ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ದೀಪಾವಳಿ ಹಬ್ಬಕ್ಕೆ ದೇಶಾದ್ಯಂತ ವಿಶೇಷ ಸ್ಥಾನ-ಎಂ.ಎನ್.ಸುಂದರ ರಾಜ್

ಶಿವಮೊಗ್ಗ: ಭಾರತ ದೇಶದ ಹಬ್ಬಗಳಲ್ಲಿ ದೀಪಾವಳಿಗೆ ವಿಶೇಷ ಸ್ಥಾನ ಇದ್ದು, ವಿವಿಧ ಭಾಗಗಳಲ್ಲಿ ವೈಶಿಷ್ಟ್ಯಪೂರ್ಣವಾಗಿ ದೀಪಾವಳಿ ಆಚರಣೆ ಮಾಡುತ್ತಾರೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ದೀಪಾವಳಿ ಹಬ್ಬ ಜ್ಞಾನದ ಬೆಳಕನ್ನು ಬೆಳಗಿಸುವ ಹಬ್ಬ. ಇದನ್ನು ಕೇವಲ ಹಿಂದೂಗಳು ಮಾತ್ರವಲ್ಲ, ಜೈನರು, ಬೌದ್ಧರು, ಸಿಖ್ ಧರ್ಮದವರು ಕೂಡ ಶ್ರದ್ಧೆಯಿಂದ ಆಚರಿಸುತ್ತಾರೆ ಎಂದು ತಿಳಿಸಿದರು.

ದೀಪಾವಳಿಯಂದೆ ರಾಮ ವನವಾಸ ಮುಗಿಸಿ ಬಂದದ್ದು, ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿದ್ದು, ಲಕ್ಷ್ಮೀಯು ಜನ್ಮ ತಾಳಿದ್ದು ಮತ್ತು ವಿವಾಹವಾದದ್ದು, ಮಹಾವೀರ ಕೈವಲ್ಯ ಹೊಂದಿದ್ದು, ಸಿಖ್ಖರ ಗುರು ಗೋವಿಂದ ಸಿಂಗರು ಸೆರಮನೆಯಿಂದ ಬಿಡುಗಡೆ ಹೊಂದಿದ್ದು, ಇಡೀ ದೇಶದಲ್ಲಿ ಐದು ದಿನಗಳ ಕಾಲ ಅಚರಿಸುವ ಹಬ್ಬ ಇದೆಯೆಂದರೆ ಅದು ದೀಪಾವಳಿ ಎಂದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಕರ್ನಾಟಕ ಸಂಘದಲ್ಲಿ ವಿಶೇಷ ವಿನೂತನ ಕಾರ್ಯಕ್ರಮಗಳನ್ನ ಮಾಡುತ್ತಿರುವ ಸಾಹಿತಿ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ್ ರಾಜ್ ಅವರ ಸಾಧನೆ ಗುರುತಿಸಿ ಶಿವಮೊಗ್ಗ ಪೂರ್ವ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.

ಎಲ್ಲ ಹಿಂದೂ ಹಬ್ಬಗಳು ನಮ್ಮಲ್ಲಿ ಉತ್ಸಾಹವನ್ನು ಪ್ರೀತಿ ಆತ್ಮವಿಶ್ವಾಸವನ್ನು ಮೂಡಿಸುತ್ತವೆ. ನಮ್ಮ ರೋಟರಿ ಸಂಸ್ಥೆಯಲ್ಲಿ ಸಮಾಜಮುಖಿ ಸೇವೆ ಹಾಗೂ ಸದಸ್ಯರಿಗೆ ಹಮ್ಮಿಕೊಳ್ಳಲಾದ ವಿಶೇಷ ಕಾರ್ಯಕ್ರಮಗಳಲ್ಲಿ ಕುಟುಂಬ ಮಿಲನವು ಒಂದಾಗಿದೆ. ಇದರಿಂದ ನಮ್ಮ ಸ್ನೇಹ ಬಾಂಧವ್ಯ ಗಟ್ಟಿಗೊಳ್ಳುತ್ತದೆ ಎಂದು ತಿಳಿಸಿದರು.

ದೀಪಾವಳಿ ಪ್ರಯುಕ್ತ ಪಟಾಕಿ ಪ್ರದರ್ಶನ ಮತ್ತು ದಾಂಡಿಯಾ ನೃತ್ಯ ಏರ್ಪಡಿಸಲಾಗಿತ್ತು. ಸೀತಾರತ್ನ ಪ್ರಾರ್ಥಿಸಿದರು. ಸತೀಶ್ ಚಂದ್ರ ಸ್ವಾಗತಿಸಿದರು. ಜಿ.ವಿಜಯಕುಮಾರ್ ಅತಿಥಿಗಳ ಪರಿಚಯ ನಡೆಸಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ್ ಹೋಬಳಿದಾರ್, ಮಾಜಿ ಅಧ್ಯಕ್ಷ ಎನ್.ಎಚ್.ಶ್ರೀಕಾಂತ್, ಕೆ ಜಿ ರಾಮಚಂದ್ರ ರಾವ್, ಡಾ. ಪರಮೇಶ್ವರ್ ಶಿಗ್ಗಾವ್, ಎಚ್ ಬಿ ಆದಿಮೂರ್ತಿ, ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಅರುಣ್ ದೀಕ್ಷಿತ್ ಹಾಗೂ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಈ ತಿಂಗಳಲ್ಲಿ ಎರಡು ಖಗೋಳ ಅದ್ಭುತಕ್ಕೆ ಸಾಕ್ಷಿಯಾಗಲಿದೆ ಜಗತ್ತು.

ನೇತ್ರದಾನ ಜಾಗೃತಿ ಪಾಕ್ಷಿಕ ಮಾಸಾಚರಣೆ: ಜಾಗೃತ ಜಾಥಾ..

ಪತ್ರಕರ್ತರು ಸಮಾಜಮುಖಿ ಪಥದಲ್ಲಿ ಹೆಜ್ಜೆ ಇಡಬೇಕು: ಗೋಪಾಲ್‌ ಯಡಗೆರೆ.