ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನುಡಿದಂತೆ ನಡೆದ ಸಚಿವ ಮಧು ಬಂಗಾರಪ್ಪ.

ಶಿವಮೊಗ್ಗ:  ಅಕ್ಟೋಬರ್ 26ರಂದು ಮಾಜಿ ಮುಖ್ಯಮಂತ್ರಿ  ಎಸ್ ಬಂಗಾರಪ್ಪ ಅವರ ಜನ್ಮ ದಿನಾಚರಣೆಯನ್ನು ನಗರದ ತಾವರೆಕೊಪ್ಪ ಬಿಕ್ಷುಕರ ಪುನರ್ ವಸತಿ ಕೇಂದ್ರದಲ್ಲಿ ಜಿಲ್ಲಾ ಎನ್ಎಸ್ ಯು ಐ ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪನವರು ಭಾಗವಹಿಸಿ ಕೇಕ್ ಕತ್ತರಿಸಿ ನಿರಾಶ್ರಿತರಿಗೆ ಬೆಡ್ ಶೀಟ್ ಗಳನ್ನು ವಿತರಿಸಿದರು.

ಈ  ಮಾತನಾಡಿದ್ದ ಅವರು, ಹಲವಾರು ಕಾರಣಗಳಿಂದ ತಮ್ಮ ಕುಟುಂಬದಿಂದ ದೂರವಾಗಿ ಭಿಕ್ಷಾಟನೆ ಮಾಡುವ ಸ್ಥಿತಿ ನಿರ್ಮಾಣವಾಗಿರುತ್ತದೆ, ನಿಮ್ಮನ್ನು ಬಿಕ್ಷಾಟನೆಯಿಂದ ಮುಕ್ತಿಗೊಳಿಸಿ ನಿರಾಶ್ರಿತರ ಕೇಂದ್ರದಲ್ಲಿ ಆಶಯ ನೀಡಿ ಆಹಾರ ಬಟ್ಟೆ ಮತ್ತು ಕಾಲಕಾಲಕ್ಕೆ ವೈದಿಕೀಯ ತಪಾಸಣೆ ಮಾಡಿ ನಿಮ್ಮ ಬದುಕು ರೂಪಿಸುವ ಕಾರ್ಯ ಕೇಂದ್ರ ನಿರ್ವಹಿಸುತ್ತದೆ, ಇದು ಸಾಮಾಜಿಕ ಜವಾಬ್ದಾರಿ ಕೂಡ, ಸರ್ಕಾರ ನಿಮ್ಮ ಪುನರ್ವಸತಿಗಾಗಿ ಹಾಗೂ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆಗೊಳಿಸುತ್ತದೆ, ಇದರ ಸದುಪಯೋಗ ಪಡೆದು ನೀವುಗಳು ಉತ್ತಮ ನಡವಳಿಕೆ ಹೊಂದಿ ಮತ್ತೆ ನಿಮ್ಮ ಕುಟುಂಬ ಸೇರುವಂತೆ ಆಗಬೇಕು ಯಾರು ಅನಾಥರಾಗಿ ಬದುಕಬಾರದು ಯಾರು ಹಸಿವಿನಿಂದ ನರಳಬಾರದು ಎಲ್ಲರೂ ಸ್ವಂತ ಸೂರು ಹೊಂದಬೇಕು ಇದು ನಮ್ಮ ತಂದೆ ಬಂಗಾರಪ್ಪಜಿ ಅವರ ಕನಸು ಇದನ್ನು ನನಸು ಗೊಳಿಸಲು ನಾನು ಕೂಡ ಅವರ ಮಗನಾಗಿ ಪ್ರಯತ್ನಿಸುತ್ತೇನೆ ನಮ್ಮ ನಮ್ಮ ತಂದೆ ಬಂಗಾರಪ್ಪಜಿ ಇಲ್ಲದಿರಬಹುದು ಆದರೆ ಅವರ ಆದರ್ಶ ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವ ಸೌಭಾಗ್ಯ ನನಗಿದೆ ,ಈ ದಿನ ನಮ್ಮ ತಂದೆ ಬಂಗಾರಪ್ಪಜಿ ಅವರ 90ನೇ ಜನ್ಮದಿನಾಚರಣೆ , ಎನ್ ಎಸ್ ಯು ಐ ಕಾರ್ಯಕರ್ತರು ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಬೆಡ್ ಶೀಟ್ ನೀಡುವುದರ ಮೂಲಕ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ತಾವುಗಳು ನನ್ನಲ್ಲಿ ವಿನಂತಿಸಿದಂತೆ ನಾನು ಎಸ್, ಬಂಗಾರಪ್ಪ ಪೌಂಡೇಶನ್ ಹಾಗೂ ಎಸ್,ಬಂಗಾರಪ್ಪ ಅಭಿಮಾನಿ ಬಳಗ ದಿಂದ 65 ಇಂಚಿನ ಮಿನಿ ಹೋಮ್ ಥಿಯೇಟರ್ ಟಿವಿ ಯನ್ನು ಹಾಗೂ ಎಲ್ಲ 230 ನಿರಾಶ್ರಿತರಿಗೆ ಅತ್ಯುತ್ತಮ ಪಾದರಕ್ಷೆಯನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು ಅದರಂತೆ ಈ ದಿನ ಎಸ್ ಬಂಗಾರಪ್ಪಜಿ ಅಭಿಮಾನಿ ಬಳಗದ ಸದಸ್ಯರು ಹಾಗೂ ಎನ್ ಎಸ್ ಯು ಐ ಕಾರ್ಯಕರ್ತರು ಕೇಂದ್ರಕ್ಕೆ ಭೇಟಿ ನೀಡಿ ಮಾನ್ಯ ಸಚಿವ ಮಧು ಬಂಗಾರಪ್ಪನವರು ಮಾತು ಕೊಟ್ಟಂತೆ 65 ಇಂಚಿನ ಮಿನಿ ಹೋಂ ಥಿಯೇಟರ್ ಟಿವಿ ಹಾಗೂ ಎಲ್ಲಾ 230 ನಿರಾಶ್ರೀತರಿಗೂ ಪಾದರಕ್ಷೆಗಳನ್ನು ಈ ದಿನ ಹಸ್ತಾಂತರಿಸಲಾಯಿತು, ಈ ಸಂದರ್ಭದಲ್ಲಿ ಪ್ರಮುಖರಾದ ಜಿ. ಡಿ.ಮಂಜುನಾಥ್ ಮುಕ್ತಿಯರ್ ಅಹಮದ್ ಮುಹಿಬುಲ್ಲಖಾನ್ ಟಿ.ಡಿ. ಗೀತೇಂದ್ರ ಗೌಡ ಮಧುಸೂದನ್, ವಿಜಯ್ ಕುಮಾರ್, ಎಂ.ಬಿ. ರವಿಕುಮಾರ್ ಜ್ಯೋತಿ ಅರಳಪ್ಪ, ಟಿ, ಮಂಜಪ್ಪ ಗಿರೀಶ್ ರವಿ ಮುಂತಾದವರು ಉಪಸ್ಥಿತರಿದ್ದರು.

Related posts

ತಿಂಗಳಾಂತ್ಯದಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ: ಪರ-ವಿರೋಧ ಚರ್ಚೆ ಮುನ್ನೆಲೆಗೆ..

 ನಾಳೆ ಚಂದ್ರಗ್ರಹಣ ಹಿನ್ನೆಲೆ : ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಸಮಯದಲ್ಲಿ ಬದಲಾವಣೆ.

ಹಮಾಸ್’ ಸಂಪೂರ್ಣ ನಾಶ ಮಾಡ್ತೇವೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಾರ್ನ್!