ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪ್ರತಿಯೊಬ್ಬರಿಂದಲೂ ನಾಯಕತ್ವ ಗುಣದ ಕಲಿಕೆ-ಬಿ.ವಸಂತ ನಾಯಕ

ಶಿವಮೊಗ್ಗ: ಶಿಕ್ಷಣ ಎಂದರೆ ಪದವಿ ಪಡೆಯುವ ಜತೆಯಲ್ಲಿ ತಿಳವಳಿಕೆ, ಜ್ಞಾನ ವೃದ್ಧಿಸಿಕೊಳ್ಳುವುದು, ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯುವುದು ಎಂದು ಧನಂಜಯರಾವ್ ಗಾಡ್ಗಿಲ್ ಇನ್ಸ್ಟಿಟ್ಯೂಟ್ ಆಫ್ ಕೋಆಪರೇಟಿವ್ ಮ್ಯಾನೇಜ್‌ಮೆಂಟ್ ಮಾಜಿ ನಿರ್ದೇಶಕ ಬಿ.ವಸಂತ ನಾಯಕ ಹೇಳಿದರು.

ಶಿವಮೊಗ್ಗ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಯಕತ್ವದಲ್ಲಿ ಶಿಕ್ಷಣದ ಪಾತ್ರ ವಿಷಯ ಕುರಿತು ಮಾತನಾಡಿ, ಪ್ರತಿಯೊಬ್ಬರಿಂದ ನಾಯಕತ್ವ ಗುಣವನ್ನು ನಾವು ಕಲಿಯುತ್ತೇವೆ. ನಿರಂತರ ಕಲಿಕೆ ಹಾಗೂ ಸಮರ್ಥವಾಗಿ ನಿರ್ವಹಿಸುವ ಗುಣ ನಾಯಕತ್ವ ಮನೋಭಾವ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಶಿಕ್ಷಣ ತರಬೇತಿಗೂ ತುಂಬಾ ವ್ಯತ್ಯಾಸ ಇದ್ದು, ತರಬೇತಿಯಲ್ಲಿ ವಿವಿಧ ಕೌಶಲ್ಯಗಳನ್ನು ಕಲಿಯುತ್ತೇವೆ. ಆದರೆ ಮನೋಭಾವ ಸದೃಢವಾದರೆ, ಆತ್ಮವಿಶ್ವಾಸದಿಂದ ವರ್ತಿಸಿದಾಗ ನಾಯಕನಾಗಲು ಸಾಧ್ಯ. ದೂರದೃಷ್ಠಿ ಆಲೋಚನೆ ಇರಬೇಕು. ಪ್ರಭಾವ ಬೀರುವ ಶಕ್ತಿ ಇರಬೇಕು. ಸವಾಲುಗಳನ್ನು ಎದುರಿಸುವ ಸಾಮಾರ್ಥ್ಯ ಹೊಂದಿರಬೇಕು ಎಂದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ನಮ್ಮ ಸಂಸ್ಥೆಯು ಉತ್ತಮ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಕಲಿಸುವ ಆಶಯದಿಂದ ಉಪನ್ಯಾಸ ಶಿಬಿರಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಮಾಜಿ ಅಧ್ಯಕ್ಷ ಆದಿ ಮೂರ್ತಿ, ಮಂಜುನಾಥ್ ರಾವ್ ಕದಂ, ಪರಮೇಶ್ವರ್ ಶಿಗ್ಗಾವ್, ಚಂದ್ರಶೇಖರಯ್ಯ, ಶೇಷಗಿರಿ, ಗಣೇಶ್ ಪ್ರಕಾಶ್, ಶಾರದಾ ಮತ್ತಿತರರು ಉಪಸ್ಥಿತರಿದ್ದರು.

Related posts

ಹೊಸದಾಗಿ ಖರೀದಿಸಿರುವ ಆಟೋ ರಿಕ್ಷಾಗಳಿಗೆ ಪರವಾನಿಗೆ ನೀಡುವಂತೆ ಆಗ್ರಹ.

ಹಿರಿಯ ರಾಜಕಾರಣಿ , ಸಂಸದೀಯ ಪಟು, ಇಂದಿರಾಗೆ ಸ್ಥಾನ ಬಿಟ್ಟುಕೊಟ್ಟಿದ್ದ  ಡಿ.ಬಿ.ಚಂದ್ರೇಗೌಡ ಇನ್ನಿಲ್ಲ..ಗಣ್ಯರ ಕಂಬನಿ….

ಅಯೊಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಾಂಕ ಫಿಕ್ಸ್..