ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನಾಳೆ ಸಾಹಿತ್ಯ ಗ್ರಾಮದಲ್ಲಿ ಬಹುಭಾಷಾ ಕವಿ ಸಮ್ಮೇಳನ

ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ನವೆಂಬರ್ 26 ರಂದು ಭಾನುವಾರ ಬೆಳಿಗ್ಗೆ 10:30ಕ್ಕೆ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಮತ್ತು ಬಹುಭಾಷಾ ಕವಿಸಮ್ಮೇಳನ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಸರ್ಜಿ ಪೌಂಡೇಷನ್ ಮುಖ್ಯಸ್ಥರಾದ ಡಾ.ಧನಂಜಯ ಸರ್ಜಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕವಯತ್ರಿ ಸವಿತಾ ನಾಗಭೂಷಣ ಭಾಗವಹಿಸಲಿದ್ದು, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಉಪಸ್ಥಿತರಿರುವರು. ತೀರ್ಥಹಳ್ಳಿ ತಾಲ್ಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಎಂ.ನವೀನ್ ಕುಮಾರ್ ಹಾಗೂ ಕರ್ನಾಟಕ ಸಂಘಕ್ಕೆ ಈ ಬಾರಿಯ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿರುವ ಹಿನ್ನಲೆಯಲ್ಲಿ ಅಧ್ಯಕ್ಷರಾದ ಎಂ.ಎನ್. ಸುಂದರರಾಜ್ ಅವರನ್ನು ಅಭಿನಂದಿಸಲಾಗುತ್ತಿದೆ. ಇದೇ ವೇಳೆ ಖಾಸಗಿ ಬಸ್ ನಿರ್ವಾಹಕರಾದ ಪ್ರಕಾಶ್, ವೇದಿಕೆ ಪದಾಧಿಕಾರಿಗಳಾದ ಮೆಸ್ಕಾಂನ ಕೆ.ಎಸ್. ಮಂಜಪ್ಪ, ನಿವೃತ್ತ ಮುಖ್ಯ ಶಿಕ್ಷಕರಾದ ಜಿ. ಕುಬೇರಪ್ಪ ಅವರನ್ನು ಸನ್ನಾನಿಸಲಾಗುತ್ತಿದೆ.
ಗಮಕ ವಾಚನಕ್ಕೆ ಪ್ರಸಾದ್ ಭಾರದ್ವಾಜ್ ಮತ್ತು ತಂಡ ಹೊಸಹಳ್ಳಿ, ಕನ್ನಡ ಕವಿಗಳಾದ ವಿಜಯಲಕ್ಷ್ಮಿ, ಮಣಿಕಂಠ ಕುಲಾಲ್, ಅನಿತಾ ಕುಲಾಲ್, ಭದ್ರಾವತಿ ನಾಗೋಜಿರಾವ್, ನಿತ್ಯಶ್ರೀ ಸುಶೀಲಾ, ಗಾಯತ್ರಿ ಎಸ್. ಕೆ., ಸಾಗರ ಸುಲೋಚನ, ಆರ್. ಕೆ. ಫ್ಯಾಷನ್ ಕುಮಾರ್, ಧರಣಿಪ್ರೀಯೆ, ಪುಷ್ಪಾವತಿ ಟಿ. ಎಸ್. ಸಾಗರ, ಉರ್ದು ಕವಿ ಶಯಿನಾ ಇರಂ, ತುಳು ಕವನವನ್ನು ಡಾ. ಆಶಾಲತಾ,  ತಮಿಳು ಕವನವನ್ನು ದೊರೆ, ಮರಾಠಿ ಕವನವನ್ನು ಪುಡೇಚಲ ಎಸ್. ಪೂರ್ಣಿಮಾ ಬಾಬು, ತೆಲುಗು ಕವನವನ್ನು ಆರ್. ರತ್ನಯ್ಯ, ಮಲೆಯಾಳಂ ಕವನವನ್ನು ಪ್ರಭಾಕರನ್, ಹಿಂದಿ ಕವನವನ್ನು ಪೂರ್ಣಿಮಾ, ಕೊಂಕಣಿ ಮಂಜುನಾಥ ಕಾಮತ್, ಕನ್ನಡದ ಕವಿಗಳು ಕೆ.ಜಿ. ವೆಂಕಟೇಶ್, ಪೂರ್ಣ ಮಲೆನಾಡು, ಕೆ. ಎನ್. ರಮೇಶ್, ನಳಿನಾ ಬಾಲಸುಬ್ರಹ್ಮಣ್ಯಂ, ಡಾ.ಗಂಗಾಧರ ಪಿ., ಬನ್ನಿಹಟ್ಟಿ, ರಾಜಲಕ್ಷ್ಮಿ, ಶಂಕರ ಜಿಗಾಡೆ ಅವರು ಕವನ ವಾಚಿಸಲಿದ್ದಾರೆ. ಸಾರ್ವಜನಿಕರು, ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮನವಿ ಮಾಡಿದ್ದಾರೆ.

Related posts

ಮನಕ್ಕೆ ಬಾರೆದೆ ಪಕ್ಷದಲ್ಲಿ‌ ಏನು ನಡೆದಿಲ್ಲ: ತೆವಲಿಗೋಸ್ಕರ ಮಾತನಾಡಬಾರದು – ಸಿಎಂ ಇಬ್ರಾಹಿಂ ವಿರುದ್ದ ಜೆಡಿಎಸ್ ಶಾಸಕ ಗುಡುಗು.

ಇನ್ನೂ 10 ಲಕ್ಷ ಮಹಿಳೆಯರಿಗೆ ಸಿಗದ ಗೃಹಲಕ್ಷ್ಮೀ ಭಾಗ್ಯ

ಪಾಲಿಕೆಯ ವಶದಲ್ಲಿರುವ ಜಾಗ ಸಿದ್ಲಿಪುರ ಗ್ರಾಮಕ್ಕೆ ಹಸ್ತಾಂತರಿಸುವಂತೆ ಆಗ್ರಹ.