ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಅವರೇ ಒರಿಜಿನಲ್ ಜೆಡಿಎಸ್ ಎಂದು ಬೋರ್ಡ್ ಹಾಕಿಕೊಳ್ಳಲಿ –ಸಿಎಂ ಇಬ್ರಾಹಿಂಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು

ಬೆಂಗಳೂರು:  ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ನಿನ್ನೆ ಸಭೆ ನಡೆಸಿ ಚರ್ಚಿಸಿದ ಬಳಿಕ ನಾನು ಪಕ್ಷ ಬಿಡಲ್ಲ. ಬಿಜೆಪಿ ಪರ ಹೋಗಲ್ಲ.  ಒರಿಜಿನಲ್ ಜೆಡಿಎಸ್ ನಮ್ಮದೇ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಖಡಕ್ ತಿರುಗೇಟು ನೀಡಿದ್ದಾರೆ.

ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ  ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಿಮಗೆ ಅದು ದೊಡ್ಡದಾಗಿ ಕಾಣುತ್ತಿದೆ. ಏನು ಸರಿ ಮಾಡಬೇಕೋ ಅದನ್ನು ನಾವು ಮಾಡುತ್ತೇವೆ.. ಅವರೇ ಒರಿಜಿನಲ್ ಎಂದು ಬೋರ್ಡ್ ಹಾಕಿಕೊಳ್ಳಲಿ. ಅವರೇ ಒರಿಜಿನಲ್ ಎಂದು ಬರೆದುಕೊಳ್ಳಲಿ ಎಂದು ಟಾಂಗ್ ನೀಡಿದರು.

ತಮ್ಮನ್ನು ಹಾಗೂ ನಿಖಿಲ್ ಕುಮಾರಸ್ವಾಮಿಯನ್ನ  ಪಕ್ಷದಿಂದ ಉಚ್ಚಾಟನೆ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್​ ಡಿ ಕುಮಾರಸ್ವಾಮಿ , ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ಅವರಿಗೆ ಬಿಟ್ಟಿದ್ದು.  ನಮಗೆ ಏನು ಮಾಡಬೇಕೊ, ಸರಿ ಮಾಡುತ್ತೇವೆ. ನೀವು ತಲೆಕೆಡಿಸಿಕೊಂಡು ಬಂದಿದ್ದೀರಾ? ಅವರು ಫ್ರೀ ಇದ್ದಾರೆ ಮಾತಾನಾಡಿಕೊಳ್ಳಲಿ. ನಮ್ಮ ಪಕ್ಷದಲ್ಲಿ ಇರುವ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

Related posts

ಭದ್ರಾ ಜಲಾಶಯದಿಂದ ನಾಲೆಗಳಿಗೆ ನಿರಂತರವಾಗಿ ನೀರು ಹರಿಸದಂತೆ ಆಗ್ರಹಿಸಿ ರೈತರ ಪ್ರತಿಭಟನೆ.

ದೇಶ ಕಂಡ ಅತ್ಯುತ್ತಮ ನ್ಯಾಯಧೀಶರು ಡಾ.ಶಿವರಾಜ್ ಪಾಟೀಲ್- ಭಾರತ ರತ್ನ ಡಾ.ಸಿ.ಎನ್.ಆರ್.ರಾವ್ ಬಣ್ಣನೆ

ಲೋಕಸಭೆ ಚುನಾವಣೆ  ನಮ್ಮ ಸವಾಲು: ಮತ್ತೊಮ್ಮೆ ಪ್ರಧಾನಿ ಮೋದಿ ಕೈ ಬಲಪಡಿಸಬೇಕಿದೆ- ಬಿವೈ ವಿಜಯೇಂದ್ರ.