ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮದ್ಯದ ಬೆಲೆ ಹೆಚ್ಚು: ಗೋವಾದಲ್ಲಿ ಅಗ್ಗ..

ಬೆಂಗಳೂರು: ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮದ್ಯದ ಬೆಲೆ ಹೆಚ್ಚಾಗಿದ್ದು,  ಗೋವಾದಲ್ಲಿ ಮಾತ್ರ ಮದ್ಯದ ಬೆಲೆ ಅಗ್ಗವಾಗಿದೆ.

ಹೌದು ಮದ್ಯದ ಬೆಲೆಯಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಹಲವಾರು ಪ್ರಯಾಣಿಕರಿಗೆ ಗೋವಾ ತನ್ನ ಕಡಲತೀರಗಳ ಬಗ್ಗೆ ಮಾತ್ರವಲ್ಲದೆ ಅಗ್ಗದ ಮದ್ಯದ ಮಾರಾಟದಿಂದಲೂ ಆಕರ್ಷಿಸುತ್ತದೆ. ನಿತ್ಯ ನೂರಾರು ಪ್ರಯಾಣಿಕರನ್ನು ಸ್ವಾಗತಿಸುವ ಈ ರಾಜ್ಯ ಭಾರತದಲ್ಲಿ ಅತ್ಯಂತ ಕಡಿಮೆ ಮದ್ಯದ ಮೇಲಿನ ತೆರಿಗೆ ದರವನ್ನು ಹೊಂದಿದೆ. ಆದರೆ ಕರ್ನಾಟಕ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ. ಇದು ದೇಶದ ದೊಡ್ಡ ಮಾರುಕಟ್ಟೆಗಳಲ್ಲಿ ಅತಿ ಹೆಚ್ಚು ತೆರಿಗೆಯನ್ನು ಹೊಂದಿದೆ.

ಭಾರತದ ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯಗಳ ಮದ್ಯದ ದರ ಪಟ್ಟಿಯನ್ನು ಅಂದಾಜಿಸಿದೆ. ಇದರ ಪ್ರಕಾರ ವಿಸ್ಕಿ, ರಮ್, ವೋಡ್ಕಾ ಮತ್ತು ಜಿನ್ ಗೋವಾದಲ್ಲಿ 100 ರೂಪಾಯಿಯಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನೇ ದೆಹಲಿಯಲ್ಲಿ 134 ರೂಪಾಯಿಗೆ ಮಾರಾಟ ಮಾಡಲಾದರೆ ಕರ್ನಾಟಕದಲ್ಲಿ ಇದರ ಬೆಲೆ 513 ರೂಪಾಯಿ ಆಗಿದೆ ಎಂದು ಉದ್ಯಮ ಸಂಸ್ಥೆಯು TOI ವರದಿ ಮಾಡಿದೆ.

ಅಂದರೆ ಇಲ್ಲಿ ಗೋವಾದ ಬೆಲೆಯನ್ನು ಕರ್ನಾಟಕಕ್ಕೆ ಹೋಲಿಸಿದರೆ ನಾಲ್ಕು ನೂರಕ್ಕೂ ಹೆಚ್ಚು ಬೆಲೆಯ ವ್ಯತ್ಯಾಸವಾಗುತ್ತದೆ. ಇನ್ನೂ ತೆಲಂಗಾಣದಲ್ಲಿ ಇದರ ಬೆಲೆ 246 ರೂ, ಮಹಾರಾಷ್ಟ್ರದಲ್ಲಿ 226 ರೂ, ರಾಜಸ್ಥಾನದಲ್ಲಿ 213, ಉತ್ತರಪ್ರದೇಶ 197 ಮತ್ತು ಹರಿಯಾಣದಲ್ಲಿ ಇದರ ಬೆಲೆ 147 ರೂಪಾಯಿ ಇದೆ.

ಮದ್ಯದ ಬೆಲೆಯಲ್ಲಿ ತೆಲಂಗಾಣ ಎರಡನೇ ಸ್ಥಾನದಲ್ಲಿದೆ. ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಎಂಆರ್ಪಿ (MRP) (ಮ್ಯಾಕ್ಸಿಮಮ್ ರೀಟೇಲ್ ಪ್ರೈಸ್) ಮೇಲಿನ ತೆರಿಗೆ ಕೂಡ ಹೆಚ್ಚಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ (Alcohol) ನೈಜ ಬೆಲೆಗೆ ಶೇ 83 ತೆರಿಗೆ ವಿಧಿಸಲಾಗುತ್ತದೆ. ವರದಿಯೊಂದರ ಪ್ರಕಾರ, ಗೋವಾದಲ್ಲಿ 100 ರೂ. ಗೆ ಮಾರಾಟವಾಗುವ ಸ್ಪಿರಿಟ್ (ನಾನ್-ಬಿಯರ್) ಕರ್ನಾಟಕದಲ್ಲಿ ಸುಮಾರು 513 ರೂ.ಗೆ ಮಾರಾಟವಾಗುತ್ತದೆ.

ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಮದ್ಯದ ಬೆಲೆ ಹೆಚ್ಚಾಗುತ್ತಿದೆ. ದೇಶದ ಎಲ್ಲ ರಾಜ್ಯಗಳಿಗಿಂತ ಗೋವಾದಲ್ಲಿ ಅತಿ ಕಡಿಮೆ ಬೆಲೆಗೆ ಮದ್ಯ ಸಿಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಮೊದಲ ಬಜೆಟ್ನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಎಲ್ಲಾ 18 ಸ್ಲ್ಯಾಬ್ ಗಳ ಮೇಲೆ ಶೇ 20 ರಷ್ಟು ಮತ್ತು ಬಿಯರ್ ನ ಮೇಲೆ ಸುಂಕವನ್ನು ಶೇ 10 ತೆರಿಗೆ ಹೆಚ್ಚಿಸಿದ್ದಾರೆ. ಅಬಕಾರಿ ಇಲಾಖೆಯ ಗುರಿಯ ಆದಾಯ ಗುರಿಯನ್ನೂ 36,000 ರೂ. ಕೋಟಿಗೆ ಹೆಚ್ಚಿಸಲಾಗಿದೆ.

ಕರ್ನಾಟಕದ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಫೆಡರೇಶನ್ನ ಹೇಳಿಕೆಯ ಪ್ರಕಾರ ಆಗಸ್ಟ್ನ ಮೊದಲ ಎರಡು ವಾರಗಳಲ್ಲಿ ಮಾರಾಟ ಮತ್ತು ಆದಾಯ ಎರಡರಲ್ಲೂ ಗಣನೀಯ ಕುಸಿತ ಕಂಡಿದೆ. ಇದರಿಂದ ಸರ್ಕಾರದ ಯೋಜನೆಗಳಿಗೆ ಹೊಡೆತ ಬಿದ್ದಿದೆ.

ಆಗಸ್ಟ್ನ ಮೊದಲಾರ್ಧದಲ್ಲಿ ಐಎಮ್ಎಲ್ನ 21.87 ಲಕ್ಷ ಬಾಕ್ಸ್ಗಳು ಮಾರಾಟವಾಗಿವೆ. ಇದು ಆಗಸ್ಟ್ 2022 ರಲ್ಲಿ ಆಗಸ್ಟ್ ತಿಂಗಳಲ್ಲಿ ಮಾರವಾಟವಾದ ಮದ್ಯಕ್ಕಿಂತ ಶೇ 14.25 ರಷ್ಟು ಕಡಿಮೆಯಾಗಿದೆ. ಹೊಸ ಬೆಲೆ ಜುಲೈ 20 ರಿಂದ ಜಾರಿಗೆ ಬಂದಿದೆ. ಹೊಸ ಬೆಲೆ ಬಂದ ನಂತರ ಮದ್ಯಕ್ಕೆ ಬೇಡಿಕೆ ಕಡಿಮೆಯಾಗಿದೆ ಎಂದು ಸಂಘದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋವಾದಲ್ಲಿ ಮದ್ಯ ಅಗ್ಗ ಯಾಕೆ?

ಗೋವಾದಲ್ಲಿ ಬಿಯರ್ ಅಗ್ಗವಾಗಲು ಹಲವು ಕಾರಣಗಳಿವೆ. ಇದು ಬಿಯರ್ ಬೆಲೆಯನ್ನು ತುಂಬಾ ಕಡಿಮೆ ಮಾಡುತ್ತದೆ. ಇದಕ್ಕೆ ಕಾರಣ ಇಲ್ಲಿನ ತೆರಿಗೆ ವ್ಯವಸ್ಥೆ. ಗೋವಾದಲ್ಲಿ ತೆರಿಗೆ ಪದ್ಧತಿಯ ಪ್ರಕಾರ ಮದ್ಯದ ತೆರಿಗೆ ತುಂಬಾ ಕಡಿಮೆ. ಇದರಿಂದಾಗಿ ಇಲ್ಲಿ ಬಿಯರ್ ಬೆಲೆ ಬೇರೆ ಬೇರೆ ರಾಜ್ಯಗಳಿಗಿಂತ ತುಂಬಾ ಕಡಿಮೆಯಾಗಿದೆ.

ನಮ್ಮ ದೇಶದಲ್ಲಿ ಮದ್ಯ ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಮದ್ಯದ ಬೆಲೆಯನ್ನು ನಿರ್ಧರಿಸುವಲ್ಲಿ ರಾಜ್ಯ ಸರ್ಕಾರವು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಅಲ್ಲಿ ಬಿಯರ್ ಮೇಲಿನ ತೆರಿಗೆ ಶೇಕಡಾವಾರು ತೀರಾ ಕಡಿಮೆ. ಇದಲ್ಲದೇ ಗೋವಾದಲ್ಲಿ ಮದ್ಯ ಮಾರಾಟಕ್ಕೆ ಟೆಂಟರ್ ಪಡೆಯುವುದು ಕಷ್ಟದ ಕೆಲಸವೇನಲ್ಲ. ಹಾಗಾಗಿಯೇ ಇಲ್ಲಿ ಮದ್ಯದಂಗಡಿಗಳ ಸಂಖ್ಯೆ ಹೆಚ್ಚು. ಪೈಪೋಟಿಯೂ ಹೆಚ್ಚಿರುವುದರಿಂದ ಮದ್ಯದ ಬೆಲೆ ಕಡಿಮೆಯಾಗಿದೆ.

 

Related posts

ರಾಜ್ಯದಲ್ಲಿ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಕಡ್ಡಾಯ.

ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ 64,830 ಅಭ್ಯರ್ಥಿಗಳು ಪಾಸ್

ಶಿವಮೊಗ್ಗ ದಸರಾ: ಅ.16ರಿಂದ ಮಕ್ಕಳ ದಸರಾ ವತಿಯಿಂದ ವಿವಿಧ ಕಾರ್ಯಕ್ರಮ-ರೇಖಾ ರಂಗನಾಥ್