ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನಾ ಸಭೆ: ಹಲವು ನಾಯಕರು ಭಾಗಿ.

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ಇಂದು ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಂಡಿತ್ತು.
ರಾಗಿಗುಡ್ಡದಲ್ಲಿ ನಡೆದ ಘಟನೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಸರ್ಕಾರಕ್ಕೆ ಕಿವಿ ಮತ್ತು ಕಣ್ಣು ಎರಡೂ ಇಲ್ಲ ಎಂದು ದೂರಿದರು. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ, ರಾಗಿಗುಡ್ಡದ ಘಟನೆ ಇಡೀ ರಾಜ್ಯದ ಗಮನ ಸೆಳೆದಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವರ್ತನೆ ಸರಿಯಿಲ್ಲ.ಹಿಂದೂ ಸಮಾಜ ಶಾಂತಿಯಿಂದ ಇದೆ ಎಂದರೆ ಅದು ದೌರ್ಬಲ್ಯವಲ್ಲ. ಗೃಹಸಚಿವರು ಇದು ಸಣ್ಣ ಘಟನೆ ಎನ್ನುತ್ತಾರೆ. ಉಸ್ತುವಾರಿ ಸಚಿವರು ಖಡ್ಗವನ್ನೇ ಅಸಲಿಯಲ್ಲ ಎನ್ನುತ್ತಾರೆ. ಈದ್‍ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದೂ ಅಮಾಯಕರ ಮೇಲೆ ದೌರ್ಜನ್ಯ ನಡೆದಿದೆ. ತಪ್ಪಿತಸ್ಥರನ್ನು ಗಡಿಪಾರು ಮಾಡಿದರೆ ಸಾಲದು.ಕಾಂಗ್ರೆಸ್ ಮುಖಂಡರನ್ನೂ ಗಡಿಪಾರು ಮಾಡಬೇಕು ಎಂದರು.
ಮುಸಲ್ಮಾನರ ತುಷ್ಟೀಕರಣಕ್ಕಾಗಿ ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸಬಾರದು. ಘಟನೆಯಲ್ಲಿ ದೌರ್ಜನ್ಯ ಎಸಗಿದ ಅಲ್ಪಸಂಖ್ಯಾತರ ಬದಲಾಗಿ ಹಿಂದೂ ಯುವಕರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ದೂರಿದರು.
