ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಜಿ.ಪಂ ವ್ಯಾಪ್ತಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಸೇರ್ಪಡೆ ಅವೈಜ್ಞಾನಿಕ:  ಕೂಡಲೇ ನಿರ್ಧಾರ ಕೈ ಬಿಡಿ- ಮರಿತಿಬ್ಬೇಗೌಡ ಆಗ್ರಹ.

ಮೈಸೂರು,: ಪದವಿಪೂರ್ವ ಶಿಕ್ಷಣ ಇಲಾಖೆಯನ್ನ ಜಿಲ್ಲಾ ಪಂಚಾಯತಿಗೆ ವ್ಯಾಪ್ತಿಗೆ ವಹಿಸುವುದಕ್ಕೆ ಸರ್ಕಾರ ಮುಂದಾಗಿದೆ. ಇದು ಒಂದು ಅವೈಜ್ಞಾನಿಕ ನಿರ್ಧಾರ. ಇದನ್ನು ಕೂಡಲೇ ಕೈ ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಎಲ್ ಸಿ ಮರಿತಿಬ್ಬೇಗೌಡ , ಪದವಿಪೂರ್ವ ಶಿಕ್ಷಣ ಇಲಾಖೆಯನ್ನ ಸಿಇಓ ಅಧಿಕಾರ ವ್ಯಾಪ್ತಿಗೆ ಸೇರಿಸಲು ಮುಂದಾಗಿರುವ ಸರ್ಕಾರದ ಈ  ಆದೇಶವನ್ನ ಕೂಡಲೇ ವಾಪಸ್ ಪಡೆಯಬೇಕು. ಇದರಿಂದ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತದೆ. ವಿದ್ಯಾರ್ಥಿಗಳಿಗೆ ಸಿಗಬೇಕಾದ  ಸೌಲಭ್ಯ ,ಸವಲತ್ತುಗಳು ವಿಳಂಬವಾಗುತ್ತದೆ.

ಹಾಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನ ಜಿ.ಪಂಗೆ  ವಹಿಸುವುದರಿಂದ ಶಿಕ್ಷಣ ಇಲಾಖೆಯ  ಅಭಿವೃದ್ಧಿಗೆ ಕುಂಠಿತವಾಗುತ್ತದೆ. ಕೂಡಲೇ ಸರ್ಕಾರ ತಮ್ಮ ಸುತ್ತೋಲೆಯನ್ನ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

 

Related posts

ಮುಂದಿನ ಎರಡು ವರ್ಷ ವರ್ಗಾವಣೆ ಸ್ಥಗಿತಕ್ಕೆ ಸರ್ಕಾರ ತೀರ್ಮಾನ..?

ನಾನು ಭ್ರಷ್ಟನಲ್ಲ,ಲಂಚ ಸ್ವೀಕರಿಸುವುದಿಲ್ಲ- ಬೋರ್ಡ್ ಹಾಕಿಕೊಂಡ ಸರ್ಕಾರಿ ಅಧಿಕಾರಿ

ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಧಿಕೃತ ಮುದ್ರೆ..