ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮನೋವಿಕಾಸಕ್ಕೆ ಗೆಲ್ಲಬೇಕು ಮನೋವಿಕಾರ: ಪಂಡಿತಾರಾಧ್ಯ ಶ್ರೀ

ಸಾಣೇಹಳ್ಳಿ: `ಮನೋವಿಕಾರಗಳನ್ನು ಗೆದ್ದರೆ ಮನೋವಿಕಾಸ ಆಗಲು ಸಾಧ್ಯ. ಓಡುವ ಮನಸ್ಸನ್ನು ಕಟ್ಟಿ ಹಾಕಿದರೆ ಮೃಗತ್ವದಿಂದ ಮಾನವತ್ವದ ಕಡೆಗೆ ಸಾಗಬಹುದು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಏರ್ಪಡಿಸಿರುವ ಚಿಂತನ ಕಾರ್ಯಕ್ರಮದ ಎರಡನೆಯ ದಿನದ ಶುಕ್ರವಾರ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
`ದೇಹವನ್ನು ಬಿಟ್ಟು ಮನಸ್ಸು ಹೋದಾಗ ಮನುಷ್ಯ ಮೃಗವಾಗುತ್ತಾನೆ, ಕೋತಿ ಆಗುತ್ತಾನೆ, ಗೋಸುಂಬೆ ಆಗುತ್ತಾನೆ. ಹೀಗಾಗಬಾರದು ಎಂದರೆ ನಮ್ಮ ಮನಸ್ಸನ್ನು ಹತೋಟಿಯಲ್ಲಿ ತಂದುಕೊಳ್ಳಬೇಕು. ದೇಹವನ್ನು ವ್ಯಾಯಾಮದ ಮೂಲಕ ಹತೋಟಿಗೆ ತರಬಹುದು’ ಎಂದು ಹೇಳಿದರು.
‘ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರೆ ಶರಣರಾಗುತ್ತೀರಿ, ದೇವರಾಗುತ್ತೀರಿ. ಲೋಕದ ಚೇಷ್ಟೆಗಳಿಗೆ ಒಳಗಾದ ಶರಣರು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಮಹಾಮಾನವರಾದರು. ಅಂಗುಲಿಮಾಲಾ ಎದುರು ಬುದ್ಧ ಬಂದಾಗ ನಿಲ್ಲು ಎನ್ನುತ್ತಾನೆ. ನಾನು ನಿಂತೇ ಇದ್ದೇನೆ. ನೀನು ನಿಲ್ಲು ಎಂದು ಬುದ್ಧ ಹೇಳುತ್ತಾರೆ. . ಹಾಗಾಗಿ ದೇಹವನ್ನು ನಿಯಂತ್ರಿಸುವುದಷ್ಟೇ ಮನಸ್ಸನ್ನೂ ನಿಯಂತ್ರಿಸುವುದು ಮುಖ್ಯವಾಗುತ್ತದೆ’ ಎಂದು ತಿಳಿವಳಿಕೆ ಹೇಳಿದರು.
ಬುದ್ಧನ ಹೇಳಿದಂತೆ ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ಗೆಲ್ಲುವುದು ಮುಖ್ಯ. ಆ ಯಶಸ್ಸನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಪ್ರಾಣಿಗಳ ಮೇಲೆ ಹತೋಟಿಯಲ್ಲಿಟ್ಟುಕೊಳ್ಳುವ ನಾವು, ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದಿಲ್ಲ. ಮನಸ್ಸಿಗೆ ಗುಲಾಮರಾದರೆ ಸೋಲುತ್ತೇವೆ, ವಿವೇಕದ ದಾರಿಯಲ್ಲಿ ಹೋದರೆ ಗೆಲ್ಲಲು ಸಾಧ್ಯ. ಮನಸ್ಸಿನ ಕೇಂದ್ರೀಕರಣಕ್ಕಾಗಿ ದೇವಾಲಯಗಳಿಗೆ ಹೋಗುತ್ತೇವೆವಾದರೂ ಅಲ್ಲಿ ನೆಮ್ಮದಿಯಿಂದ ಇರುವುದಿಲ್ಲ’ ಎಂದು ವಿವರಿಸಿದರು.
ಬೈಲೂರಿನ ನಿಷ್ಕಲ ಮಂಟಪ ಹಾಗೂ ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಗಿಡದಲ್ಲಿ ಆನಂದವಾಗಿ ನೋಡುತ್ತಿದ್ದರೆ ಪ್ರಕೃತಿ. ಇದನ್ನು ಕಿತ್ತುಕೊಂಡು ಸ್ವಾಮೀಜಿ ಪಾದದ ಬಳಿ ಇಲ್ಲವೆ ಲಿಂಗದ ಮೇಲೆ ಇಟ್ಟರೆ ಸಂಸ್ಕøತಿ. ಬಿಸಾಕಿದರೆ ವಿಕೃತಿಯಾಗುತ್ತದೆ. ವಿಕೃತಿಯ ಮನಸ್ಸು ಹೊಂದದೆ ಸಂಸ್ಕøತಿಯವಂತರಾಗಬೇಕು’ ಎಂದು ಸಲಹೆ ನೀಡಿದರು.