ಸಂಸದ ರಾಘವೇಂದ್ರ ಮಾತನಾಡಿ, ಅನ್ನ ಬೆಂದಿದೆಯೋ ಎಂದು ನೋಡಲು ಒಂದು ಅಗಳು ಮುಟ್ಟಿ ನೋಡಿದರೆ ಸಾಕು. ಈ ವೇದಿಕೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಒಂದೇ ಧರ್ಮದ ಸಹಕಾರದೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಪಿತ್ಥ ನೆತ್ತಿಗೇರಿದ್ದರೆ ಜನ ಮುಂದೆ ತಕ್ಕ ಪಾಠ ಕಲಿಸುತ್ತಾರೆ. ಅಬ್ದುಲ್ ಕಲಾಂರಂತಹ ಅನೇಕ ಮುಸಲ್ಮಾನ ನಾಯಕರನ್ನು ಗೌರವಿಸಿದ ದೇಶ ಇದರು. ವಿದ್ಯೆ ಕಲಿಸಿದ ಶಿಕ್ಷಕಿಯನ್ನು ಅವರ ಶಿಷ್ಯರೇ ತಳಿಸುವ ಮಟ್ಟಕ್ಕೆ ಹಲ್ಕಟ್‍ಗಿರಿ ತೋರಿಸಿದ್ದಾರಲ್ಲ. ತಾಯಂದಿರ ಮೇಲೆ ಕೈ ಮಾಡುವ ಈ ದುಷ್ಟತನವನ್ನು ಯಾವ ಧರ್ಮ ಹೇಳಿಕೊಟ್ಟಿದೆ. ಮುಂದೆ ನಿಮ್ಮ ಕಾಂಗ್ರೆಸ್‍ನ ಮಕ್ಕಳು ಮರಿ ಮಕ್ಕಳೇ ನಿಮ್ಮ ಈ ತುಷ್ಟೀಕರಣ ನೀತಿಯನ್ನು ಕ್ಷಮಿಸುವುದಿಲ್ಲ. ಘಟನೆ ಸಣ್ಣದು ಎಂದು ಗೃಹ ಸಚಿವರು ಹೇಳುತ್ತಾರೆ. ಆದರೆ ಆ ಘಟನೆಗೆ ಕಾರಣರಾದವರ ದೂರಾಲೋಚನೆ ದೊಡ್ಡದಿದೆ. ಅದು ಉಗ್ರವಾದದ ಕರಿ ನೆರಳನ್ನು ಬಿಂಬಿಸುತ್ತಾ ಇದೆ. ಬಿಜೆಪಿ ಎಂದೂ ಮುಸ್ಲಿಂ ವಿರೋಧಿಯಲ್ಲ. ತ್ರಿಬಲ್ ತಲಾಖ್ ರದ್ದುಪಡಿಸಿ ಮುಸ್ಲಿಂ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿದ ಪಕ್ಷ ನಮ್ಮದು. ಉಚಿತ ಸೈಕಲ್ ಭಾಗ್ಯ ಲಕ್ಷ್ಮಿ ಮತ್ತು ಕಿಸಾನ್ ಸಮ್ಮಾನ್ ಯೋಜನೆ ಎಲ್ಲವನ್ನೂ ಮುಸ್ಲಿಂ ಬಾಂಧವರು ಕೂಡ ಪಡೆದಿದ್ದಾರೆ ಎಂಬುದು ನೆನಪಿರಲಿ.ಇಲ್ಲೆ ಬೆಳೆದು, ಇಲ್ಲಿಯ ಅನ್ನ ತಿಂದು ಹೆತ್ತ ತಾಯಿಯನ್ನು ಹೊಡೆಯುವ ಷಡ್ಯಂತ್ರ ಮಾಡುತ್ತಿದ್ದಾರೆ. ನ್ಯಾಯಾಂಗ ತನಿಖೆ ಆಗಲಿ. ಯಎಪಿಐ ಅಡಿಯಲ್ಲಿ ಈ ಕೇಸನ್ನು ದಾಖಲಿಸಬೇಕು. ರಾಷ್ಟ್ರ ರಕ್ಷಣೆ ಪ್ರಶ್ನೆ ಬಂದಾಗ ನಾವೆಲ್ಲ ಒಂದಾಗಬೇಕು ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ನಮ್ಮ ಸಂಸ್ಕøತಿ, ಪರಂಪರೆ ವೈಚಾರಿಕತೆ, ಭಾರತೀಯತೆಯೇ ನಮ್ಮ ಹಿಂದುತ್ವದ ನೆಲೆಗಟ್ಟು. ಕಾಶ್ಮೀರ ಭಾರತದ ಮುಕುಟ ಎಂದು ಅದನ್ನು ಭಾರತದಲ್ಲಿಉಳಿಸಲು ಬಲಿದಾನ ಮಾಡಿ ಜನಸಂಘ ಕಟ್ಟಿ ರಾಷ್ಟ್ರೀಯತೆಯ ಪರವಾಗಿ ಹೋರಾಟ ಮಾಡಿದ ಪಕ್ಷ ನಮ್ಮದು. ಮುಸ್ಲಿಂ ತುಷ್ಟೀಕರಣ ನೀತಿಯನ್ನು ಕಾಂಗ್ರೆಸ್ ಮಾಡುತ್ತಾ ಬಂದಿದ್ದು, ಅದಕ್ಕಾಗಿಯೇ ಮೋದಿಯನ್ನು ದೇಶದ ಜನ ಮೂರನೇ ಬಾರಿಗೆ ಪ್ರಧಾನಿ ಮಾಡಲು ಹೊರಟಿದ್ದಾರೆ. ಶಿವಮೊಗ್ಗವನ್ನು ಆತಂಕವಾದದ ಸ್ವರ್ಗ ಮಾಡಲು ಕೆಲವರು ಹೊರಟಿದ್ದರು. ಕುಕ್ಕರ್ ಬಾಂಬರ್ ಕೂಡ ಶಿವಮೊಗ್ಗದವನೇ. ಕಾಂಗ್ರೆಸ್‍ನವರಿಗೆ ಹಿಂದುತ್ವ ಬೇಡ ಎಂದಾದಲ್ಲಿ ಮುಸಲ್ಮಾನರಾಗಿ ಎಲ್ಲರೂ ಸುನ್ನತೆ ಮಾಡಿಸಿಕೊಳ್ಳಿ. ಪಾಕೀಸ್ಥಾನ ಬೇಕು ಎನ್ನುವ ಮನಸ್ಥಿತಿಯಲ್ಲಿ ಕಾಂಗ್ರೆಸ್ಸಿಗರಿದ್ದಾರೆ. ಸರಣಿ ಕೊಲೆಗಳಾದರೂ ಕೂಡ ಹಿಂದೂಗಳು ಒಂದೇ ಒಂದು ಮುಸಲ್ಮಾನನ ಕೊಲೆ ಮಾಡಲಿಲ್ಲ ಎಂದರೆ ಅದು ಹಿಂದೂ ಸಹಿಷ್ಣುತೆ. ಪಿಎಫ್‍ಐ ಮತ್ತು ಎಸ್‍ಡಿಪಿಐ ರಾಗಿಗುಡ್ಡ ಗಲಭೆಯ ಹಿಂದೆ ಇದೆ ಎಂದು ಪೊಲೀಸ್ ಅಧಿಕಾರಿಗಳೇ ಹೇಳಿದ್ದಾರೆ,. ಹಿಂದೂಗಳು ತಾಳ್ಮೆ ಕಳೆದುಕೊಳ್ಳದಂತೆ ಎಚ್ಚರವಹಿಸಿ ಎಂದರು.
ಮಾಜಿ ಸಚಿವ ಹಾಲಪ್ಪ ಮಾತನಾಡಿ, ಡಿಸಿ, ಎಸ್‍ಪಿ ದಕ್ಷ ಅಧಿಕಾರಿಗಳಿರಬಹುದು. ಆದರೆ ನಿಮ್ಮ ಕೈಗೆ ಕೋವಿ ಮತ್ತು ಕೋಲನ್ನು ಕೊಟ್ಟಿರುವುದು ಸಂವಿಧಾನದ ರಕ್ಷಣೆಗಾಗಿ. ಸರ್ಕಾರದ ಕೈಗೊಂಬೆಯಾಗಲಲ್ಲ. ನಿಮ್ಮ ಅಧಿಕಾರವನ್ನು ಸರಿಯಾಗಿ ಬಳಸಿಕೊಳ್ಳಿ ಎಂದರು.
ಶಾಸಕಿ ಭಾರತೀ ಶೆಟ್ಟಿ ಮಾತನಾಡಿ, ಅಂಗೈ ಹುಣ್ಣಿಗೆ ಕನ್ನಡಿ ಬೇಡ. ಸಣ್ಣ ಮಕ್ಕಳ ಕೈಲಿ ಧ್ವಜ, ತರುಣರ ಕೈಲಿ ಖಡ್ಗ ಕೊಟ್ಟು ಬ್ರಿಟಿಷರ ತರಹ ಒಡೆದು ಆಳುವ ನೀತಿ ಮಾಡಿ ಗಲಭೆ ಎಬ್ಬಿಸಿ ಹಮಾಸ್ ಉಗ್ರರನ್ನು ಮಾಡಲು ಹೊರಟಿದ್ದೀರಿ. ನೂರು ಜನ್ಮ ಎತ್ತಿದರೂ ಹಿಂದೂ ಧರ್ಮ ನಾಶ ಮಾಡಲು ಆಗುವುದಿಲ್ಲ ಎಂದರು.

