ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಹಿಂದೂಗಳು ಶಾಂತಿಪ್ರಿಯರು. ಅವರ ಸಹನೆಯನ್ನು ದೌರ್ಬಲ್ಯ ಎಂದುಕೊಳ್ಳಬಾರದು-ಶಾಸಕ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ: ಹಿಂದೂಗಳು ಶಾಂತಿಪ್ರಿಯರು. ಅವರ ಸಹನೆಯನ್ನು ದೌರ್ಬಲ್ಯ ಎಂದುಕೊಳ್ಳಬಾರದು. ಒಂದುಪಕ್ಷ ಹಿಂದುಗಳು ತಿರುಗಿ ಬಿದ್ದರೆ ಮುಸ್ಲಿಂರ ಗತಿ ಏನು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮಾತನಾಡಿ, ನಾವು ಅಂದರೆ ಹಿಂದೂಗಳು ಶಾಂತಿಯಿಂದಲೇ ಇರುತ್ತೇವೆ.ಆದರೆ ಮುಸ್ಲಿಮರು ಮಾತ್ರ ಶಾಂತಿಯನ್ನು ಕಳೆದುಕೊಳ್ಳುತ್ತಾರೆ. ನಮ್ಮ ಸಹನೆಯನ್ನು ಅವರು ಪರೀಕ್ಷಿಸಬಾರದು. ಒಂದು ಪಕ್ಷ ಹಿಂದುಗಳು ತಿರುಗಿ ಬಿದ್ದರೆ ಅವರ ಗತಿ ಏನು? ಎಷ್ಟೋಕಡೆ ಹಿಂದೂಗಳೇ ಇರುವ ಓಣಿಯಲ್ಲಿ ಒಂದೆರಡು ಮುಸ್ಲಿಂರ ಮನೆಗಳು ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ತಳವಾರು ಹಿಡಿಯುವುದು ನಮಗೂ ಗೊತ್ತಿದೆ. ನಾವು ಆಯುಧವನ್ನೇ ಪೂಜೆ ಮಾಡುವವರು. ನಮಗೆ ಆಯುಧಗಳ ಬಗ್ಗೆ ಅವರು ಹೇಳಿಕೊಡಬೇಕಾಗಿಲ್ಲ. ನಮಗೆ ಆಯುಧವನ್ನು ಹಿಡಿಯುವುದೂ ಗೊತ್ತು ಸಂದರ್ಭ ಬಂದಾಗ ಅದನ್ನು ಬಳಸುವುದೂ ಗೊತ್ತು. ಆದರೆ ಹಿಂದೂಗಳು ಎಂದೂ ಕೆರಳುವುದಿಲ್ಲ. ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹಿಂದೂಗಳ ಮನೆಗಳಿಗೆ ನುಗ್ಗಿ ಹೊಡೆದಿದ್ದಾರೆ. ಶಿವಮೊಗ್ಗವೇ ಭಯದ ವಾತಾವರಣದಲ್ಲಿದೆ. ಜಿಲ್ಲಡಳಿತ, ಪೊಲೀಸ್ ಇಲಾಖೆ, ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದ ಅವರು, ಗಲಭೆಗೆ ಕಾರಣರಾದವರನ್ನು ಗುರುತಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

Related posts

ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್‍ರನ್ನು ಸಂಪುಟದಿಂದ ವಜಾ ಮಾಡಿ-ಕೆ.ಎಸ್. ಈಶ್ವರಪ್ಪ ಆಗ್ರಹ.

ಗೋಲ್ಡನ್ ಸಿಂಗರ್ಸ್ ಇವೆಂಟ್: ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ರಂಜಿಸಿದ ಗಾಯಕರು.

ಮಾರುಕಟ್ಟೆ ಕಾರ್ಯಾಗಾರ ನವೆಂಬರ್ 30ಕ್ಕೆ