ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ದೇವರು ಒಳ್ಳೆಯದು ಮಾಡಲಿ-ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟು ದಿನ ಯಾಕೆ ಕ್ಯಾಪ್ಟನ್‍ಲೆಸ್ ಅಂತ ಹೇಳಿದ್ದೆ. ವಿಧಾನಸಭೆಯಲ್ಲಿ ಮಾತಾಡೋಕೆ ಕ್ಯಾಪ್ಟನ್ ಇಲ್ಲ ಅಂತ ಹೇಳಿದ್ದೆ. ಈಗ ಬಿಜೆಪಿಯವರು ಕ್ಯಾಪ್ಟನ್ ಮಾಡಿಕೊಂಡಿದ್ದಾರೆ. ಅಧ್ಯಕ್ಷರು ಬಂದ ತಕ್ಷಣ ಎಲ್ಲಾ ಆಗಲ್ಲ. ಜನರ ವಿಶ್ವಾಸ ಗಳಿಸುವುದು ಅತಿ ಮುಖ್ಯವಾಗುತ್ತದೆ ಎಂದರು.
ಬಿಜೆಪಿ ಕ್ಯಾಪ್ಟನ್‍ಲೆಸ್ ಅಂತಾ ನಾನು ಹೇಳಿದ್ದು ವಿಧಾನಸಭೆ ಒಳಗೆ. ಆ ಪಕ್ಷಕ್ಕೆ ಈಗಲೂ ವಿಪಕ್ಷ ನಾಯಕ ಇಲ್ಲ. ಈಗ ಕ್ಯಾಪ್ಟನ್ ಮಾಡ್ತಾರಂತೆ. ಅದನ್ನು ಈಗ ಹೇಳಿಕೊಂಡಿದ್ದಾರೆ. ಇಷ್ಟು ದಿನ ಯಾಕೆ ಮಾಡಲಿಲ್ಲ, ವಿಧಾನಸಭೆಯೊಳಗೆ ಪ್ರಶ್ನೆ ಮಾಡೋರು ಯಾರು ಎಂದು ಪ್ರಶ್ನಿಸಿದರು.
ಬಿಜೆಪಿಯವರು ವಿಧಾನ ಚುನಾವಣೆಯಲ್ಲೂ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭೆಯಲ್ಲೂ ವಿಶ್ವಾಸ ಕಳೆದುಕೊಳ್ಳುತ್ತಾರೆ. ಗ್ಯಾರೆಂಟಿಗಳನ್ನ ಕೊಟ್ಟಿದ್ದೇವೆ. ಚುನಾವಣೆಯಲ್ಲಿ ಜನ ತೀರ್ಮಾನ ಮಾಡ್ತಾರೆ ಬಿಡಿ ಎಂದರು.
ಲೋಕಸಭೆಯಲ್ಲಿ 28 ಸ್ಥಾನ ಗೆಲ್ಲುತ್ತೇವೆ ಅಂತಾ ಬಿಜೆಪಿಯವರು ಹೇಳ್ತಾರೆ. ಹಣೆಬರಹ ಬರೆಯುವವರು ತೀರ್ಮಾನ ಮಾಡೋದು ಜನರು. ಈ ಹಿಂದೆ ಸಹ ಬಹಳ ಅಧ್ಯಕ್ಷರು ಬಂದಿದ್ದರು. ಬಹಳ ಭಾಷಣ ಮಾಡಿದ್ದರು ಏನು ಆಗಿಲ್ಲ. ಜನ ತೀರ್ಮಾನ ಮಾಡಿ ಕಳುಹಿಸಿದ್ದಾರೆ. ಅಧ್ಯಕ್ಷರು ಬಂದ ತಕ್ಷಣ ಏನು ಆಗಲ್ಲ. ಮೊದಲು ಜನರ ವಿಶ್ವಾಸ ಪಡೆದುಕೊಳ್ಳಬೇಕು.ಬಿಜೆಪಿಯವರು ವಿಧಾನಸಭೆ ಚುನಾವಣೆಯಲ್ಲಿ ವಿಶ್ವಾಸ ಕಳೆದುಕೊಂಡಿದ್ದರು. ಈಗಲೂ ಕಳೆದುಕೊಂಡಿದ್ದಾರೆ ಎಂದರು.
ವಿಜಯೇಂದ್ರ ವಿರುದ್ದ ಭ್ರμÁ್ಟಚಾರ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಇದನ್ನು ನಾನೊಬ್ಬನೇ ತೀರ್ಮಾನ ಮಾಡಲು ಆಗಲ್ಲ. ಈ ಬಗ್ಗೆ ಪಕ್ಷ ತೀರ್ಮಾನ ಮಾಡ್ತದೆ. ಜನರು ಸಹ ಯಾರು ಒಳ್ಳೆಯದು ಮಾಡ್ತಾರೆ ಅನ್ನೋದನ್ನ ನೋಡ್ತಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಕೊಟ್ಟಿದೆ. ಜನರು ಈ ಎಲ್ಲಾ ಯೋಜನೆ ಬಗ್ಗೆ ಯೋಚನೆ ಮಾಡ್ತಾರೆ ಎಂದರು.
ಸಂಸದ ರಾಘವೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಮಧು ಬಂಗಾರಪ್ಪ, ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ಸಂಸದರು ಮಾತನಾಡಿದ್ದಾರೆ. ನಮ್ಮ ತಂದೆ ಬಂಗಾರಪ್ಪ ಅವರು ಇದ್ದಾಗಲೇ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. ಯೋಜನೆಗೆ ಚಾಲನೆ ನೀಡಿದ ಬಳಿಕ ನಮ್ಮ ತಂದೆಯವರು ಅಧಿಕಾರದಲ್ಲಿ ಇರಲಿಲ್ಲ. ಯಾರು ಹೇಳಿದ್ದಾರೋ ಅವರ ತಂದೆ ಅಧಿಕಾರದಲ್ಲಿ ಇದ್ದರು. ನೀರಾವರಿ ಯೋಜನೆ ನಾನು ಮಾಡಿದ್ದು ಅಂತಾ ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

Related posts

ತುಂಗಾ ನದಿ ಮಲೀನವಾಗುತ್ತಿದ್ದರೂ ಪಾಲಿಕೆ ಅತ್ಯಂತ ದಿವ್ಯ ನಿರ್ಲಕ್ಷ್ಯ- ಎಎಪಿ ಆರೋಪ.

ಕೋವಿಡ್ ವ್ಯಾಕ್ಸಿನ್’ ಕಂಡು ಹಿಡಿದಿದ್ದ ಇಬ್ಬರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ..

ಕೇಂದ್ರ ತಂಡದ ಜೊತೆ ಮೀಟಿಂಗ್:   ರಾಜ್ಯದ ಬರ-ಕೃಷಿ ಪರಿಸ್ಥಿತಿಯ ವಾಸ್ತವಾಂಶ ವಿವರಿಸಿದ ಸಿಎಂ ಸಿದ್ದರಾಮಯ್ಯ