‘ನಿಮ್ಮ ಭವಿಷ್ಯ ಕಟ್ಟಲು ಪಂಡಿತಾರಾಧ್ಯ ಶ್ರೀಗಳು ಸಮಯ ವ್ಯಯಿಸುತ್ತಿದ್ದಾರೆ. ಪ್ರಾರ್ಥನೆ, ವಚನಗಳ ಗಾಯನ, ನಾಟಕಗಳನ್ನು ತೋರಿಸುವ ಮೂಲಕ ನಿಮ್ಮ ಉನ್ನತಿಗೆ ಶ್ರಮಿಸುತ್ತಿದ್ದರೆ. ಸಾರ್ಥಕಪಡಿಸಿಕೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಹೇಳಿ ನಂತರ ಜಿ.ಎಸ್.ಶಿವರುದ್ರಪ್ಪ ಅವರ ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು, ಮಣ್ಣಿನ ಗುಡಿಯೊಳಗೆ’ ಹಾಡು ಹಾಡಿದರು.
ಇದಕ್ಕೂ ಮೊದಲು ‘ಮನವ ಸಂತೈಸಿಕೊಳ್ಳಿ’ ವಚನ ಕುರಿತು ಶಿಕ್ಷಕಿ ಸುಧಾ ಅರುಣಕುಮಾರ್ ಮಾತನಾಡಿ, ತಮ್ಮನ್ನು ತಾವು ತಿದ್ದಿಕೊಳ್ಳದೆ ಇನ್ನೊಬ್ಬರನ್ನು ತಿದ್ದಲು ಹೊರಡುವುದು ಸರಿಯಲ್ಲ ಎಂದು ಬಸವಣ್ಣನವರು ವಚನದ ಮೂಲಕ ಹೇಳುತ್ತಾರೆ. ಇದು ಬಸವಾದಿ ಶರಣರ ಆಶಯ ಕೂಡಾ ಆಗಿತ್ತು ಎಂದರು.
ನಮ್ಮ ವ್ಯಕ್ತಿತ್ವ ವಿಕಸನ ಆಗಬೇಕಾದರೆ ಪಂಚೇಂದ್ರಿಯಗಳ ನಿಯಂತ್ರಣ ಅಗತ್ಯ. ಬಸವಣ್ಣನವರ ಇನ್ನೊಂದು ವಚನದಲ್ಲಿ ನಮ್ಮ ಮನಸು ಓತಿಕ್ಯಾತ ಹಾಗೆ. ಮಂಗÀಕ್ಕೆ ಮದ್ಯ ಕುಡಿಸಿ ಚೇಳನ್ನು ಬಿಟ್ಟರೆ ಹೇಗಾಗುತ್ತದೆ ಎನ್ನುವುದನ್ನು ಅರಿಯಬೇಕು ಅಂದರೆ ಮನಸ್ಸನ್ನು ನಿಯಂತ್ರಿಸಿಕೊಳ್ಳಬೇಕು ಎನ್ನುವುದು ಅವರ ನೀತಿಯಾಗಿತ್ತು ಎಂದು ಹೇಳಿದರು.
ಮನಸ್ಸನ್ನು ನಾಯಿಗೆ ಹೋಲಿಸುತ್ತಾರೆ ಬಸವಣ್ಣನವರು. ನಾಯಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿದರೂ ಅದಕ್ಕೆ ಅದರ ಪರಿಜ್ಞಾನ ಇರುವುದಿಲ್ಲ. ಹೀಗಾಗಿ ಹೊಲಸನ್ನು ಕಂಡ ಕೂಡಲೇ ಪಲ್ಲಕ್ಕಿಯಿಂದ ನೆಗೆಯುತ್ತದೆ. ಹೀಗೆ ನಾಯಿಯ ಗುಣವನ್ನು ಅಳವಡಿಸಿಕೊಳ್ಳಬಾರದು. ಪುಣ್ಯಕ್ಷೇತ್ರಗಳಿಗೆ ಹೋಗಿ ಮಲಿನವಾದ ನಮ್ಮ ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳುತ್ತೇವೆ ಎನ್ನುವುದು ಕಷ್ಟ. ಹಾಗೆಯೇ ನೀರಲ್ಲಿ ಮುಳುಗಿದರೂ ಶುದ್ಧವಾಗುತ್ತೇವೆ ಎನ್ನುವುದು ಅಸಾಧ್ಯ ಎಂದು ವಿವರಿಸಿದರು.
ಅಕ್ಕಮಹಾದೇವಿಯು ವಚನದಲ್ಲಿ ಹೇಳಿದಂತೆ ಸಮಚಿತ್ತ, ಸಮಪ್ರಜ್ಞೆ ಬೆಳೆಸಿಕೊಂಡರೆ ಸಾಧಿಸಲು ಸಾಧ್ಯ. ಗುರುವಿಲ್ಲದೆ ಬಿಲ್ವಿದ್ಯೆ ಕಲಿತ ಏಕಲವ್ಯನ ಹಾಗೆ ಸಾಧನೆಗೆ ಮುಂದಗಬೇಕು. ನಮಗೆ ಎಂಥಾ ಸಂಕಷ್ಟಗಳು ಬಂದರೂ ಹೆದರಬಾರದು, ಬೆದರಬಾರದು. ಒಳ್ಳೆಯ ಕೆಲಸಗಳನ್ನು ಮಾಡುತ್ತ ಸಾಗೋಣ ಎಂದರು.
