ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯಶಿವಮೊಗ್ಗ

ಈಡಿಗ ಸಮಾಜದ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಅಗತ್ಯತೆ ಇದೆ-ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಈಡಿಗ ಸಮಾಜದ ಸಂಸ್ಕೃತಿ ಅವನತಿಯತ್ತ ಸಾಗುತ್ತಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಅಗತ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಈಡಿಗರ ಭವನದಲ್ಲಿ ಭಾನುವಾರ ಧೀರ ದೀವರ ಬಳಗ, ಹಳೇಪೈಕ ದೀವರ ಸಂಸ್ಕೃತಿ ಸಂವಾದ ಬಳಗದ ಆಶ್ರಯದಲ್ಲಿ ದೀವರ ಸಾಂಸ್ಕೃತಿಕ ವೈಭವದಲ್ಲಿ ಧೀರ ದೀವರು ಮತ್ತು ಚಿತ್ತಾರಗಿತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿರು.
ಸಮಾಜದ ಹಸೆ ಚಿತ್ತಾರ ಕಲೆಗೆ ತನ್ನದೇ ಪರಂಪರೆ ಅದನ್ನು ಉಳಿಸುವಂತಹ ಜವಾಬ್ದಾರಿ ಎಲ್ಲರ ಮೇಲಿದೆ. ಕಲೆ ಮಾತ್ರವಲ್ಲದೆ ರಾಜಕೀಯ, ಸಾಹಿತ್ಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಸಾಧಕರು ಇದ್ದಾರೆ. ಅವರನ್ನು ಗುರುತಿಸುವ ಕೆಲಸ ಆಗಬೇಕಿದೆ. ನಮ್ಮು ಸಂಸ್ಕೃತಿ ಉಳಿಯಬೇಕಿದೆ. ವಿಶೇಷವಾಗಿ ಹಸೆ ಚಿತ್ತಾರ ಸಂಸ್ಕೃತಿ ಉಳಿದಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಈಗೆಲ್ಲಾ ಹಸೆ ಚಿತ್ತಾರದ ಸ್ಟಿಕ್ಕರ್ ಬಂದಿವೆ. ಯಾರೂ ಹಸೆ ಚಿತ್ತಾರ ಬಿಡಿಸುತ್ತಿಲ್ಲ. ನಮ್ಮ ಸಂಸ್ಕೃತಿ ಉಳಿಸಲು ಮತ್ತೆ ಗತಕಾಲಕ್ಕೆ ಹಿಂದಿರುವ ಅವಶಕತೆ ಇದ್ದು, ಸಮಾಜದ ಸಂಸ್ಕೃತಿ ಉಳಿಸಲು ನಾನು ಕೈಜೋಡಿಸುತ್ತೇನೆ. ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರು.
ನ.30ರಂದು ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಈಡಿಗ ಸಮಾಜದ ಪೂರ್ವಭಾವಿ ಸಭೆ ಕರೆಯಲಾಗಿದ. ಸಮಾಜದ ಸಂಘಟನೆ ದೃಷ್ಟಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಭೆ ನಡೆಯಲಿದೆ. ಅದಕ್ಕಾಗಿ ಸಮಾಜದ ಶಕ್ತಿ ಪ್ರದರ್ಶನ ಪಕ್ಷಾತೀತವಾಗಿ ಮಾಡಬೇಕಿದೆ. ಅದಕ್ಕೆ ಸಮಾಜದವರು ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಈಡಿಗ ಸಮಾಜವನ್ನು ಕಡೆಗಣಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಅವರು ಈಡಿಗ ಸಮಾಜವನ್ನು ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಹಣವೇ ಮೀಸಲಿಟ್ಟಿಲ್ಲ. ನಾನು ಮತ್ತು ಸಚಿವ ಮಧು ಬಂಗಾರಪ್ಪ ಸುಮ್ಮನೆ ಬಿಡುವುದಿಲ್ಲ. ಹಣ ಸಮಾಜವನ್ನು ಅಭಿವೃದ್ಧಿ ಮಾಡುತ್ತೇವೆ. ನಮ್ಮ ಸಮಾಜ ಶೈಕ್ಷಣಿಕ, ಆರ್ಥಿಕವಾಗಿ ಬಲಗೊಳ್ಳಬೇಕಾದರೆ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರ ಬೇಕಾಗುತ್ತದೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ರಾಮಪ್ಪ, ಸಾಗರದ ಹಸೆಚಿತ್ತಾರ ಕಲಾವಿದೆ ಲಕ್ಷ್ಮಮ್ಮ, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಟಾಕಪ್ಪ ಕಣ್ಣೂರು ಅವರಿಗೆ ಧೀರ ದೀವರು ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ, ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಜಿಲ್ಲಾ ಮಹಿಳಾ ಈಡಿಗ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ದೀವರ ಸಾಂಸ್ಕೃತಿಕ ವೈಭವದ ಸಂಚಾಲಕ ನಾಗರಾಜ್ ನೇರಿಗೆ, ಸುರೇಶ್ ಬಾಳೇಗುಂಡಿ ಉಪಸ್ಥಿತರಿದ್ದರು.

Related posts

ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ: ನನ್ನ ಪ್ರಯತ್ನ ಫಲಿಸಿಲ್ಲ – ಮಾಜಿ ಸಚಿವ ಶ್ರೀರಾಮುಲು

ಶೀಘ್ರವೇ 20 ಸಾವಿರ ಶಿಕ್ಷಕರ ನೇಮಕಾತಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ..

ಮೈಸೂರು ಕಾಗದ ಕಾರ್ಖಾನೆ ಪುನಾರಂಭಕ್ಕೆ ಸಚಿವ ಎಂ ಬಿ ಪಾಟೀಲ್ ಹೆಜ್ಜೆ: ಸಭೆ ನಡೆಸಿ ಚರ್ಚೆ…