ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ತೀರ್ಥಹಳ್ಳಿ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಎಂ.ನವೀನ್ ಕುಮಾರ್

ಶಿವಮೊಗ್ಗ : ನವೆಂಬರ್ 29 ರಂದು ನಡೆಯಲಿರುವ ತೀರ್ಥಹಳ್ಳಿ ತಾಲ್ಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಎಂ.ನವೀನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಗುರುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಥಹಳ್ಳಿ ತಾಲ್ಲೂಕು ಕಸಾಪ ಕಾರ್ಯಕಾರಿ ಸಮಿತಿ ಸೂಚಿಸಿದ ಸಾಹಿತ್ಯ ಸಾಧಕರ ನಾಲ್ಕು ಹೆಸರುಗಳಲ್ಲಿ ಅಂತಿಮವಾಗಿ ಎಂ.ನವೀನ್ ಕುಮಾರ್ ಅವರ ಹೆಸರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಯಾವುದೇ ಅನುದಾನ ನೀಡುತ್ತಿಲ್ಲ. ಕಳೆದ ವರ್ಷ ಸಾಗರ ಮತ್ತು ಭದ್ರಾವತಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕು ಯಾವುದೇ ಅನುದಾನ ಬಿಡುಗಡೆಯಾಗಲಿಲ್ಲ. ಜನರ ಸಹಕಾರದಿಂದಲೇ ಕ್ರೀಯಾಶೀಲವಾಗಿ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷರಾದ ಡಿ.ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಶಿವಮೊಗ್ಗ ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ತೀರ್ಥಹಳ್ಳಿ ಅಧ್ಯಕ್ಷರಾದ ಟಿ.ಕೆ. ರಮೇಶ್ ಶೆಟ್ಟಿ, ಸಾಗರದ ವಿ.ಟಿ. ಸ್ವಾಮಿ, ಹೊಸನಗರದ ತ.ಮ. ನರಸಿಂಹ, ಜಿಲ್ಲಾ ಕಾರ್ಯದರ್ಶಿ ಡಿ. ಗಣೇಶ್, ಬಿ. ಟಿ. ಅಂಬಿಕಾ, ಬಿ.ಡಿ. ರವಿಕುಮಾರ್, ಆರ್.ಎಂ. ಧರ್ಮಕುಮಾರ್, ಶ್ರೀನಿವಾಸ ನಗಲಾಪುರ, ಭೈರಾಪುರ ಶಿವಪ್ಪಗೌಡ, ಎಂ. ಕೆ. ವೆಂಕಟೇಶ್, ಲಲಿತಮ್ಮ, ದೇವಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts

ಕರಡು ಮತದಾರರ ಪಟ್ಟಿ ಪ್ರಕಟ : ಆಕ್ಷೇಪಣೆ ಸಲ್ಲಿಕೆಗೆ ಅವಧಿ ನಿಗದಿ

ಇಸ್ರೇಲ್-ಹಮಾಸ್ ಸಂಘರ್ಷ ಅಂತ್ಯಕ್ಕೆ ನೆರವಾಗಲು ರಷ್ಯಾ ಸಿದ್ಧ ಎಂದ ಪುಟಿನ್

ರಾಜ್ಯದಲ್ಲಿ ವಿದ್ಯುತ್ ಕೊರತೆ ನಿಜ: 5 ಗಂಟೆ ತ್ರಿಪೇಸ್ ವಿದ್ಯುತ್ ಪೂರೈಸಲು ಸೂಚನೆ- ಸಿಎಂ ಸಿದ್ಧರಾಮಯ್ಯ