ಹಿಂದೆ ವಿಜಯೇಂದ್ರ ರಾವ್, ಜಿ.ವಿಜಯಕುಮಾರ್ ಉತ್ತಮವಾಗಿ ನಡೆಸಿ ಕೊಂಡು ಬಂದ ಸಂಸ್ಥೆಗೆ ಸದಸ್ಯರ ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಉತ್ತಮ ಕಾರ್ಯ ಸಾಧಿಸಲು ಸಾದ್ಯವಾಗಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಜನವರಿ ತಿಂಗಳಲ್ಲಿ ರಾಜ್ಯ ಘಟಕ ರಾಷ್ಟ್ರೀಯ ಸಂಸ್ಕೃತಿ ಕಾರ್ಯಕ್ರಮ ಆಯೋಜಿಸಿದ್ದು ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸುವಂತೆ ಕೋರಿದರು.

ನೇಪಾಳ ದಿಂದ ಶಿವಮೊಗ್ಗದ ಗೋಪಾಳಕ್ಕೆ ಬೈಕ್ ರ‍್ಯಾಲಿ ಅನುಭವನ್ನು ವಿಜಯೇಂದ್ರರಾವ್ ಸಭೆಯಲ್ಲಿ ಹಂಚಿಕೊಂಡರು. ಜಿ.ವಿಜಯಕುಮಾರ್ ಪ್ರಾರ್ಥನೆ, ಸುರೇಶ್ ಕುಮಾರ್ ಪ್ರಾಸ್ತಾವಿಕ ನುಡಿ, ಮಲ್ಲಿಕಾರ್ಜುನ್, ನಾಗರಾಜ್ ತಮ್ಮ ಚಾರಣದ ಅನುಭವ ಹಂಚಿಕೊಂಡರು, ಮಮತಾ, ಭಾರತಿ, ವೇದಿಕೆಯಲ್ಲಿ ಇದ್ದರು. ಡಾ.ಪ್ರಕೃತಿ ಮಂಚಾಲೆ ವಂದಿಸಿದರು.

Related posts

ವಿಶ್ವದಲ್ಲೇ ಅತೀ ಹೆಚ್ಚು ಕ್ಷಯರೋಗ ಪ್ರಕರಣಗಳಿರುವ ದೇಶ ಭಾರತ.

ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಲಿ ಎಂದು ಹೆಚ್.ಸಿ. ಯೋಗೇಶ್ ನೇತೃತ್ವದಲ್ಲಿ ವಿಶೇಷ ಪೂಜೆ

ರಾಗಿಗುಡ್ಡ ಘಟನೆ: ಪ್ರಚೋದನಾಕಾರಿ ಹೇಳಿಕೆಗಳಿಗೆ ಕಿವಿಗೊಡದೇ ಶಾಂತಿ ಕಾಪಾಡಬೇಕು-ಆಮ್ ಆದ್ಮಿ ಪಾರ್ಟಿ ಮನವಿ.