ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಆರ್ಯವೈಶ್ಯ ಮಹಿಳಾ ಮಹಾಸಭಾದಿಂದ ಸಮಾಜಮುಖಿ ಕೆಲಸ:ಡ್ಡ ಮಹಿಳಾ ಶಕ್ತಿಯಾಗಿ ಬೆಳೆದಿದೆ-ಶಾಸಕ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ: ಆರ್ಯವೈಶ್ಯ ಮಹಿಳಾ ಮಹಾಸಭಾವು ಸಮಾಜಮುಖಿ ಕೆಲಸ ಮಾಡುತ್ತಾ ದೊಡ್ಡ ಮಹಿಳಾ ಶಕ್ತಿಯಾಗಿ ಬೆಳೆದಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಅಖಿಲ ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾ, ವಾಸವಿ ಮಹಿಳಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಐದು ಜಿಲ್ಲೆಗಳ ಆರ್ಯವೈಶ್ಯ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ವಾಸವಿ ಯುವಜನ ಸಮಾಜ, ವಾಸವಿ ಮಹಿಳಾ ಸಂಘ, ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಬಂದಿದೆ. ಶಿವಮೊಗ್ಗದಲ್ಲಿ ಒಂದು ಶಕ್ತಿ ಕೇಂದ್ರವೇ ಆಗಿದೆ. ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ದೇಶಭಕ್ತಿಗೂ ಕಾರಣವಾಗಿದೆ. ಮಹಿಳಾ ಸಂಘದ ಸೇವಾಕೇಂದ್ರವೂ ಆಗಿದೆ. ಇದಕ್ಕೆ ಹಿರಿಯರ ಸಹಕಾರ ಕೂಡ ಇದೆ ಎಂದರು.
ಹೆಣ್ಣಿನ ಪರಿಶ್ರಮವೇ ದೇಶದ ಶಕ್ತಿಯಾಗಿದೆ. ಎಲ್ಲಿ ಹೆಣ್ಣಿಗೆ ಗೌರವ ಸಿಗುತ್ತದೋ ಅಲ್ಲಿ ನೆಮ್ಮದಿ ಇರುತ್ತದೆ. ಹೆಣ್ಣು ಕುಟುಂಬದ ಕಣ್ಣಾಗಿ ಕೆಲಸ ಮಾಡುತ್ತಾಳೆ. ಆರ್ಯವೈಶ್ಯ ಮಹಿಳಾ ಮಹಾಸಭಾವು ಹೆಣ್ಣಿಗೆ ಘನತೆಯನ್ನು ತಂದುಕೊಡುವ ಕೆಲಸ ಮಾಡಿದೆ. ಹೀಗೆಯೇ ಸಮಾಜಮುಖಿ ಕೆಲಸ ಮಾಡುತ್ತಾ ದೇಶಪ್ರೇಮವನ್ನು ಬೆಳೆಸಲಿ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಯೋಜನೆಗಳ ಕಿರುಪತ್ರ ಬಿಡುಗಡೆ ಮಾಡಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕøತಿಯನ್ನು ಕಲಿಸಬೇಕಾಗಿದೆ. ಕುಟುಂಬಗಳೇ ಶಿಥಿಲಗೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಕುಟುಂಬ ಗಟ್ಟಿ ಮಾಡುವ ಕರ್ತವ್ಯ ಕೂಡ ಹೆಣ್ಣಿಗಿದೆ. ಈ ನಿಟ್ಟಿನಲ್ಲಿ ವಾಸವಿ ಮಹಿಳಾ ಸಂಘ ಹಲವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಶಿವಮೊಗ್ಗದ ವಾಸವಿ ಮಹಿಳಾ ಸಂಘವು ಬಹಳ ಹಿಂದಿನ ದಿನಗಳಿಂದಲೇ ವೈಚಾರಿಕತೆಯನ್ನು ಮಹಿಳೆಯರಲ್ಲಿ ಬೆಳೆಸಿದೆ. 70, 80ರ ದಶಕದಲ್ಲಿದ್ದ ಅನೇಕ ಅನಿಷ್ಟ ಪದ್ಧತಿಗಳನ್ನು ಬಿಡಿಸಲು ಕಾರಣವಾಗಿದೆ. ಹಾಗೆಯೇ ಮುಷ್ಟಿ ಅಕ್ಕಿ ಯೋಜನೆ ಮೂಲಕ ಬಡವರಿಗೆ ಅನ್ನ ದಾನ ಮಾಡುವ ಕಾರ್ಯಕ್ರಮವನ್ನು ಕೂಡ ಹಾಕಿಕೊಂಡು ರಾಜ್ಯದ ಗಮನ ಸೆಳೆದಿದೆ ಎಂದರು.
ಕೇಂದ್ರ ಸರ್ಕಾರದ ನಿರ್ಧಾರದಂತೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ರಾಜಕೀಯ ಕ್ಷೇತ್ತದಲ್ಲಿ ಬಂದಿದೆ. ಇದರ ಪ್ರಯೋಜನವನ್ನು ನಮ್ಮ ಸಮಾಜದ ಮಹಿಳೆಯರು ಸೇರಿದಂತೆ ಎಲ್ಲರೂ ಬಳಸಿಕೊಳ್ಳಬೇಕಿದೆ. ಹಾಗೆಯೇ ನಮ್ಮ ನಿಗಮದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.ಇವೆಲ್ಲವೂ ಮಹಿಳೆಯರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ರಾಧಿಕಾ ಜಗದೀಶ್, ಅಖಿಲ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷೆ ಸುಧಾಮೂರ್ತಿ, ಪದಾಧಿಕಾರಿಗಳಾದ ಅರುಣ, ವಿದ್ಯಾ, ಶಕುಂತಲಾ, ರಂಜನಾ, ವಿಜಯಾ ದತ್ತಕುಮಾರ್, ಗೀತಾ, ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ ಎಸ್.ಕೆ. ಶೇಷಾಚಲ, ಅಶ್ವತ್ಥನಾರಾಯಣ ಶೆಟ್ಟಿ, ದತ್ತಕುಮಾರ್, ಅರವಿಂದ್ ಮುಂತಾದವರಿದ್ದರು.

Related posts

100ಕ್ಕೂ ಹೆಚ್ಚು ತಾಲ್ಲೂಕುಗಳನ್ನ ಬರಪೀಡಿತ ಎಂದು ಘೋಷಣೆ- ಕೃಷಿ ಸಚಿವ ಚಲುವರಾಯಸ್ವಾಮಿ.

ಏಕಾಏಕಿ ಕುಸಿದು ಬಿದ್ದ ನರ್ಸರಿ  ಶಾಲೆಯ ಕಟ್ಟಡ: ತಪ್ಪಿದ ಬಾರಿ ಅನಾಹುತ..

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಯಶಸ್ವಿ-ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