ಬಾಕ್ಸ್:

ಸಿದ್ದರಾಮಯ್ಯನವರೇ ನಿಮ್ಮ ದೇಹದಲ್ಲಿ ಹಸಿರು ರಕ್ತ ಇದೆಯೋ ಅಥವಾ ಹಿಂದೂ ರಕ್ತ ಹರಿಯುತ್ತಿದೆಯೋ ಎಂಬುದನ್ನು ತೀರ್ಮಾನ ಮಾಡಬೇಕಾಗಿದೆ. ಯಾಕೆಂದರೆ ಅಖಂಡ ಭಾರತಕ್ಕಾಗಿ ಪ್ರಾಣ ತೆತ್ತ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಸ್ವರ್ಗದಲ್ಲಿದ್ದಾರೆ. ನಿಮ್ಮ ವರ್ತನೆ ಅವರಿಗೆ ಶಾಂತಿ ತರುವುದಿಲ್ಲ. ಎಲ್ಲಿತನಕ ಹಸಿರು ಬಣ್ಣ ಬಿಸಾಕಿ ಕೇಸರ ಬಣ್ಣ ಬರುತ್ತದೆಯೋ ಅಲ್ಲಿವರೆಗೆ ಈ ಹೋರಾಟ ನಡೆಯುತ್ತದೆ. ಕೇಸರಿ ಬೇಕೋ ಹಸಿರು ಬೇಕೋ ನೀವೇ ಆರಿಸಿಕೊಳ್ಳಿ.
ಪ್ರಧಾನಿ ಮೋದಿಯವರು ಏಕರೂಪ ನಾಗರಿಕ ಸಂಹಿತೆ ತರುತ್ತೇವೆ ಎಂದಾಕ್ಷಣ ಮುಸಲ್ಮಾನರಿಗಿಂತ ಮೊದಲೇ ನೀವು ಬಾಯಿ ಬಡಿದುಕೊಳ್ಳುತ್ತಿದ್ದೀರಿ. ಹಮ್ ದೋ ಹಮಾರೇ ದೋ ಎನ್ನುವುದು ಮೋದಿ ಪಾಲಿಸಿ. ಹಮ್ ಪಾಂಚ್ ಹಮಾರಾ ಪಚ್ಚೀಸ್ ಆಗುವುದಕ್ಕೆ ಮೋದಿ ಬಿಡುವುದಿಲ್ಲ. ಕಾನೂನನ್ನು ತಂದೇ ತರುತ್ತಾರೆ. ಯಶಸ್ವೀ ಹಿಂದೂ ಮಹಾಸಭಾ ಗಣಪತಿ ಉತ್ಸವದ ಶಾಂತಿಯುತ ಮೆರವಣಿಗೆ ನೀವು ನೋಡಿದ್ದೀರಿ.ನಮ್ಮ ಹಿಂದೂಗಳು ಎಲ್ಲರೂ ಸೇರಿದರೆ, ಉಫ್ ಎಂದು ಊದಿದರೆ ನೀವು ತುಂಗೆಯ ಪಾಲಾಗುತ್ತೀರೆ. ನಮ್ಮ ಜೊತೆ ಭಾರತ್ ಮಾತಾಕಿ ಜೈ. ವಂದೇ ಮಾತರಂ ಹೇಳಲೇಬೇಕು.ಇಲ್ಲವಾದಲ್ಲಿ ನೀವು ನಾಮರ್ದ್‍ಗಳು ಎಂದು ಭಾವಿಸಬೇಕಾಗುತ್ತದೆ. ಬಡವರಿಗೆ ಟೋಪಿ ಹಾಕುವ ಗ್ಯಾರಂಟಿ ನೀಡಿದವರು ನೀವು. ಹಿಂದುತ್ವಕ್ಕಾಗಿ ದೇಶದ ರಕ್ಷಣೆಗಾಗಿ ಮತ್ತೆ ಎಂಪಿ ಚುನಾವಣೆಯಲ್ಲಿ ರಾಘವೇಂದ್ರ ಮತ್ತು ಮೋದಿ ಗೆದ್ದು ಬರುತ್ತಾರೆ. ಪ್ರತಿ ಬೂತ್‍ನಲ್ಲಿ ರಾಜ್ಯದ ಜನ ಹಿಂದೂ ವಿರೋಧಿಗಳಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕರಾದ ಡಿ.ಎಸ್. ಅರುಣ್, ಪ್ರಮುಖರಾದ ಗಿರೀಶ್ ಪಟೇಲ್, ಸಿದ್ದರಾಮಣ್ಣ, ಮೋನಪ್ಪ ಭಂಡಾರಿ, ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ನಗರಾಧ್ಯಕ್ಷ ಜಗದೀಶ್, ಕೆ.ಈ. ಕಾಂತೇಶ್, ಹೊನ್ನಟ್ಟಿ ಹೊಸೂರು ಸತೀಶ್, ತಮ್ಮಡಿಹಳ್ಳಿ ನಾಗರಾಜ್ ಮತ್ತಿತರರಿದ್ದರು.

Related posts

ಕಷ್ಟದಲ್ಲಿರುವವರ ಸೇವೆ ಮಾಡುವುದು ಪುಣ್ಯದ ಕಾರ್ಯ-ಪೂರ್ಣಿಮಾ ಸುನೀಲ್ 

ತಪ್ಪಿತಸ್ಥರನ್ನು ಗಲ್ಲಿಗೇರಿಸಿ: ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಬಾಲಾಜಿ

ದೇಶಪ್ರೇಮ ಬೆಳೆಸುವ ಕಾರ್ಯಕ್ರಮ ಶ್ಲಾಘನೀಯ-ಉದ್ಯಮಿ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