ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ರಾಜ್ಯದಲ್ಲಿ ಡೆಂಗ್ಯೂ ಭೀತಿ: 10,500ಕ್ಕೂ ಹೆಚ್ಚು ಪ್ರಕರಣಗಳು ದಾಖಲು.

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಬಳಿಕ ಇದೀಗ ಡೆಂಗ್ಯೂ ಭೀತಿ ಎದುರಾಗಿದ್ದು ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದೆ. ರಾಜ್ಯದಲ್ಲಿ ಸುಮಾರು 10,500ಕ್ಕೂ ಹೆಚ್ಚು ಡೆಂಘಿ ಕೇಸ್ಗಳು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿ ಡೆಂಘಿ ಶಂಕಿತರ ಸಂಖ್ಯೆ ಲಕ್ಷದ ಗಡಿದಾಟಿದೆ. ರಾಜ್ಯದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ರಕ್ತದ ಸ್ಯಾಂಪಲ್ಸ್ ಪರೀಕ್ಷೆ ನಡೆಸಲಾಗಿದೆ. ಜ್ವರ ಬಂದ ತಕ್ಷಣ ಆಸ್ಪತ್ರೆಗೆ ಹೋಗಿ, ಯಾರೂ ನಿರ್ಲಕ್ಷ್ಯ ಮಾಡಬೇಡಿ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ದೃಢ ಪಟ್ಟಿದ್ದು, ಬೆಂಗಳೂರು ಒಂದರಲ್ಲೇ 5,756 ಕ್ಕೂ ಹೆಚ್ಚು ಡೆಂಗ್ಯೂ ಕೇಸ್ ಗಳು ದಾಖಲಾಗಿವೆ.

ಡೆಂಗ್ಯೂ ಹರಡದಂತೆ ಈ ಕೆಳಕಂಡ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುವುದು ಅಗತ್ಯ.

ಮನೆಯ ಸುತ್ತಮತ್ತು ನೀರು ನಿಲ್ಲದಂತೆ ನೋಡಿಕೊಳ್ಳಿ

ಮಕ್ಕಳಿಗೆ ಉದ್ದ ತೋಳಿನ ಉಲನ್ ಬಟ್ಟೆ ಹಾಕಿದ್ರೆ ಸೊಳ್ಳೆ ಕಚ್ಚುವುದಿಲ್ಲ

ಮಲಗುವಾಗ ಸೊಳ್ಳೆಪರದೆಗಳನ್ನು ಕಡ್ಡಾಯವಾಗಿ ಬಳಸಿ

ಅಗತ್ಯವಿದ್ದಲ್ಲಿ ಸೊಳ್ಳೆ ಬತ್ತಿಗಳನ್ನು ಉರಿಸಿ

ಸಣ್ಣ ಪ್ರಮಾಣದ ಜ್ವರ, ತಲೆನೋವು, ಸುಸ್ತು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

 

Related posts

ಕಷ್ಟಗಳನ್ನು ಅರಗಿಸಿಕೊಂಡು ಪರಿಪಕ್ವವಾದವರು ಆರ್.ಎಂ ಮಂಜುನಾಥ ಗೌಡರು-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ನುಡಿ

ಎಚ್.ಡಿ.ದೇವೇಗೌಡರು ಕಟ್ಟಿ ಬೆಳಿಸಿದ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸದೃಢ- ಎಂಎಲ್ಸಿ ಬೋಜೇಗೌಡ

ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಐತಿಹಾಸಿಕ ತೀರ್ಮಾನ-ಸಂಸದ ಬಿ.ವೈ. ರಾಘವೇಂದ್ರ