ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಚಿಕ್ಕ ಸೇವೆಯಾದರೂ ನಿರಂತರ ಸೇವೆಗಳಿಂದ ಸಮಾಜದ ಉನ್ನತಿ ಸಾಧ್ಯ: ಲಯನ್ ಅಧ್ಯಕ್ಷ ಶಿವಯೋಗಿ ಗೌಡ

ಶಿರಾಳಕೊಪ್ಪ: ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಶಿರಾಳಕೊಪ್ಪ ವತಿಯಿಂದ ದೇವಿಕೊಪ್ಪ ಮತ್ತು ಇಡುಕಿನ ಹೊಸಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಲಯನ್ಸ್ ವಿದ್ಯಾ ಮಿತ್ರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ವೆಟರ್ ನೀಡುವ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಲಯನ್ ಅಧ್ಯಕ್ಷ ಶಿವಯೋಗಿ ಗೌಡ ಮಾತನಾಡುತ್ತಾ ಇಂದು ಸರ್ಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿಯಲ್ಲಿದ್ದು, ಆ ಶಾಲೆಗಳಿಗೆ ಅವಶ್ಯಕತೆ ಇರುವ ಸಂಪನ್ಮೂಲಗಳನ್ನು ಕೊಡುವ ಮೂಲಕ ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ನೀಡಿ ಉಳಿವಿಗಾಗಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಅಭಿಪ್ರಾಯ ಪಟ್ಟರು.
ಖಾಸಗಿ ಶಾಲೆಯ ವಿದ್ಯಾರ್ಥಿಗಳಂತೆ ಸರ್ಕಾರಿ ಶಾಲೆಯ ಮಕ್ಕಳು ಸಮವಸ್ತ್ರ ಸ್ವೆಟರ್ ಗಳು , ಓದುಬರಹ ಕಲಿಯಲು ಕುರ್ಚಿ ಟೇಬಲ್ ಗಳನ್ನು ಗ್ರಾಮಸ್ಥರ ಸಹಕಾರದೊಂದಿಗೆ ನಮ್ಮ ಕ್ಲಬ್ ನೀಡಿದೆ. ಅವಶ್ಯಕತೆ ಇರುವವರ ಮುಖದಲ್ಲಿ ಮಂದಹಾಸ ಮೂಡಿಸುವುದು ಒಂದು ಸೇವೆ. ಚಿಕ್ಕ ಚಿಕ್ಕ ಸೇವೆಗಳಾದರೂ ನಿರಂತರ ಸೇವೆಗಳಿಂದ ಸಮಾಜದ ಉನ್ನತಿ ಸಾಧ್ಯ ಎಂಬುದು ನಮ್ಮ ಸಂಸ್ಥೆಯ ಅಭಿಪ್ರಾಯ ಎಂದರು.
ಎಲ್ಲಿ ಸಂಪನ್ಮೂಲಗಳ ಕೊರತೆ ಇದೆಯೋ, ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಲಯನ್ಸ್ ಇದೆ ಎಂದರು.
ದೇವಿ ಕೊಪ್ಪ  ಮತ್ತು ಇಡುಕ್ಕಿನ ಹೊಸಕೊಪ್ಪ ಗ್ರಾಮದ ಶಾಲೆಗಳಿಗೆ ನಲಿ-ಕಲಿ ಟೇಬಲ್ ಮತ್ತು ಕುರ್ಚಿಗಳು ಹಾಗೂ ಶಾಲೆಯಲ್ಲಿ ಓದುತ್ತಿರುವ ಸುಮಾರು 50 ಮಕ್ಕಳಿಗೆ ಸ್ವೆಟರ್ ವಿತರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಲಯನ್ಸ್ ಕ್ಲಬ್ ಶಿರಾಳಕೊಪ್ಪ ಈ ವರ್ಷ 300 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ವೆಟರ್ ಗಳನ್ನು ನೀಡುವ ಅತ್ಯುತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಇಂದು ಎರಡು ಶಾಲೆಗಳಲ್ಲಿ ವಿತರಣೆ ಮಾಡಿರುತ್ತೇವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರುಗಳು ಗ್ರಾಮಸ್ಥರು ಲಯನ್ಸ್ ನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಶಿಕ್ಷಕರ ದಿನಾಚರಣೆಯ ನಿಮಿತ್ತ ಶಾಲಾ ಶಿಕ್ಷಕರುಗಳನ್ನು ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

Related posts

ಟ್ವಿಟರ್’ ಬಳಕೆದಾರರಿಗೆ ಬಿಗ್ ಶಾಕ್: ಮಾಸಿಕ ಶುಲ್ಕ ವಿಧಿಸುವ ಬಗ್ಗೆ ಚಿಂತನೆ.

ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ.

ಮರ್ಯಾದಾ ಹತ್ಯೆ:  ಮಗಳನ್ನೆ ಕೊಂದು ಪೊಲೀಸ್ ಠಾಣೆಗೆ ಬಂದು ಶರಣಾದ ತಂದೆ.