ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಭದ್ರಾ ಎಡದಂಡೆ ನಾಲೆಯಲ್ಲಿ ಇಂದಿನಿಂದಲೇ ನೀರು ನಿಲುಗಡೆಗೆ ತೀರ್ಮಾನ-ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಭದ್ರಾ ಎಡದಂಡೆ ನಾಲೆಯಲ್ಲಿ ಇಂದಿನಿಂದಲೇ ನೀರು ನಿಲುಗಡೆಗೆ ಇಂದು ನಡೆದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಅವರು ಇಂದು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆಯ ಅಭಾವದಿಂದಾಗಿ ನೀರಿನ ಸಂಗ್ರಹ ಭದ್ರಾ ಅಣೆಕಟ್ಟಿನಲ್ಲಿ ಕಡಿಮೆ ಇದೆ. ಕುಡಿಯುವ ನೀರಿಗೆ ಬೇಸಿಗೆಯಲ್ಲಿ ತೀವ್ರ ಅಭಾವವಾಗುವ ಪರಿಸ್ಥಿತಿ ಇದೆ. ನಾನು ಈಗಷ್ಟೇ ಕಾಡಾ ಅಧ್ಯಕ್ಷನಾಗಿದ್ದೇನೆ. ಹಿಂದಿನವರ ತೀರ್ಮಾನದಂತೆ 100 ದಿನಗಳ ಕಾಲ ನೀರು ಹರಿಸಲು ನಿರ್ಧಾರವಾಗಿತ್ತು ಎಂದರು.
ಆದರೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಉನ್ನತಾಧಿಕಾರಿಗಳ ಮತ್ತು ನೀರಾವರಿ ಸಚಿವರ ಜೊತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಪ್ರಸ್ತುತ ಬಲದಂಡೆ ನಾಲೆಗೂ ಕೂಡ ನೀರು ನಿಲ್ಲಿಸುವ ಸಂದರ್ಭ ಇದೆ. ಎರಡೂ ಭಾಗದ ರೈತರು ನೀರು ಬಿಡಲು ಒತ್ತಾಯಿಸಿದರೆ ಸ್ಥಳೀಯ ರೈತರು ಯಾವುದೇ ಕಾರಣಕ್ಕೂ ನೀರು ಬಿಡಬೇಡಿ. 71 ಟಿಎಂಸಿ ನೀರು ಇರಬೇಕಿತ್ತು. ಆದರೆ ಕೇವಲ 46 ಟಿಎಂಸಿ ನೀರು ಸಂಗ್ರಹವಾಗಿದೆ. ಈಗ ನೀರು ಬಿಟ್ಟರೆ ಈ ಭಾಗದ ರೈತರಿಗೆ ನೀರಿನ ಸಮಸ್ಯೆ ಉಂಟಾಗುತ್ತದೆ. ಎಲ್ಲಾ ಬೆಳೆಗಳೂ ನಾಶವಾಗುತ್ತವೆ. ಕುಡಿಯಲು ನೀರು ಸಿಗುವುದಿಲ್ಲ. ಎಂದು ಈ ಭಾಗದ ರೈತರು ಒತ್ತಾಯಿಸುತ್ತಿದ್ದಾರೆ. ಮುಂದಿನ ನಾಲ್ಕೈದು ದಿನಗಳಲ್ಲಿ ಮಳೆ ಬರುವ ಸಂಭವವಿದ್ದು, ಮಳೆ ಬಂದಲ್ಲಿ ನೀರು ಬಿಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ನಾಲ್ಕು ದಿನಗಳ ಸಮಯಾವಕಾಶ ತೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Related posts

ವಿಶ್ವ ವಿಖ್ಯಾತ ಮೈಸೂರು ದಸರಾ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ.

ವಿದ್ಯಾರ್ಥಿಗಳ ಯೋಚನೆ ಆಲೋಚನೆಗಳು ದೂರದೃಷ್ಟಿಯಿಂದ ಇರಬೇಕು-ಡಾ.ಆನಂದಕುಮಾರ್ ತ್ರಿಪಾಠಿ

ಕಾವೇರಿ ನದಿ ನೀರಿಗೆ ತಮಿಳುನಾಡು ಕ್ಯಾತೆ: ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಕರ್ನಾಟಕ