ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ: ರಾಜ್ಯದ 28 ಕ್ಷೇತ್ರಗಳಿಗೆ ಸಚಿವರನ್ನ ‘ವೀಕ್ಷಕ’ರಾಗಿ ನೇಮಿಸಿದ ಕಾಂಗ್ರೆಸ್: ದಕ್ಷಿಣ ಕನ್ನಡಕ್ಕೆ ಮಧು ಬಂಗಾರಪ್ಪ ನೇಮಕ.

ಬೆಂಗಳೂರು:  ಲೋಕಸಭಾ ಚುನಾವಣೆಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಇದೀಗ  ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಸಚಿವರನ್ನ ವೀಕ್ಷಕರಾಗಿ ನೇಮಿಸಿದೆ.

28 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷದ ಮುಖಂಡರನ್ನು ಸಂಪರ್ಕಿಸಿ, ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ವರದಿ ನೀಡಲು 28 ಲೋಕಸಭಾ ಕ್ಷೇತ್ರಗಳಿಗೆ 28 ಮಂದಿ ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.  ಮುಂಬರುವಂತ ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳಲ್ಲಿ ಸಂಚರಿಸಿ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ, ವರದಿ ನೀಡುವಂತ ಜವಾಬ್ದಾರಿಯನ್ನು 28 ಸಚಿವರಿಗೆ ವಹಿಸಿದ್ದಾರೆ.

28 ಲೋಕಸಭೆ ಕ್ಷೇತ್ರ ಹಾಗೂ ವೀಕ್ಷಕರ ಪಟ್ಟಿ ಈ ಕೆಳಕಂತಿದೆ.

ಬಾಗಲಕೋಟೆ- ಪ್ರಿಯಾಂಕ ಖರ್ಗೆ

ಬೆಂಗಳೂರು ಕೇಂದ್ರ -ಎನ್.ಎಸ್. ಬೋಸರಾಜ್

ಬೆಂಗಳೂರು ಉತ್ತರ- ಡಾ.ಜಿ. ಪರ ಮೇಶ್ವರ್

ಬೆಂಗಳೂರು ಗ್ರಾಮಾಂತರ- ಕೆ. ವೆಂಕಟೇಶ್

ಬೆಂಗಳೂರು ದಕ್ಷಿಣ – ಡಾ. ಶರಣ್ ಪ್ರಕಾಶ್ ಪಾಟೀಲ್

ಬೆಳಗಾವಿ- ಶಿವರಾಜ್ ಎಂ. ತಂಗಡಗಿ

ಕಲಬುರಗಿ- ಬಿ. ನಾಗೇಂದ್ರ

ಬೀದರ್‌ – ಸಂತೋಷ್ ಎಸ್. ಲಾಡ್

ವಿಜಯಪುರ- ಸತೀಶ್ ಜಾರಕಿಹೊಳಿ

ಚಾಮರಾಜನಗರ- ದಿನೇಶ್ ಗುಂಡೂರಾವ್

ಚಿಕ್ಕಬಳ್ಳಾಪುರ- ಜಮೀರ್ ಅಹಮದ್‌

ಚಿಕ್ಕೋಡಿ- ಡಿ. ಸುಧಾಕರ್

ಚಿತ್ರದುರ್ಗ- ಡಾ.ಎಚ್.ಸಿ. ಮಹದೇವಪ್ಪ

ದಕ್ಷಿಣ ಕನ್ನಡ- ಮಧು ಬಂಗಾರಪ್ಪ

ದಾವಣಗೆರೆ- ಈಶ್ವರ ಖಂಡ್ರೆ

ಧಾರವಾಡ- ಲಕ್ಷ್ಮೀ ಹೆಬ್ಬಾಳ‌

ಬಳ್ಳಾರಿ- ಶಿವಾನಂದ ಪಾಟೀಲ್

ಹಾಸನ-ಚೆಲುವರಾಯಸ್ವಾಮಿ

ಹಾವೇರಿ- ಎಸ್‌. ಎಸ್. ಮಲ್ಲಿಕಾರ್ಜುನ

ಕೋಲಾರ- ರಾಮಲಿಂಗಾರೆಡ್ಡಿ

ಕೊಪ್ಪಳ- ಆರ್.ಬಿ. ತಿಮ್ಮಾಪುರ

ಮಂಡ್ಯ – ಡಾ.ಎಂ.ಸಿ. ಸುಧಾಕರ್

ಮೈಸೂರು- ಬಿ.ಎಸ್. ಸುರೇಶ್

ರಾಯಚೂರು- ಕೆ.ಎಚ್.ಮುನಿಯಪ್ಪ

ಶಿವಮೊಗ್ಗ- ಕೆ.ಎನ್. ರಾಜಣ್ಣ

ತುಮಕೂರು- ಕೃಷ್ಣಬೈರೇಗೌಡ

ಉಡುಪಿ-ಚಿಕ್ಕಮಗಳೂರು- ಮಂಕಾಳ ವೈದ್ಯ

ಉತ್ತರ ಕನ್ನಡ- ಎಚ್.ಕೆ. ಪಾಟೀಲ್

 

Related posts

ದುರ್ಗಿಗುಡಿ ಕನ್ನಡ ಸಂಘದಿಂದ ಕನ್ನಡ ರಾಜ್ಯೋತ್ಸವ.

ಆದಿತ್ಯ L-1​​​​ ನೌಕೆ ಉಡಾವಣೆ ಹಿನ್ನೆಲೆ: ಇಸ್ರೋಗೆ ಶುಭಕೋರಿದ ಡಿಸಿಎಂ ಡಿಕೆ ಶಿವಕುಮಾರ್.

ಸರ್ಕಾರಿ ನೇಮಕಾತಿ ಪರೀಕ್ಷೆ ಅಕ್ರಮ ತಡೆಗೆ ಪ್ರತ್ಯೇಕ ಕಾಯ್ದೆ ಜಾರಿಗೆ ಮುಂದಾದ ಸರ್ಕಾರ.