ಎಚ್.ಎಸ್.ನಾಗರಾಜು ಹಾಗೂ ಜ್ಯೋತಿ ವಚನಗಳನ್ನು ಹಾಡಿದರು. ಮಲ್ಲಿಕಾಜುನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ನಾಟಕೋತ್ಸವದಲ್ಲಿ ಇಂದು (4.11.2023)
ವಿಚಾರ ಸಂಕಿರಣ: ಕಾಯಕ ಮತ್ತು ದಾಸೋಹ ತತ್ವಗಳ ಅಂತರ್ ಸಂಬಂಧ.
ಅಧ್ಯಕ್ಷತೆ: ಎಸ್.ಜಿ.ಸಿದ್ದರಾಮಯ್ಯ ವಿಷಯ: ಕಾಯಕತತ್ವ – ಡಾ.ರಾಜೇಂದ್ರ ಚೆನ್ನಿ. ದಾಸೋಹ ತತ್ವ- ಡಾ.ಎಂ.ಎಸ್.ಆಶಾದೇವಿ. ಅತಿಥಿಗಳು- ಚಿತ್ರದುರ್ಗದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ. ಉಪಸ್ಥಿತಿ- ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಸೈಯದ್ ಮೋಸಿನ್, ಎಚ್.ಶ್ರೀನಿವಾಸ್, ಎಸ್.ನಾಗಭೂಷಣ್, ಕೆ.ಸುರೇಶ್, ಇ.ನಿರ್ಮಲಾದೇವಿ. ಸ್ಥಳ: ಎಸ್.ಎಸ್.ಒಳಾಂಗಣ ರಂಗಮಂದಿರ. ಬೆಳಿಗ್ಗೆ 10.
ನಾಟಕ ಪ್ರದರ್ಶನ: ಮೋಳಿಗೆ ಮಾರಯ್ಯ. ರಚನೆ- ಪಂಡಿತಾರಾಧ್ಯ ಸ್ವಾಮೀಜಿ. ನಿರ್ದೇಶನ- ಆರ್.ಚಂದ್ರಮ್ಮ. ಅಭಿನಯ- ಶ್ರೀ ಗುರುಪಾದೇಶ್ವರ ಪ್ರೌಢಶಾಲೆ. ಅತಿಥಿ- ಬೆಂಗಳೂರು ನಗರ ಜಿಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ. ಸ್ಥಳ: ಎಸ್.ಎಸ್.ಒಳಾಂಗಣ ರಂಗಮಂದಿರ. ಮಧ್ಯಾಹ್ನ 2.30.
ನಾಟಕ ಪ್ರದರ್ಶನ: ಸಾನ್ನಿಧ್ಯ- ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ. ಉಪನ್ಯಾಸ: ಜಲವಿವಾದ – ನಿವೃತ್ತ ಐಪಿಎಸ್ ಅಧಿಕಾರಿ ಡಾ.ಸಿ.ಚಂದ್ರಶೇಖರ್. ಅತಿಥಿಗಳು- ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ರಂಗಕರ್ಮಿ ಎಸ್.ಎನ್.ಸೇತುರಾಮ್, ಸಿನಿಮಾ ನಿರ್ದೇಶಕ ರಾಜೇಂದ್ರಸಿಂಗ್ ಬಾಬು. ಕೃತಿ ಲೋಕಾರ್ಪಣೆ- ಭವದ ಅಗುಳಿ. ಲೇಖಕರು- ಸಂತೋಷ ಅಂಗಡಿ. ನಾಟಕ- ಶ್ರೀನಿವಾಸ ಕಥೆ ಆಧಾರಿತ ಬಾಸಿಂಗ ಬಲ. ರಚನೆ, ನಿರ್ದೇಶನ- ಝಾಕೀರ್ ನದಾಫ್. ಅಭಿನಯ- ಸವದತ್ತಿಯ ರಂಗ ಆರಾಧನಾ ಸಾಂಸ್ಕøತಿಕ ಸಂಘಟನೆ. ರಾತ್ರಿ 9.

Related posts

ಇಂದು-ನಾಳೆ ‘ಇಂಡಿಯಾ’ ಮೈತ್ರಿಕೂಟದ ಮೂರನೇ ಸಭೆ.

ಸಾಮಾಜಿಕ ಸ್ವಾಸ್ಥ್ಯವೇ ಧರ್ಮ ಮತ್ತು ಸಾಹಿತ್ಯದ ಆಶಯ-ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಮಹಾಸ್ವಾಮೀಜಿ

ಗಣಪತಿ ಮತ್ತು ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಒಟ್ಟಿಗೆ ಸೇರಿ ಆಚರಿಸೋಣ-ಶಾಸಕ ಎಸ್.ಎನ್. ಚನ್ನಬಸಪ್ಪ