ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಜಾತಿ ಗಣತಿ ಬಗ್ಗೆ ಬಹಳಷ್ಟು ಅಪಪ್ರಚಾರ: ಜನರ ಅಭಿಪ್ರಾಯ ಪರಿಗಣಿಸಿ ತೀರ್ಮಾನ-ಸಚಿವ ಕೆ.ಎನ್ ರಾಜಣ್ಣ

ತುಮಕೂರು: ಜಾತಿ ಜನಗಣತಿ ವರದಿಯೇ ಹೊರಗೆ ಬಂದಿಲ್ಲ. ಆಗಲೇ ಸರಿ ಇಲ್ಲ ಅಂದರೆ ಹೇಗೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾತಿಗಣತಿ ಸ್ವೀಕಾರ ವಿರೋಧಿ ನಿಲುವಿಗೆ ಡಿಕೆ ಶಿ ಸಹಿ ವಿಚಾರ ಕುರಿತು  ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ,  ಜಾತಿ ಗಣತಿ ಬಗ್ಗೆ ಬಹಳಷ್ಟು ಅಪಪ್ರಚಾರ ನಡೆಯುತ್ತಿದೆ. ಡಿಕೆ ಶಿವಕುಮಾರ್ ಸಮಾಜದ ಸಭೆಗೆ ಹೋಗಿದ್ದಾರೆ  ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ವರದಿ ಬಂದಾಕ್ಷಣ ಎಲ್ಲವೂ ತೀರ್ಮಾನ ಬರ್ತವೇ ಅಂತಲ್ಲ . ಸರ್ಕಾರ ಜನರ ಅಭಿಪ್ರಾಯ ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎನ್ ರಾಜಣ್ಣ, ಸಿಎಂ ಸ್ಥಾನ ಇನ್ನೂ ಖಾಲಿ  ಇಲ್ಲ. ಹೀಗಾಗಿ ಪ್ರಶ್ನೆ ಉದ್ಬವಿಸಲ್ಲ.  ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಹೈಕಮಾಂಡ್ ಹೇಳಿದ್ರೆ ಮಾಡೋಣ ಸತೀಶ್ ರನ್ನ ಹೇಳಿದ್ರೆ ಅವರನ್ನೇ ಸಿಎಂ ಮಾಡೋಣ.  ಪರಮೇಶ್ವರ್ ಮತ್ತು ಹೆಚ್.ಕೆ ಪಾಟೀಲರನ್ನ ಸಿಎಂ ಮಾಡಲು ಹೇಳಿದ್ರೆ  ಅವರನ್ನೇ ಸಿಎಂ ಮಾಡೋಣ ಎಂದರು.

Related posts

ನರೇಂದ್ರಮೋದಿಯವರ ಜನಪ್ರಿಯತೆಯ ಎಕ್ಸ್ ಪೈರಿ ಡೇಟ್ ಮುಗಿದಿದೆ – ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಎಲ್ಲಾ ಕನ್ನಡಿಗರೂ ಮನೆಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮಾತನಾಡಲೇಬೇಕು-ಎಸ್.ಎಸ್. ಜ್ಯೋತಿಪ್ರಕಾಶ್

ಚಂದ್ರಯಾನ -3: ‘ಲ್ಯಾಂಡರ್ ಮಾಡ್ಯೂಲ್’ ಕಾರ್ಯಾಚರಣೆ ಯಶಸ್ವಿ: ಇಸ್ರೋ ಟ್ವೀಟ್..